ETV Bharat / state

ಕಾನೂನು ಸಂಘರ್ಷಕ್ಕೊಳಗಾದ ಮಕ್ಕಳ ಮನಪರಿವರ್ತನೆ: ಬೆಳಗಾವಿಯಲ್ಲೇಗಿದೆ ವ್ಯವಸ್ಥೆ - moral education for children

ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳೊಂದಿಗೆ ಉತ್ತಮ ಜ್ಞಾನ ಪಡೆದು ಭವಿಷ್ಯದ ಉತ್ತಮ ಪ್ರಜೆಯಾಗಬೇಕಾದ ಮಕ್ಕಳೀಗ ಬೆಳಗಾವಿ ಸರ್ಕಾರಿ ವೀಕ್ಷಣಾಲಯಕ್ಕೆ ಸೇರಿದ್ದಾರೆ. ಕಾರಣ ಹತ್ತು-ಹಲವು. ತಿಳಿದೋ ತಿಳಿಯದೋ ಮಾಡಿದ ಅಪರಾಧ. ವೀಕ್ಷಣಾಲಯದಲ್ಲಿ ಅವರ ಮನಪರಿವರ್ತನೆ ಮಾಡುವ ಕೆಲಸ ನಡೆಯುತ್ತಿದೆ. ಬೆಳಗಾವಿ ಸರ್ಕಾರಿ ವೀಕ್ಷಣಾಲಯದ ಕಾರ್ಯಚಟುವಟಿಕೆ ಹೇಗಿದೆ ಗೊತ್ತಾ?

moral education for children at belgum who involved in crime
ಕಾನೂನು ಸಂಘರ್ಷಕ್ಕೊಳಗಾದ ಮಕ್ಕಳ ಮನಪರಿವರ್ತನೆ - ಬೆಳಗಾವಿಯಲ್ಲೇಗಿದೆ ವ್ಯವಸ್ಥೆ
author img

By

Published : Feb 25, 2021, 5:36 PM IST

ಬೆಳಗಾವಿ: ಅಪ್ರಾಪ್ತ ವಯಸ್ಸಿನ ಮಕ್ಕಳು ತಿಳಿದೋ ತಿಳಿಯದೋ ಅಥವಾ ಯಾವುದೋ ಪ್ರಭಾವಕ್ಕೊಳಗಾಗಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾದರೆ ಅವರ ಮನ ಪರಿವರ್ತನೆಗಾಗಿ ಇರುವ ಸರ್ಕಾರಿ ವೀಕ್ಷಣಾಲಯದಲ್ಲಿ ಯಾವ ರೀತಿ ಅವರ ಮನ ಪರಿವರ್ತನೆ ಮಾಡಲಾಗುತ್ತದೆ ಗೊತ್ತಾ? ಇಲ್ಲಿದೆ ಬೆಳಗಾವಿ ಸರ್ಕಾರಿ ವೀಕ್ಷಣಾಲಯ ಕ್ರಮಗಳ ಕುರಿತು ಮಾಹಿತಿ.

ಬೆಳಗಾವಿ ಸರ್ಕಾರಿ ವೀಕ್ಷಣಾಲಯ:

ಬೆಳೆಯುವ ಹಂತದಲ್ಲಿರುವ ಕೆಲ ಮುಗ್ಧ ಮನಸ್ಸುಗಳು ಯಾವುದೋ ಕಟ್ಟ ಘಳಿಗೆ ಎನ್ನುವಂತೆ ದುರಾದೃಷ್ಟವಶಾತ್​​ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವುದುಂಟು. ಜಿಲ್ಲೆಯಲ್ಲಿ ಅಂತಹ ಪ್ರಕರಣ ಕಂಡುಬಂದರೆ ಬೆಳಗಾವಿ ಸರ್ಕಾರಿ ವೀಕ್ಷಣಾಲಯಕ್ಕೆ ಅವರನ್ನು ಕರೆದೊಯ್ದು ಅವರ ಮನಪರಿವರ್ತನೆ ಮಾಡಲಾಗುತ್ತದೆ, ಅವರಿಗೆ ವಿಶೇಷ ಕಾಳಜಿ ವಹಿಸಲಾಗುತ್ತಿದೆ.

ಬೆಳಗಾವಿ ಸರ್ಕಾರಿ ವೀಕ್ಷಣಾಲಯದ ಕಾರ್ಯಚಟುವಟಿಕೆ

ವೀಕ್ಷಣಾಲಯ ಸೇರಿದ ಬಾಲಕ-ಬಾಲಕಿಯರು:

ಯಾರದ್ದೋ - ಯಾವುದರದ್ದೋ ಪ್ರಭಾವವೋ ಅಥವಾ ಸಭ್ಯತೆ, ಜೀವನ ಮೌಲ್ಯಗಳು ಸೇರಿದಂತೆ ಉತ್ತಮ ಶಿಕ್ಷಣದ ಕೊರತೆಯಿಂದಾಗಿ ಜಿಲ್ಲೆಯ ನೂರಾರು ಬಾಲಕ - ಬಾಲಕಿಯರು ಕೊಲೆ, ದರೋಡೆ, ಕಳ್ಳತನದಂತಹ ಕೆಲ ಅಪರಾಧಿಕ ಚಟುವಟಿಕೆಯಲ್ಲಿ ಭಾಗಿಯಾಗುತ್ತಿದ್ದಾರೆ. ಒಳ್ಳೆಯ ಶಿಕ್ಷಣ ಪಡೆದು, ಭವಿಷ್ಯದ ಪ್ರಜ್ಞಾವಂತ ನಾಗರಿಕರಾಗಬೇಕಾದ ಈ ಬಾಲಕ-ಬಾಲಕಿಯರು ಇದೀಗ ವೀಕ್ಷಣಾಲಯ ಸೇರಿದ್ದಾರೆ.

ಬೆಳಗಾವಿಯಲ್ಲಿ ಈ ಮಕ್ಕಳಿಗೆ ವಿಶೇಷ ಕಾಳಜಿ:

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಬರುವ ವೀಕ್ಷಣಾಲಯದಲ್ಲಿ ಕಾನೂನು ಸಂಘರ್ಷಕ್ಕೊಳಗಾದ ಮಕ್ಕಳಿಗೆ ವಿಶೇಷ ಕಾಳಜಿ ವಹಿಸಲಾಗುತ್ತಿದೆ ಮತ್ತು ಮನ ಪರಿವರ್ತನೆ ಮಾಡಲಾಗುತ್ತಿದೆ. ಆ ಮಕ್ಕಳಿಗೆ ವಿದ್ಯಾಭ್ಯಾಸ ನೀಡುವ ಜೊತೆಗೆ ಮಾಡಿದ ತಪ್ಪಿನ ಮನವರಿಕೆ ಮಾಡಿಕೊಡುವ ಕೆಲಸವನ್ನು ಇಲ್ಲಿನ ಅಧಿಕಾರಿಗಳು ಮಾಡುತ್ತಿದ್ದಾರೆ.

ಸೂಕ್ತ ವ್ಯವಸ್ಥೆ:

ಅಲ್ಲದೇ ಅವರಿಗಾಗಿ ವಿಶೇಷ ಗ್ರಂಥಾಲಯ ಸ್ಥಾಪನೆ ಜೊತೆಗೆ ವೀಕ್ಷಣಾಲಯದಲ್ಲೇ ಪಾಠ - ಪ್ರವಚನಕ್ಕೆ ಅವಕಾಶ ಕಲ್ಪಿಸಲಾಗಿದೆ. ನಿತ್ಯ ಅವರಿಗೆ ಗುಣಮಟ್ಟದ ಆಹಾರದ ಜೊತೆಗೆ ಸ್ನಾನಕ್ಕೆ ಬಿಸಿ ನೀರಿನ ವ್ಯವಸ್ಥೆ ಮಾಡಲಾಗಿದೆ. ಸಮಾಜದಲ್ಲಿ ಎಲ್ಲರಂತೆ ಬದುಕಬೇಕು, ದ್ವೇಷ ಭಾವನೆ ಬಿಡಬೇಕು ಎಂದು ಕಾನೂನು ಸಂಘರ್ಷಕ್ಕೊಳಗಾದ ಬಾಲಕ - ಬಾಲಕಿಯರಿಗೆ ಇಲ್ಲಿನ ಅಧಿಕಾರಿಗಳು ಬುದ್ಧಿ ಮಾತನ್ನು ಹೇಳುತ್ತಿದ್ದಾರೆ. ಸದ್ಯ ಬೆಳಗಾವಿಯ ವೀಕ್ಷಣಾಲಯದಲ್ಲಿ ಇಬ್ಬರು ಕಾನೂನು ಸಂಘರ್ಷಕ್ಕೊಳಗಾದ ಬಾಲಕ - ಬಾಲಕಿಯರಿದ್ದಾರೆ.

ಸಣ್ಣ ವಯಸಿನಲ್ಲೇ ಗಾಂಜಾ, ಕುಡಿತದ ಚಟ:

ಪ್ರಾಥಮಿಕ, ಪ್ರೌಢಶಾಲೆ ಹಂತದಲ್ಲೇ ಅನೇಕ ಬಾಲಕರು ಗಾಂಜಾ ಸೇವಿಸುವ ಜೊತೆಗೆ ಮದ್ಯಪಾನ ಮಾಡುತ್ತಿದ್ದಾರೆ. ನಶೆಯಲ್ಲೇ ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದಾರೆ. ಗಂಜಾ - ಮದ್ಯಪಾನಕ್ಕಾಗಿ ಹಣ ಸಿಗದಿದ್ದಾಗ ಕಳ್ಳತನ, ದರೋಡೆಯಂತಹ ಕೃತ್ಯಗಳನ್ನು ಮಾಡುತ್ತಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ನಶೆಯಲ್ಲೇ ಕೊಲೆ ಯತ್ನ ಮಾಡಿದ್ದಾರೆ ಮತ್ತು ಕೊಲೆ ಕೂಡ ಮಾಡಿದ್ದಾರೆ. ಖಾನಾಪುರ ತಾಲೂಕಿನಲ್ಲಿ ಪಾರಿವಾಳ ವಿಚಾರಕ್ಕೆ ಬಾಲಕನೊಬ್ಬ ತನ್ನ ಸ್ನೇಹಿತನ್ನೇ ಕೊಲೆ ಮಾಡಿದ್ದಾನೆ. ಈತನೀಗ ಇಲ್ಲಿನ ವೀಕ್ಷಣಾಲಯದಲ್ಲಿದ್ದಾನೆ.

ಮಾದಕ ವಸ್ತುಗಳ ಸಾಗಣೆಯೇ ಇದಕ್ಕೆ ಮೂಲ ಕಾರಣ:

ಮೂರು ರಾಜ್ಯಗಳ ಸಂಪರ್ಕಕೊಂಡಿಯಾಗಿರುವ ಬೆಳಗಾವಿಯಲ್ಲಿ ಗಾಂಜಾ ಸೇರಿದಂತೆ ಮಾದಕ ವಸ್ತುಗಳ ಸಾಗಣೆ ಎಗ್ಗಿಲ್ಲದೇ ನಡೆಯುತ್ತಿದೆ. ಮಹಾರಾಷ್ಟ್ರ ಹಾಗೂ ಗೋವಾಗಳಿಂದ ಹೆಚ್ಚಿನ ಪ್ರಮಾಣದಲ್ಲಿ ನಗರಕ್ಕೆ ಮಾದಕ ವಸ್ತುಗಳು ಸಾಗಾಟ ಆಗುತ್ತಿದೆ. ಬಹುತೇಕ ಶಾಲಾ - ಕಾಲೇಜು ಆವರಣದಲ್ಲೇ ಗಾಂಜಾ ಪೂರೈಕೆ ಆಗುತ್ತಿದೆ. ತರಗತಿಗಳಿಗೆ ಬಂಕ್ ಹಾಕಿ ವಿದ್ಯಾರ್ಥಿಗಳು ಗಾಂಜಾ ಸೇವನೆಯಲ್ಲಿ ತೊಡಗಿದ್ದಾರೆ. ಈ ಬಗ್ಗೆ ಅನೇಕ ಜಾಗೃತಿ ಕಾರ್ಯಕ್ರಮಗಳು ನಡೆದರೂ ಕೂಡ ಅದಕ್ಕೆ ಕಡಿವಾಣ ಹಾಕಲಾಗುತ್ತಿಲ್ಲ. ಗಾಂಜಾ ವಿರುದ್ಧ ಪೊಲೀಸರು ಸಮರ ಸಾರಿದರೂ ಕೂಡ ಅದರ ಪೂರೈಕೆಯನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯವಾಗುತ್ತಿಲ್ಲ. ಈ ಕಾರಣಕ್ಕೆ ಓದುವ ವಯಸ್ಸಿನಲ್ಲೇ ಬಾಲಕರು ಅಪರಾಧಿಕ ಚಟುವಟಿಕೆಯಲ್ಲಿ ಭಾಗಿಯಾಗುತ್ತಿದ್ದಾರೆ.

ಓದಿ: ಕಾನೂನು ಸಂಘರ್ಷಕ್ಕೊಳಗಾದ ಮಕ್ಕಳ ಮನಪರಿವರ್ತನೆಗೆ ಕ್ರಮ: ಕಲಬುರಗಿ ಸರ್ಕಾರಿ ವೀಕ್ಷಣಾಲಯದ ಪಾತ್ರವೇನು?

ಈ ಕುರಿತು ಈಟಿವಿ ಭಾರತ ಜೊತೆಗೆ ಮಾತನಾಡಿದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರವಿ ರತ್ನಾಕರ, ಕಾನೂನು ಸಂಘರ್ಷಕ್ಕೊಳಗಾದ ಮಕ್ಕಳ ಬಗ್ಗೆ ಇಲ್ಲಿ ವಿಶೇಷ ಕಾಳಜಿ ವಹಿಸಲಾಗುತ್ತಿದೆ. ಮನಪರಿವರ್ತನೆಯ ಜೊತೆಗೆ ಅವರಿಗೆ ವಿದ್ಯಾದಾನವನ್ನು ಮಾಡಲಾಗುತ್ತಿದೆ. ಮಕ್ಕಳ ಬಗ್ಗೆ ಪೋಷಕರು ವಿಶೇಷ ಕಾಳಜಿ ವಹಿಸಬೇಕು. ಅಗ ಮಾತ್ರ ಕಾನೂನು ಸಂಘರ್ಷಕ್ಕೆ ಒಳಗಾಗುವ ಬಾಲಕರ ಸಂಖ್ಯೆ ಕ್ಷೀಣಿಸಲು ಸಾಧ್ಯ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.