ಚಿಕ್ಕೋಡಿ/ಬೆಳಗಾವಿ: ಸಾರಿಗೆ ಇಲಾಖೆ ವತಿಯಿಂದ ವಿಶೇಷವಾಗಿ ವಿನ್ಯಾಸಗೊಳಿಸಲಾದ 3 ಮೊಬೈಲ್ ಫೀವರ ಕ್ಲಿನಿಕ್ಗಳನ್ನು ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿದರು.
ಜಿಲ್ಲಾಡಳಿತವು ಒಂದು ಫೀವರ ಕ್ಲಿನಿಕ್ ಅನ್ನು ರಾಯಬಾಗ ತಾಲೂಕು ಆಡಳಿತಕ್ಕೆ ಹಂಸ್ತಾಂತರಿಸಿತು. ಈ ಹಿನ್ನೆಲೆ ರಾಯಬಾಗ ತಾಲೂಕಿನ ಕುಡಚಿ ಪಟ್ಟಣದಲ್ಲಿ ಅಥಣಿ ಡಿವೈಎಸ್ಪಿ ಡಿ.ಟಿ. ಪ್ರಭು ಕುಡಚಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮೊಬೈಲ್ ಫೀವರ ಕ್ಲಿನಿಕ್ ಪ್ರಾರಂಭಿಸಿದರು.
ಕುಡಚಿ ಪಟ್ಟಣದಲ್ಲಿ ಪ್ರಾರಂಭಿಸಿದ ಬಳಿಕ ರಾಯಬಾಗ ತಹಶೀಲ್ದಾರ್ ಚಂದ್ರಕಾಂತ ಭಜಂತ್ರಿ ಮಾತನಾಡಿದರು ಕೋವಿಡ್-19 ಹಿನ್ನೆಲೆಯಲ್ಲಿ ಲಾಕ್ಡೌನ್ ಘೋಷಿಸಿರುವುದರಿಂದ ಸಾರ್ವಜನಿಕರಿಗೆ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲು ಮೊಬೈಲ್ ಫೀವರ್ ಕ್ಲಿನಿಕ್ಗಳನ್ನು ಬಳಸಲು ಸೂಚಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಚಂದ್ರಕಾಂತ ಭಜಂತ್ರಿ, ಕ್ಷೇತ್ರ ಶಿಕ್ಷಣಾಧಿಕಾರಿ ಭಜಂತ್ರಿ, ಅಥಣಿ ಡಿವೈಎಸ್ಪಿ ಡಿ.ಟಿ. ಪ್ರಭು, ಕುಡಚಿ ಪೊಲೀಸ್ ಠಾಣೆಯ ಪಿಎಸ್ಐ ಶಿವರಾಜ ದರಿಗೊನಿ ಹಾಗೂ ಇತರ ಅಧಿಕಾರಿಗಳು ಮೊಬೈಲ್ ಫೀವರ ಕ್ಲಿನಿಕ್ನಲ್ಲಿ ಥರ್ಮಾಮೀಟರ್ ಮೂಲಕ ಪರೀಕ್ಷೆ ಮಾಡಿಕೊಂಡರು.