ETV Bharat / state

ಶಾಸಕರು ಸರಿಯಾದ ದಾಖಲೆ ಪರಿಶೀಲಿಸಿ ಪಾಸ್ ಕೊಡಿ: ಸ್ಪೀಕರ್ ಸಲಹೆ - ಕೈ ಶಾಸಕರ ಮೇಲೆ ಸ್ಪೀಕರ್ ಗರಂ

ಸಂಸತ್ ಸ್ಮೋಕ್ ದಾಳಿಯನ್ನು ತೀವ್ರ ಖಂಡಿಸುತ್ತೇವೆ. ಆರೋಪಿಗಳಿಗೆ ಶಿಕ್ಷೆ ಆಗಬೇಕು ಎಂದು ಕೇಂದ್ರಕ್ಕೆ ಆಗ್ರಹಿಸುತ್ತೇವೆ. ಆಧಾರ್ ಕಾರ್ಡ್, ವಿಳಾಸ ದಾಖಲೆ ಪರಿಶೀಲಿಸಿ ಪಾಸ್ ವಿತರಿಸಿ, ಪಿಎಗಳ ಮೇಲೂ ಶಾಸಕರು ಗಮನ ಇರಲಿ. ಸುವರ್ಣ ಸೌಧದಲ್ಲಿ ಭದ್ರತೆ ಕುರಿತು ಪರಿಶೀಲಿಸುತ್ತೇವೆ ಎಂದು ಸದನದಲ್ಲಿ ಸ್ಪೀಕರ್ ಯು ಟಿ ಖಾದರ್ ತಿಳಿಸಿದರು.

Speaker U T Khader
ಸ್ಪೀಕರ್ ಯು ಟಿ ಖಾದರ್ ಸಲಹೆ ನೀಡಿದರು.
author img

By ETV Bharat Karnataka Team

Published : Dec 13, 2023, 6:45 PM IST

ಬೆಳಗಾವಿ: ಶಾಸಕರು ಪಾಸ್ ಕೊಡುವ ಮುನ್ನ ಎಚ್ಚರ ಅಗತ್ಯ. ಜವಾಬ್ದಾರಿಯಿಂದ ಸರಿಯಾದ ದಾಖಲೆ‌ಗಳನ್ನು ಪರಿಶೀಲಿಸಿ ಪಾಸ್ ನೀಡಬೇಕು ಎಂದು ಸ್ಪೀಕರ್ ಯು ಟಿ ಖಾದರ್ ವಿಧಾನಸಭೆ ಸದಸ್ಯರಿಗೆ ಎಚ್ಚರಿಕೆ ನೀಡಿದರು.

ಕಲಾಪ ಪುನಾರಂಭಗೊಂಡ ಬಳಿಕ ಮಾತನಾಡಿದ ಸ್ಪೀಕರ್, ಸಂಸತ್ ಸ್ಮೋಕ್ ದಾಳಿಯನ್ನು ನಾವೆಲ್ಲ ತೀವ್ರವಾಗಿ ಖಂಡಿಸುತ್ತೇವೆ. ಆರೋಪಿಗಳಿಗೆ ಶಿಕ್ಷೆ ಆಗಬೇಕು ಅಂತ ಕೇಂದ್ರಕ್ಕೆ ನಾವು ಆಗ್ರಹಿಸುತ್ತೇವೆ. ವಿಧಾನಸಭೆ ಕಲಾಪದಲ್ಲಿ ಯಾರಾದರೂ ಅಸಂಸದೀಯವಾಗಿ ಮಾತಾಡಿದರೆ ಕಡತದಿಂದ ತೆಗೆಸುತ್ತೇವೆ. ಆಧಾರ್ ಕಾರ್ಡ್, ವಿಳಾಸ ಇರಲಿ ಕಣ್ಣು ಮುಚ್ಚಿ ಪಾಸ್ ಕೊಡಬೇಡಿ. ಶಾಸಕರಗಿಂತ ಅವರ ಪಿಎಗಳಿಗೆ ಪವರ್ ಜಾಸ್ತಿ ಇದೆ.ಪಿಎಗಳ ಮೇಲೂ ಶಾಸಕರು ಗಮನ ಹರಿಸಬೇಕು ಎಂದು ವಿಧಾನಸಭಾ ಅಧ್ಯಕ್ಷರು ಸೂಚಿಸಿದರು.

ಸುವರ್ಣ ಸೌಧದಲ್ಲಿ ಭದ್ರತೆ ಪರಿಶೀಲನೆ: ವಿಧಾನಸಭೆ, ಸುವರ್ಣ ಸೌಧದಲ್ಲಿ ಭದ್ರತೆ ಬಗ್ಗೆ ಪರಿಶೀಲಿಸುತ್ತೇವೆ. ಮಾರ್ಷಲ್​​ಗಳು, ಪೊಲೀಸ್ ಅಧಿಕಾರಿಗಳ ಜತೆ ಪಾಸ್ ವಿತರಣೆ ಬಗ್ಗೆ ಚರ್ಚೆ‌ ಮಾಡ್ತೇನೆ. ನಾವು ಶಾಸಕರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಇಂತಹ ಅಘಾತಕಾರಿ ಘಟನೆಗಳು ಆಗದಂತೆ ಎಚ್ಚರ ವಹಿಸಬೇಕು ಎಂದು ಕಿವಿಮಾತು ಹೇಳಿದರು.

ಕೈ ಶಾಸಕರ ಮೇಲೆ ಸ್ಪೀಕರ್ ಗರಂ: ವಿರಾಮದ ನಂತರ ಕಲಾಪ ಪುನರಾರಂಭವಾಗುತ್ತಿದ್ದ ಹಾಗೆ ನಯನಾ ಮೋಟಮ್ಮ, ಮೊದಲು ಪ್ರತಿಪಕ್ಷ ನಾಯಕರು ಸ್ಪಷ್ಟನೆ ಕೊಡಲಿ. ಒಳಗಡೆ ಅವರು ಹೋಗಿದ್ದು ಹೇಗೆ?. ಈ ಘಟನೆ ಆಗೋಕೆ ಕಾರಣವೇನು?. ಇದರ ಬಗ್ಗೆ ಮಾತನಾಡಲಿ ಎಂದು ಆಗ್ರಹಿಸಿದರು‌. ಈ ವೇಳೆ ಮತ್ತೆ ಸದನದಲ್ಲಿ ಗದ್ದಲ ಉಂಟಾಯಿತು.

ಈ ವೇಳೆ ಮಧ್ಯಪ್ರವೇಶಿಸಿದ ಸ್ಪೀಕರ್, ನೀವು ಮಾತಾಡಿ ಯಾರನ್ನೂ ಮೆಚ್ಚಿಸುವ ಅಗತ್ಯ ಇಲ್ಲ. ಸಮಯ ವ್ಯರ್ಥ ಮಾಡಬೇಡಿ, ಇನ್ನು ಮೂರು ದಿನ ಮಾತ್ರ ಕಲಾಪ ಇರೋದು. ಕಾಂಗ್ರೆಸ್ ಶಾಸಕರ ಮೇಲೆ ಸ್ಪೀಕರ್ ಗರಂ ಆದರು.

ಶಾಸಕರ ಪಿಎಗಳು ಪೊಲೀಸರ ಮೇಲೆ ಒತ್ತಡ ತರುತ್ತಾರೆ : ನಾವು ಶಾಸಕರು ವಿಧಾನಸೌಧದ ಒಳಗೆ ಬರ್ತೇವೆ. ಒಳಗೆ ಬಂದ ನಂತರ ನಮ್ಮ ಡ್ರೈವರ್ ಮತ್ತೆ ಟ್ರಿಪ್ ಹೊಡೆಯುತ್ತಾರೆ. ಮತ್ತಿಬ್ಬರನ್ನು ಒಳಗೆ ಕರೆ ತರುತ್ತಾರೆ . ಶಾಸಕರ ಪಿಎಗಳು ಪೊಲೀಸರ ಮೇಲೆಯೂ ಒತ್ತಡ ತರ್ತಾರೆ. ಬೇರೆಯವರು ಕರೆ ತಂದು ದಬ್ಬಾಳಿಕೆ ಮಾಡ್ತಾರೆ. ಇದನ್ನು ಸರಿಪಡಿಸುವ ಕೆಲಸ ಆಗಬೇಕು. ಇಲ್ಲಿ ನಿಮ್ಮ ಪ್ರಭುತ್ವ ತೋರಿಸುವುದಲ್ಲ ಎಂದು ಸ್ಪೀಕರ್ ಯು‌ ಟಿ ಖಾದರ್ ಸಲಹೆ ‌ನೀಡಿದರು.

ಇದನ್ನೂಓದಿ:ಲೋಕಸಭೆಯಲ್ಲಿ ಭದ್ರತಾ ಲೋಪ: ನಾಲ್ವರ ಬಂಧನ, ಆರೋಪಿಗಳ ಗುರುತು ಪತ್ತೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.