ETV Bharat / state

ರಮೇಶ್ ಜಾರಕಿಹೊಳಿಗೆ ಮಂತ್ರಿ ಸ್ಥಾನ ಕೊಡಲೇಬೇಕು: ಶಾಸಕ ಯತ್ನಾಳ ಆಗ್ರಹ - ಬಿಎಸ್​ವೈ, ಡಿಕೆಶಿ,ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ ಯತ್ನಾಳ್​

ಡಿಕೆಶಿ ಅವರ ತಮ್ಮ ಒಂದು ಬಡಕುಟುಂಬದ ಬಳಿ 25 ಲಕ್ಷ ರೂ ಹಣ ತೆಗೆದುಕೊಂಡಿದ್ದಾರೆ. ಕೇಳಲು ಹೋದ ಆ ಕುಟುಂಬದ ತಾಯಿ, ಮಗನಿಗೆ ಬೆದರಿಕೆ ಹಾಕಿದ್ದಾರೆ. ಇಂಥವರ ವಿರುದ್ಧ ತನಿಖೆ ಆಗಬೇಕು ಎಂದು ಯತ್ನಾಳ್​ ಆಗ್ರಹಿಸಿದರು.

ರಮೇಶ್ ಜಾರಕಿಹೊಳಿಗೆ ಮಂತ್ರಿ ಸ್ಥಾನ ಕೊಡಲೇಬೇಕು ಎಂದು ಶಾಸಕ ಯತ್ನಾಳ ಆಗ್ರಹ

author img

By

Published : May 6, 2022, 10:51 AM IST

Updated : May 6, 2022, 10:57 AM IST

ಬೆಳಗಾವಿ: ಗೋಕಾಕ ಶಾಸಕ ರಮೇಶ್ ಜಾರಕಿಹೊಳಿ‌ ಪರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬ್ಯಾಟಿಂಗ್ ಮಾಡಿದ್ದಾರೆ. ಈ ಸಂಬಂಧ ಬೆಳಗಾವಿ ಜಿಲ್ಲೆಯ ಗೋಕಾಕಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿಗೆ ಮಂತ್ರಿಸ್ಥಾನ ಕೊಡಬೇಕು. ಬಿಜೆಪಿ ಸರ್ಕಾರ ಬರಲು ಅವರ ಕಾಂಟ್ರಿಬ್ಯೂಷನ್ ಇದೆ. ಅವರ ವಿರುದ್ಧ ಷಡ್ಯಂತ್ರ ಮಾಡಲಾಗಿದೆ. ಮೋಸ ಮಾಡಿದವರಲ್ಲಿ ನಮ್ಮಲ್ಲೂ ಒಬ್ಬ ಮಹಾನಾಯಕನ ಮಗ ಇದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಸಚಿವ ಅಶ್ವತ್ಥ ನಾರಾಯಣ ವಿರುದ್ಧ ಮಾತನಾಡಿದವರೇ ಕೆಪಿಎಸ್‌ಸಿಯಲ್ಲಿ ಸಿಕ್ಕಿಬಿದ್ದಿದ್ದಾರೆ. ನಿನ್ನೆ ನನ್ನ ಮೇಲೂ ಎಸಿಬಿಗೆ ದೂರು ನೀಡಿದ್ದಾರೆ. ಯತ್ನಾಳ ಕೆಪಿಎಸ್‌ಸಿಯಲ್ಲಿ ಭ್ರಷ್ಟಾಚಾರ ಮಾಡಿದ್ದಾರೆ ಎಂದು ಹೇಳಿದ್ದಾರೆ. ಅದರ ಬಗ್ಗೆ ಅವರಿಗೆ ಸಾಕಷ್ಟು ಮಾಹಿತಿ ಇರಬಹುದು, ಅದನ್ನು ತನಿಖೆ ಮಾಡಬೇಕು. ಡಿಕೆಶಿ ಅವರ ತಮ್ಮ ಬಡಕುಟುಂಬದ ಬಳಿ 25 ಲಕ್ಷ ರೂ ಹಣ ತೆಗೆದುಕೊಂಡಿದ್ದಾರೆ. ಕೇಳಲು ಹೋದ ಆ ಕುಟುಂಬದ ತಾಯಿ, ಮಗನಿಗೆ ಬೆದರಿಕೆ ಹಾಕಿದ್ದಾರೆ. ಇಂಥವರ ವಿರುದ್ಧ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.

ಕೆಲ ನಾಯಕರು ಅಡ್ಜಸ್ಟ್ಮೆಂಟ್ ರಾಜಕಾರಣ ‌ಮಾಡುತ್ತಿದ್ದಾರೆ. ಬಿಎಸ್‌ವೈ ಸಿಎಂ ಆಗಿದ್ದಾಗ ಶಿಕಾರಿಪುರ ಬಿಟ್ರೆ ಸಿದ್ದರಾಮಯ್ಯ ಕ್ಷೇತ್ರ ಬಾದಾಮಿಗೆ ಹೆಚ್ಚಿನ ಅಭಿವೃದ್ಧಿಗೆ ಹಣ ಕೊಟ್ಟಿದ್ದಾರೆ. ಅದನ್ನು ಬಿಟ್ರೆ ಡಿಕೆಶಿ ಕ್ಷೇತ್ರಕ್ಕೆ ಹಣ ಕೊಟ್ಟಿದ್ದಾರೆ. ನಾವೆಲ್ಲ ಬಿಜೆಪಿ ಎಂಎಲ್‌ಎಗಳು ಕೈ ಎತ್ತಲು ಬಂದಿಲ್ಲ. ಹೀಗೆ ಹೇಳಿದ್ದಕ್ಕೆ ಬೊಮ್ಮಾಯಿ ನನಗೂ 500 ಕೋಟಿ ರೂಪಾಯಿ ಕೊಟ್ಟಿದ್ದಾರೆ ಎಂದರು.

ಇದನ್ನೂ ಓದಿ: ವಿವಾದಾತ್ಮಕ ನಕ್ಷೆ: ಎಂಇಎಸ್ ಮುಖಂಡನ ವಿರುದ್ಧ ಬೆಳಗಾವಿಯಲ್ಲಿ ಎಫ್ಐಆರ್

Last Updated : May 6, 2022, 10:57 AM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.