ETV Bharat / state

NDRF ಗೈಡಲೈನ್ ಬದಲಿಸಿ: ಶಾಸಕ ಶಿವಲಿಂಗೇಗೌಡ ಆಗ್ರಹ - ಬೆಳಗಾವಿ ಪರಿಷತ್​ ಅಧಿವೇಶನ

ಇಂದು ವಿಧಾನಸಭೆಯಲ್ಲಿ ಅರಸಿಕೇರಿ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಅವರು ಎನ್‍ಡಿಆರ್​​​​ಎಫ್ ಗೈಡ್‍ಲೈನ್‍ಗಳನ್ನು ಬದಲಾಯಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.

MLA Shivalingegowda
ಶಾಸಕ ಶಿವಲಿಂಗೇಗೌಡ
author img

By

Published : Dec 15, 2021, 9:27 PM IST

ಬೆಳಗಾವಿ: ರಾಷ್ಟ್ರೀಯ ವಿಪತ್ತು ನಿರ್ವಹಣಾ ಪರಿಹಾರ ನಿಧಿ (ಎನ್‍ಡಿಆರ್​​​​ಎಫ್) ಯ ಗೈಡ್‍ಲೈನ್‍ಗಳನ್ನು ತಕ್ಷಣವೆ ಬದಲಿಸಬೇಕು ಎಂದು ಅರಸಿಕೇರಿ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಕೇಂದ್ರ ಹಾಗೂ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.

ಎನ್‍ಡಿಆರ್​​​ಎಫ್ ಗೈಡಲೈನ್ ಬದಲಾವಣೆಗೆ ಶಾಸಕ ಶಿವಲಿಂಗೇಗೌಡ ಆಗ್ರಹ

ವಿಧಾನಸಭೆಯಲ್ಲಿ ಮಾತನಾಡಿದ ಅವರು, ಅಕಾಲಿಕ ಮಳೆಯಿಂದ ರಾಜ್ಯದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೊರೊನಾ ಸಂಕಷ್ಟದ ಸಮಯದಲ್ಲಿ ಬೆಳೆದ ಬೆಳೆಯೂ ಸತತ ಸುರಿದ ಮಳೆಯಿಂದ ನೀರು ಪಾಲಾಗಿದೆ. ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ರಾಜ್ಯದ ರೈತರ ಪರಿಸ್ಥಿತಿ ಚಿಂತಾಜನಕವಾಗಿದ್ದು, ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಇನ್ನು ಎನ್‍ಡಿಆರ್‍ಎಫ್ ನಿಮಯಗಳ ಅನ್ವಯ ರಾಜ್ಯ ಸರ್ಕಾರ ಪರಿಹಾರ ನೀಡಲು ಮುಂದಾಗುತ್ತಿದೆ. ಒಂದು ಹೆಕ್ಟೇರ್​​ ರಾಗಿ ಬೆಳೆ ಬೆಳೆಯಲು 30 ಸಾವಿರ ಖರ್ಚಾಗುತ್ತದೆ. ಆದರೆ ಎನ್‍ಡಿಆರ್‍ಎಫ್ ನಿಯಮದಡಿ ಪರಿಹಾರ ನೀಡಿದರೆ ಒಂದು ಹೆಕ್ಟೇರ್ ಜಮೀನಿರುವ ರೈತನಿಗೆ ಕೇವಲ 6,500 ಪರಿಹಾರ ಸಿಗುತ್ತಿದೆ. ಸಂಕಷ್ಟದಲ್ಲಿರುವ ರೈತನಿಗೆ ಲಾಭ ಕೊಡುವುದು ಬೇಡ. ಒಂದು ಹೆಕ್ಟೇರ್​ಗೆ ತಾನು ವೆಚ್ಚ ಮಾಡಿದ ಹಣವನ್ನಾದರೂ ರೈತನಿಗೆ ಸರ್ಕಾರ ನೀಡಬೇಕು.

ಸಂಕಷ್ಟದಲ್ಲಿರುವ ಜನರಿಗೆ ಸ್ಪಂದಿಸದಿದ್ದರೆ ನಮಗೆ ಸರ್ಕಾರ ಏಕೆ ಬೇಕು ಎಂಬ ಭಾವನೆ ಬರುತ್ತದೆ. ಇದಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಎರಡೂ ಸೇರಿ ಎನ್‍ಡಿಆರ್‍ಎಫ್ ಗೈಡ್‍ಲೈನ್ ಬದಲಿಸಬೇಕು ಎಂದು ಆಗ್ರಹಿಸಿದರು.

ಕ್ಷೇತ್ರದ ಜನರಿಗೆ ಮುಖತೋರಿಸಲಾಗುತ್ತಿಲ್ಲ:

ಸಾಮಾಜಿಕ ಜಾಲತಾಣ ಬಳಕೆದಾರರ ಸಂಖ್ಯೆ ಹೆಚ್ಚಿದೆ. ಕ್ಷೇತ್ರದ ಜನರು ತಮ್ಮ ಸಮಸ್ಯೆಗಳನ್ನು ಮೊಬೈಲ್​​​ನಲ್ಲಿ ಸೆರೆ ಹಿಡಿದು ವಾಟ್ಸ್​ಆ್ಯಪ್​​​​​ ಮಾಡುತ್ತಿದ್ದಾರೆ. ಸರ್ಕಾರ ಪರಿಹಾರ ನೀಡದ ಕಾರಣ ಕ್ಷೇತ್ರದ ಜನರ ಸಮಸ್ಯೆಗೆ ಸ್ಪಂದಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಶಾಸಕರೆ ಎಲ್ಲಿದ್ದಿರಿ ಎಂದು ಕೇಳುತ್ತಾರೆ.

ಗೌರವದಿಂದ ಕ್ಷೇತ್ರದಲ್ಲಿ ಓಡಾಡಲು ನಮಗೆ ಆಗುತ್ತಿಲ್ಲ. ರಸ್ತೆ, ಸೇತುವೆ, ಶಾಲಾ ಕೊಠಡಿಗಳು ಹಾಳಾಗಿವೆ. ಇದಕ್ಕಾಗಿ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಬೇಕು. ಮಳೆಗೆ ಸಾಕಷ್ಟು ಜನರು ಮನೆ ಕಳೆದುಕೊಂಡು ಬೀದಿಯಲ್ಲಿ ವಾಸವಾಗಿದ್ದಾರೆ. ಎಲ್ಲರಿಗೂ ಪರಿಹಾರ ನೀಡುವ ಕೆಲಸವನ್ನು ಸರ್ಕಾರ ಮಾಡಬೇಕು. ತೆರಿಗೆ ರೂಪದಲ್ಲಿ ರಾಜ್ಯದ ಕೋಟ್ಯಂತರ ರೂ. ಕೇಂದ್ರ ಸರ್ಕಾರಕ್ಕೆ ಹೋಗುತ್ತದೆ. ಸಂಕಷ್ಟದ ಸಮಯದಲ್ಲಿ ರಾಜ್ಯ ಸರ್ಕಾರ ಕೇಂದ್ರದಿಂದ ಪರಿಹಾರ ತರಬೇಕು. ಆ ಧೈರ್ಯ ಮಾಡದಿದ್ದರೆ ಸಂಕಷ್ಟದಿಂದ ರಾಜ್ಯದ ರೈತಾಪಿ ವರ್ಗವನ್ನು ಪಾರು ಮಾಡುವುದು ಕಷ್ಟ ಎಂದರು.

ಇದನ್ನೂ ಓದಿ: ಬಿಎಂಟಿಸಿ ಪ್ರಯಾಣಿಕರಿಗೆ ಗುಡ್ ನ್ಯೂಸ್: ವಜ್ರ ಬಸ್​​​ ಪ್ರಯಾಣ ದರದಲ್ಲಿ ಭಾರಿ ಇಳಿಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.