ಅಥಣಿ(ಬೆಳಗಾವಿ): ಇತ್ತೀಚೆಗೆ ಸಿಡಿಲು ಬಡಿದು ಮೃತಪಟ್ಟವರ ಕುಟುಂಬಗಳಿಗೆ ಪ್ರಕೃತಿ ವಿಕೋಪದಡಿ ತಲಾ 5 ಲಕ್ಷ ರೂಪಾಯಿ ಪರಿಹಾರದ ಚೆಕ್ಅನ್ನು ಅಥಣಿ ಶಾಸಕ ಹಾಗೂ ಕೊಳಗೇರಿ ಅಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷ ಮಹೇಶ ಕುಮಟಳ್ಳಿ ಹಸ್ತಾಂತರಿಸಿದರು.
ತಾಲೂಕಿನ ಸವದಿ ದರ್ಗಾ ಗ್ರಾಮದಲ್ಲಿ ಇತ್ತೀಚೆಗೆ ಸಿಡಿಲು ಬಡಿದು ಮೃತಪಟ್ಟ ಬಂದೆನವಾಜ ಮುಲ್ಲಾ ಹಾಗೂ ದೇಸಾರಟ್ಟಿ ಗ್ರಾಮದ ಮಂಡುಭಾಯಿ ಪವಾರ ಎಂಬುವರ ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರದ ಚೆಕ್ ಹಸ್ತಾಂತರಿಸಿದರು.
ಈ ವೇಳೆ ಮಾತನಾಡಿದ ಮಹೇಶ ಕುಮಟಳ್ಳಿ, ಇಂತಹ ದುರ್ಘಟನೆ ಘಟಿಸಬಾರದಿತ್ತು. ಆದರೆ ವಿಧಿ ಆಟದ ಎದುರು ಎಲ್ಲರೂ ತಲೆ ಬಾಗಲೇಬೇಕಾಗುತ್ತದೆ. ಪ್ರಕೃತಿ ವಿಕೋಪ ಕಾರಣದಿಂದಾದ ಸಾವಿಗೆ ಜಿಲ್ಲಾಡಳಿತ ಸರ್ಕಾರದ ಪರಿಹಾರ ಧನದ ಚೆಕ್ ವಿತರಿಸಲಾಗುತ್ತಿದೆ. ಅದನ್ನು ಕುಟುಂಬ ಸದಸ್ಯರು ಮಕ್ಕಳ ವಿದ್ಯಾಭ್ಯಾಸ ಮತ್ತು ಕುಟುಂಬ ನಿರ್ವಹಣೆಗೆ ಸದುಪಯೋಗ ಮಾಡಿಕೊಳ್ಳುವ ಮೂಲಕ ಮೃತರ ಆತ್ಮಕ್ಕೆ ಶಾಂತಿ ದೊರಕುವಂತೆ ಮಾಡಬೇಕು ಎಂದು ಹೇಳಿದರು.