ಅಥಣಿ: ಕೊರೊನಾ ವೈರಸ್ ರೋಗದಿಂದ ಮುಕ್ತರಾಗಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವಾರು ಕಾನೂನು ನಿಯಮಗಳನ್ನು ಜಾರಿಗೆ ತಂದಿವೆ. ಆದರೂ ಸಹ ಕೊಳಚೆ ನಿರ್ಮೂಲನೆ ನಿಗಮ ಮಂಡಳಿ ಅಧ್ಯಕ್ಷ ಮಹೇಶ್ ಕುಮಟಳ್ಳಿ ನಿಯಮಗಳನ್ನು ಪಾಲನೆ ಮಾಡದೇ ಎಡವಟ್ಟು ಮಾಡಿದ್ದಾರೆ.
ಕೊಳಚೆ ನಿರ್ಮೂಲನೆ ನಿಗಮ ಮಂಡಳಿ ಅಧ್ಯಕ್ಷರಾಗಿ ಶಾಸಕ ಮಹೇಶ್ ಕುಮಟಳ್ಳಿ ಆಯ್ಕೆಯಾಗಿದ್ದರು. ಅಧ್ಯಕ್ಷದ ಆಯ್ಕೆ ನಂತರ ಶಾಸಕ ಮೊದಲ ಬಾರಿಗೆ ಅಥಣಿಗೆ ಆಗಮಿಸಿದ್ದರು. ಶಾಸಕ ಮಹೇಶ ಕುಮಟಳ್ಳಿಯನ್ನು ಸ್ವಾಗತಿಸಲು ಅಭಿಮಾನಿಗಳು ಬಾರಿ ಸಂಖ್ಯೆಯಲ್ಲಿ ಸೇರಿದ್ದು, ಈ ವೇಳೆ ಸಾಮಾಜಿಕ ಅಂತರ ಮಾಯವಾಗಿತ್ತು.
ಶಾಸಕ ಕುಮಟಳ್ಳಿ ಸಾರ್ವಜನಿಕರ ಜೊತೆ ಉಪಹಾರ ಸೇವನೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ, ಮಾಸ್ಕ ಧರಿಸದೆ ನಿಯಮ ಉಲ್ಲಂಘನೆ ಮಾಡಿದ್ದಾರೆ. ಇತ್ತಿಚೇಗಷ್ಟೇ ಆರೋಗ್ಯ ಸಚಿವ ಶ್ರೀರಾಮುಲು ಜನರಿಂದ ತುಂಬಿದ ಸಭೆಯಲ್ಲಿ ಭಾಗವಹಿಸಿದ್ದರು. ಈ ಘಟನೆ ಜನಾಕ್ರೋಶ ಕಾರಣವಾಗಿತ್ತು.