ETV Bharat / state

'ಸಾರ್ವತ್ರಿಕ ಚುನಾವಣೆ ಸಮುದ್ರದಲ್ಲಿನ ನೀರು ತೆಗೆದ ಹಾಗೆ'; ಶಾಸಕ ಲಕ್ಷ್ಮಣ್​ ಸವದಿ ಹೀಗಂದಿದ್ದೇಕೆ? - ಈಟಿವಿ ಭಾರತ ಕನ್ನಡ

ಲೋಕಸಭೆ ಚುನಾವಣೆಗೆ ಕಾಂಗ್ರೆಸ್​ ತಯಾರಿ ನಡೆಸುತ್ತಿದ್ದು, ಕನಿಷ್ಠ 20 ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ ಎಂದು ಅಥಣಿ ಶಾಸಕ ಲಕ್ಷ್ಮಣ್​ ಸವದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

MLA Laxman Savadi talks in Belagavi
ಶಾಸಕ ಲಕ್ಷ್ಮಣ್​ ಸವದಿ47
author img

By ETV Bharat Karnataka Team

Published : Nov 16, 2023, 4:37 PM IST

ಶಾಸಕ ಲಕ್ಷ್ಮಣ್​ ಸವದಿ ಮಾತನಾಡುತ್ತಿರುವುದು

ಬೆಳಗಾವಿ: ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ 20 ಕ್ಷೇತ್ರಗಳಲ್ಲಿ ಗೆಲ್ಲುವ ಅಪೇಕ್ಷೆ ಇದೆ. ರಾಜ್ಯ ಕಾಂಗ್ರೆಸ್ ಕೂಡ ಅದಕ್ಕೆ ಪೂರಕವಾಗಿ ಸಿದ್ಧತೆ ನಡೆಸಿದೆ ಎಂದು ಅಥಣಿ ಶಾಸಕ ಲಕ್ಷ್ಮಣ್​ ಸವದಿ ತಿಳಿಸಿದ್ದಾರೆ.

ಲಿಂಗಾಯತ ಮತ್ತು ಕುರುಬ ಸಮುದಾಯಗಳ ಮತ ಸೆಳೆಯುವ ಯತ್ನ ನಡೆಯುತ್ತಿದೆಯಾ? ಎಂಬ ಮಾಧ್ಯಮಗಳ ಪ್ರಶ್ನೆಗೆ ಬೆಳಗಾವಿಯಲ್ಲಿ ಪ್ರತಿಕ್ರಿಯಿಸಿದ ಅವರು, "ಎಲ್ಲ ಸಮುದಾಯವನ್ನು ನಾವು ಒಟ್ಟಿಗೆ ತೆಗೆದುಕೊಂಡು ಹೋಗುತ್ತೇವೆ. ಇನ್ನು ಪುತ್ರ ಚಿದಾನಂದ ಸವದಿ ಹೆಸರು ಲೋಕಸಭೆಗೆ ಕೇಳಿ ಬರುತ್ತಿರುವ ಬಗ್ಗೆ ನಮ್ಮಲ್ಲಿ ಅಭ್ಯರ್ಥಿ ಆಯ್ಕೆಗೆ ಸಭೆ ಮತ್ತು ಚರ್ಚೆ ಆಗಿಲ್ಲ. ಎಲ್ಲವೂ ಕೂಡ ಊಹಾಪೋಹಗಳಷ್ಟೇ. ಅಂತಹ ಸನ್ನಿವೇಶ ನಮ್ಮ ಮುಂದೆ ಇಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷರಾಗುತ್ತಿದ್ದಂತೆ 28 ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ ಎಂಬ ಬಿ ವೈ ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿದ ಸವದಿ, ಚುನಾವಣೆ ಬರಲಿ ಯಾರ್ಯಾರು ಎಷ್ಟೆಷ್ಟು ಗೆಲ್ತಾರೆ ಅಂತ ನೋಡೋಣ. ಉಪಚುನಾವಣೆಗಳೇ ಬೇರೆ ಸಾರ್ವತ್ರಿಕ ಚುನಾವಣೆಯೇ ಬೇರೆ. ಉಪಚುನಾವಣೆ ಕೇವಲ ಬಿಂದಿಗೆಯಲ್ಲಿನ ನೀರು ತೆಗೆದ ಹಾಗೆ. ಸಾರ್ವತ್ರಿಕ ಚುನಾವಣೆ ಸಮುದ್ರದಲ್ಲಿನ ನೀರು ತೆಗೆದ ಹಾಗೆ" ಎಂದು ಟಾಂಗ್ ನೀಡಿದ್ದಾರೆ.

"ಮಹದಾಯಿ ಜಾರಿಗೆ ಆಗ್ರಹಿಸಿ ಬಸವರಾಜ ಬೊಮ್ಮಾಯಿ ಪ್ರತಿಭಟಿಸಿದ್ದರು. ಅವರು ಜೆಡಿಎಸ್​ನಲ್ಲಿದ್ದಾಗಲೂ ಪ್ರತಿಭಟನೆ ಮಾಡಿದ್ದರು. ಅವರೇ ಸಿಎಂ ಆಗಿದ್ದರು. ಅವರದ್ದೇ ಕನಸಿನ ಕೂಸು ಆಗಿತ್ತು. ಗೋವಾ, ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇತ್ತು. ಆಗ ಅವರು ಅದಕ್ಕೆ ಆಸಕ್ತಿ ತೋರಿಸಲಿಲ್ಲ. ಸಿಸಿ ಪಾಟೀಲ್ ಸಹ ಜೆಡಿಎಸ್​ನಲ್ಲಿದ್ದಾಗ ಪ್ರತಿಭಟನೆ ಮಾಡಿದ್ದರು. ಆ ಹಳೆಯ ಫೋಟೋಗಳು ಸಹ ಇವೆ. ಅವರ ಕಾಲದಲ್ಲಿ ಮಹದಾಯಿ ಆಗಬೇಕಿತ್ತು. ಉದಾಸೀನ ಮಾಡಿದರೋ, ಮತ್ತೇನು ಕಾರಣವೋ ಗೊತ್ತಿಲ್ಲ. ಈಗ ಬೆಳಗಾವಿ ಅಧಿವೇಶನದಲ್ಲಾದರೂ ಸಹ ಧ್ವನಿ ಎತ್ತುತ್ತಾರಾ? ಎಂದು ಕಾದು ನೋಡಬೇಕು" ಎಂದರು.

"ಬೆಳಗಾವಿ ಜಿಲ್ಲೆ ವಿಭಜನೆ ಆಗಬೇಕು. ಅಥಣಿಯಿಂದ ಬೆಳಗಾವಿಗೆ ಬರಬೇಕು ಅಂದರೆ 200 ಕಿ.ಮೀ ಬೇಕು. ಜಿಲ್ಲೆ ಗೋಕಾಕ್ ಆಗಬೇಕು ಎಂದರೆ ಬೈಲಹೊಂಗಲದವರು ನಮ್ಮದು ಆಗಲಿ ಅಂತಿದ್ದಾರೆ. ಬೈಲಹೊಂಗಲ ಎಂದರೆ ಗೋಕಾಕ್​ನವರು ನಮ್ಮದೇ ಜಿಲ್ಲೆಯಾಗಲಿ ಎನ್ನುತ್ತಿದ್ದಾರೆ. ಇನ್ನು ಅಥಣಿ ಭಾಗದ ಜನರ ಬೇಡಿಕೆ ಕೂಡ ಇದೆ. ಗಂಡ ಹೆಂಡತಿ ಜಗಳದ ನಡುವೆ ಕೂಸು ಬಡವಾಯ್ತು ಎಂಬಂತೆ ನಮ್ಮ ಪರಿಸ್ಥಿತಿ ಆಗಿದೆ. ರಾಯಬಾಗ, ಅಥಣಿ, ಕಾಗವಾಡ ಕುಡಚಿ ನಾಲ್ಕು ಕ್ಷೇತ್ರ ಮತ್ತು ರಬಕವಿ ಬನಹಟ್ಟಿ, ತೇರದಾಳ ಸೇರಿಸಿ 6 ಕ್ಷೇತ್ರಗಳನ್ನು ಒಳಗೊಂಡು ಅಥಣಿ ಜಿಲ್ಲೆಯನ್ನಾಗಿ ಮಾಡಿದರೆ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಹಾಗಾಗಿ ಈ ಅಧಿವೇಶನದಲ್ಲಿ ಆರು ಕ್ಷೇತ್ರದ ಶಾಸಕರು ತಮ್ಮ ಅಭಿಪ್ರಾಯಗಳನ್ನು ಸರ್ಕಾರಕ್ಕೆ ಸಲ್ಲಿಸಿದರೆ ಒಂದು ನಿರ್ಧಾರ ಮಾಡಬಹುದು" ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

"ಡಿಸೆಂಬರ್ 4 ರಿಂದ ಬೆಳಗಾವಿಯಲ್ಲಿ ಅಧಿವೇಶನ ಪ್ರಾರಂಭ ಆಗುತ್ತಿರುವ ಬಗ್ಗೆ, ಉತ್ತರ ಕರ್ನಾಟಕದಲ್ಲಿ ಜ್ವಲಂತ ಸಮಸ್ಯೆಗಳಿವೆ. ನೆನೆಗುದಿಗೆ ಬಿದ್ದ ಯೋಜನೆಗಳನ್ನು ಪ್ರಾರಂಭಿಸಬೇಕು. 10 ದಿನಗಳ ಕಾಲ ಎಲ್ಲ ಶಾಸಕರು ಇಲ್ಲಿಯೇ ಇದ್ದು ಕಲಾಪದಲ್ಲಿ ಭಾಗವಹಿಸಬೇಕು. ಬೆಳಗಾವಿ ಜಿಲ್ಲೆಯ ಎಲ್ಲಾ ಶಾಸಕರು ಕೂಡ ಭಾಗವಹಿಸಬೇಕು" ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: 'ಹಣಕ್ಕಾಗಿ ಒಂದೇ ಒಂದು ವರ್ಗಾವಣೆ ಮಾಡಿರುವುದು ತೋರಿಸಿದರೆ ರಾಜಕೀಯ ನಿವೃತ್ತಿ'

ETV Bharat Logo

Copyright © 2024 Ushodaya Enterprises Pvt. Ltd., All Rights Reserved.