ETV Bharat / state

ಬೆಳಗಾವಿ ಗ್ರಾಮೀಣ ಕ್ಷೇತ್ರಕ್ಕೆ ವಿಶೇಷ ಅನುದಾನ ನೀಡಿ: ಸಿಎಂ ಬಳಿ ಲಕ್ಷ್ಮೀ ಹೆಬ್ಬಾಳ್ಕರ್ ಮನವಿ

author img

By

Published : Aug 25, 2020, 7:33 PM IST

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಉಂಟಾಗಿರುವ ಪ್ರವಾಹ ಹಾನಿಗೆ ಹೆಚ್ಚಿನ ಪರಿಹಾರ ಬಿಡುಗಡೆ ಮಾಡಬೇಕು ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸಿಎಂ ಬಿಎಸ್​ವೈ ಬಳಿ ಮನವಿ ಮಾಡಿದ್ದಾರೆ.

Lakshmi Hebbalkar
ಸಿಎಂ ಬಳಿ ಲಕ್ಷ್ಮೀ ಹೆಬ್ಬಾಳ್ಕರ್ ಮನವಿ

ಬೆಳಗಾವಿ: ಜಿಲ್ಲೆಯ ಗ್ರಾಮೀಣ ಕ್ಷೇತ್ರಕ್ಕೆ ಕಳೆದ ಬಾರಿಯ ಪ್ರವಾಹದ ಪರಿಹಾರ ಇನ್ನೂ ಬಾಕಿ ಇರುವಾಗಲೇ ಈ ಬಾರಿ ಮತ್ತೆ ಪ್ರವಾಹ ಅಪ್ಪಳಿಸಿದೆ. ಹೀಗಾಗಿ ಬಾಕಿಯ ಜೊತೆಗೆ ವಿಶೇಷ ಅನುದಾನ ಬಿಡುಗಡೆ ಮಾಡಬೇಕು ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಳಿ ಮನವಿ ಮಾಡಿದ್ದಾರೆ.

ಇಂದು ಪ್ರವಾಹದ ವೈಮಾನಿಕ ಸಮೀಕ್ಷೆಗೆಂದು ಆಗಮಿಸಿದ್ದ ಯಡಿಯೂರಪ್ಪಗೆ ಲಕ್ಷ್ಮೀ ಹೆಬ್ಬಾಳ್ಕರ್ ಈ ಕುರಿತು ಮನವಿ ಸಲ್ಲಿಸಿದರು.

ಪ್ರಸ್ತುತ ಆಗಸ್ಟ್​ ತಿಂಗಳಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಸುರಿಯುತ್ತಿದ್ದು, ಇದಕ್ಕೆ ಬೆಳಗಾವಿ ಗ್ರಾಮೀಣ ಕ್ಷೇತ್ರವೂ ಹೊರತಾಗಿಲ್ಲ. ಹಿಂದಿನ ವರ್ಷದ ಅತಿವೃಷ್ಠಿಯಿಂದ ಸರಿಯಾದ ರೀತಿಯಲ್ಲಿ ಪರಿಹಾರ ಸಿಗದೆ ಕಂಗಾಲಾಗಿದ್ದ ಗ್ರಾಮಸ್ಥರು, ಇನ್ನೂ ಸುಧಾರಿಸುತ್ತಿರುವಾಗಲೇ ಈ ವರ್ಷವೂ ಅತಿಯಾಗಿ ಮಳೆ ಸುರಿಯುತ್ತಿದೆ. ಗ್ರಾಮೀಣ ಕ್ಷೇತ್ರವು ಹೆಚ್ಚಾಗಿ ಕೃಷಿಯನ್ನಾಧರಿಸಿದ್ದು, ರೈತರು ಬೆಳೆದ ಬೆಳೆಯು ಸಂಪೂರ್ಣ ಹಾಳಾಗಿದೆ. ಮಳೆ ನೀರಿನಿಂದ ಸಂಪೂರ್ಣ ಆವೃತವಾಗಿ ಯಾವುದೇ ಬೆಳೆಯನ್ನು ಬೆಳೆಯಲಾರದ ಸಂಕಷ್ಟಕ್ಕೆ ರೈತರು ಸಿಲುಕಿದ್ದಾರೆ. ಅಷ್ಟೇ ಅಲ್ಲದೆ ಗ್ರಾಮದಲ್ಲಿರುವ ಸಣ್ಣ ಕೆರೆ, ಅಣೆಕಟ್ಟು ಹಾಗೂ ರಸ್ತೆಗಳು ಸಹ ಹಾಳಾಗಿವೆ. ರಸ್ತೆಗಳು ಮಳೆಯಿಂದ ಹಾಳಾಗಿದ್ದು, ಸಂಚಾರ ವ್ಯವಸ್ಥೆಗೆ ಅಡೆತಡೆಯಾಗಿದೆ. ಹೀಗಾಗಿ ಕ್ಷೇತ್ರದಲ್ಲಿ ಉಂಟಾಗಿರುವ ಹಾನಿಗೆ ಹೆಚ್ಚಿನ ಪರಿಹಾರ ಬಿಡುಗಡೆ ಮಾಡಬೇಕು ಎಂದು ಹೆಬ್ಬಾಳ್ಕರ್ ಕೋರಿದ್ದಾರೆ.

2019 -20ನೇ ಸಾಲಿನಲ್ಲಿ ಸುರಿದ ಅತೀವ ಮಳೆಗೆ ಗ್ರಾಮೀಣ ಕ್ಷೇತ್ರದ ಸುಮಾರು 5 ಸಾವಿರಕ್ಕಿಂತಲೂ ಹೆಚ್ಚಿನ ಮನೆಗಳು ಕುಸಿದಿದ್ದು, ಅದರಲ್ಲಿ ಸುಮಾರು 1,000 ಸಂತ್ರಸ್ಥರಿಗೆ ಪರಿಹಾರ ನೀಡಲಾಗಿದೆ. ಹೆಚ್ಚುವರಿ 1 ಸಾವಿರಕ್ಕಿಂತಲೂ ಹೆಚ್ಚಿನ ಸಂತ್ರಸ್ಥರಿಗೆ ಪರಿಹಾರ ಒದಗಿಸುವಂತೆ ಸಲ್ಲಿಸಿದ ಮನವಿಗೆ ಈವರೆಗೂ ಸ್ಪಂದನೆ ಸಿಕ್ಕಿಲ್ಲ. ಗ್ರಾಮೀಣ ಕ್ಷೇತ್ರದ ಒಟ್ಟಾರೆ 6 ಸಾವಿರಕ್ಕಿಂತಲೂ ಹೆಚ್ಚಿನ ಸಂತ್ರಸ್ಥರಿಗೆ ಪರಿಹಾರ ದೊರಕಬೇಕಿದೆ. ಹೀಗಿರುವಾಗ ಈ ವರ್ಷ ಆಗಸ್ಟ್​ ತಿಂಗಳಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಸುರಿಯುತ್ತಿದ್ದು, ಗ್ರಾಮೀಣ ಕ್ಷೇತ್ರವನ್ನು ಸಂಕಷ್ಟಕ್ಕೀಡುಮಾಡಿದೆ. ಬಾಕಿ ಇರುವ ಸಂತ್ರಸ್ಥರಿಗೆ ಶೀಘ್ರ ಪರಿಹಾರವನ್ನು ಒದಗಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಭೇಂಡಿಗೇರಿ ಗ್ರಾಮದ ಸಣ್ಣ ನೀರಾವರಿ ಇಲಾಖೆಯ ಇಂಗು ಕೆರೆಯು ಆಗಸ್ಟ್​ 6 ಮತ್ತು 7ರಂದು ಸುರಿದ ಭಾರಿ ಮಳೆಗೆ ಸುಮಾರು 10 ಮೀಟರ್ ಕುಸಿದಿದೆ. ಇದರಿಂದ ಯಾವುದೇ ತರಹದ ಜೀವ ಹಾನಿಯಾಗದಿರುವುದು ಸಮಾಧಾನದ ಸಂಗತಿಯಾದರೂ ಕೆಳಭಾಗದ ಜಮೀನಿನಲ್ಲಿರುವ ಫಲವತ್ತಾದ ಮಣ್ಣು ಹಾಗೂ ಸುಮಾರು 20 ಎಕರೆಯಷ್ಟು ಬೆಳೆಗಳು ಹಾನಿಯಾಗಿದೆ. ಅಲ್ಲದೆ ಕೆರೆಯ ಏರಿಯನ್ನು ಮರು ನಿರ್ಮಾಣ ಮಾಡಲು ಅಂದಾಜು ರೂ. 40 ಲಕ್ಷ ರೂ.ಗಳ ಅವಶ್ಯಕತೆ ಇದೆ ಎಂದು ಇಲಾಖೆಯವರು ವರದಿ ಮಾಡಿದ್ದಾರೆ. ಆದ್ದರಿಂದ ಶೀಘ್ರ ಇಲಾಖೆಗೆ ಅನುದಾನ ಮಂಜೂರು ಮಾಡಬೇಕು ಎಂದು ಶಾಸಕಿ ಮನವಿ ಮಾಡಿದ್ದಾರೆ.

ಅಂಬೇವಾಡಿ, ಹಂಗರಗಾ ಹಾಗೂ ಸಂತಿಬಸ್ತವಾಡ ಗ್ರಾಮದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದ್ದು, ಮಳೆ ನೀರು ಹೋಗಲು ಜಾಗವಿಲ್ಲದೆ ರಸ್ತೆಗಳು ತುಂಬಿ, ಕೃಷಿ ಜಮೀನಲ್ಲಿ ನಿಂತು ಕೃಷಿ ಭೂಮಿಯನ್ನು ಸಂಪೂರ್ಣವಾಗಿ ನಾಶಮಾಡಿದೆ. ರೈತರು ಬೆಳೆದ ಬೆಳೆ ಸಂಪೂರ್ಣವಾಗಿ ಈ ಗ್ರಾಮಗಳಲ್ಲಿ ನಾಶವಾಗಿದೆ. ಹೀಗಾಗಿ ಈ ಮೂರು ಗ್ರಾಮಗಳು ಒಂದೇ ತಿಂಗಳಲ್ಲಿ ಮಳೆಗೆ ತತ್ತರಿಸಿ ಹೋಗಿವೆ. ಆದ್ದರಿಂದ ಈ ಗ್ರಾಮಗಳಿಗೆ ವಿಶೇಷ ಅನುದಾನ ಒದಗಿಸಬೇಕು ಎಂದು ಲಕ್ಷ್ಮಿ ಹೆಬ್ಬಾಳ್ಕರ್ ವಿನಂತಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.