ಬೆಳಗಾವಿ: ಈಗಾಗಲೇ ನಡೆಯುತ್ತಿರುವ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳು ಅದ್ಭುತವಾಗಿ ಚರ್ಚೆಯಾಗುತ್ತಿವೆ. ಹಾಗೆ ಈ ಭಾಗದ ನೀರಾವರಿ, ಕೃಷಿ ಸಮಸ್ಯೆ ಮತ್ತು ಜ್ವಲಂತ ಸಮಸ್ಯೆಗಳು ಚರ್ಚೆಯಾಗಲಿವೆ ಎಂದು ಬೆಳಗಾವಿ ನಗರದಲ್ಲಿ ಮಾಧ್ಯಮ ಜೊತೆ ಮಾತನಾಡಿದ ಶಾಸಕ ಕುಮಾರ್ ಬಂಗಾರಪ್ಪ ಹೇಳಿದ್ದಾರೆ. ಅಲ್ಲದೇ ಉತ್ತರ ಕರ್ನಾಟಕದ ನೀರಾವರಿ ಸಮಸ್ಯೆಗಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಸರ್ಕಾರ ಕಾರ್ಯೋನ್ಮುಖವಾಗುತ್ತಿದೆ ಎಂದು ತಿಳಿಸಿದರು.
ಮುಂದುವರೆದು ಕೋವಿಡ್ ಕುರಿತು ಮಾತನಾಡಿದ ಅವರು, ಮುನ್ನೆಚ್ಚರಿಕೆ ಕ್ರಮವಾಗಿ ಕೋವಿಡ್ ಮಾರ್ಗಸೂಚಿಗಳನ್ನು ನಮ್ಮ ಸರ್ಕಾರ ಮಾಡಿರುವುದು ಸ್ವಾಗತರ್ಹ. ಆದರೆ, ಈ ವಿಚಾರದಲ್ಲಿ ಕಾಂಗ್ರೆಸ್, ಜೆಡಿಎಸ್ ರಾಜಕೀಯ ಮಾಡೋದು ಬೇಡ. ಕೋವಿಡ್ ಬಂದಿರೋದು ಚೀನಾದಿಂದ ಹೀಗಾಗಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಈ ಬಗ್ಗೆ ಹೆಚ್ಚಿನ ಕ್ರಮವಹಿಸಿದ್ದಾರೆ ಎಂದರು.
ಹಾಗೆ ಕೇವಲ ಒಂದು ಪಾದಯಾತ್ರೆ , ರ್‍ಯಾಲಿ ತಡೆಗಟ್ಟಲು ಕೋವಿಡ್ ಕ್ರಮ ಅಳವಡಿಕೆ ಮಾಡುತ್ತಿಲ್ಲ ಅಧಿಕಾರಕ್ಕೆ ಬರಲು ಕೇವಲ ಒಂದು ಪಾದಯಾತ್ರೆಯಿಂದ ಸಾಧ್ಯವಾಗುವುದಿಲ್ಲ ಎಂದು ಕಾಂಗ್ರೆಸ್ಗೂ, ಜೆಡಿಎಸ್ಗೂ ಟಾಂಗ್ ನೀಡಿದ್ದಾರೆ.
ಇನ್ನೂ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಪಂಚಮಸಾಲಿ ಸಮಾಜದ 2ಎ ಮೀಸಲಾತಿ ನೀಡಲು ಕಾನೂನು ತೊಡುಕುಗಳಿವೆ. ಆದರೆ ನಮ್ಮ ಮುಖ್ಯ ಮಂತ್ರಿಗಳು ಹತ್ತು ದಿನ ಕಾಲಾವದಿ ಕೇಳಿದ್ದಾರೆ. ಈ ಬಗ್ಗೆ ಸುಧೀರ್ಘ ಚರ್ಚೆ ಮಾಡಿ ಒಳ್ಳೆಯ ನಿರ್ಧಾರ ಪ್ರಕಟ ಮಾಡುತ್ತಾರೆ ಎಂದು ಹೇಳಿದರು.
ಇದನ್ನೂ ಓದಿ: ಭೂ ಪರಿವರ್ತನೆ ಕಾಲಾವಧಿ 7 ದಿನಕ್ಕೆ ಇಳಿಸುವ ಕರ್ನಾಟಕ ಭೂ ಕಂದಾಯ ವಿಧೇಯಕ ಅಂಗೀಕಾರ