ETV Bharat / state

ರಾಜ್ಯದ 2ನೇ ಮಲ ಸಂಸ್ಕರಣಾ ಘಟಕಕ್ಕೆ ಶಾಸಕ ದುರ್ಯೋಧನ ಐಹೊಳೆ ಚಾಲನೆ

author img

By

Published : Nov 1, 2021, 5:25 PM IST

ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮ ವ್ಯಾಪ್ತಿಯಲ್ಲಿ ಸುಮಾರು ನಾಲ್ಕು ಎಕರೆ ಪ್ರದೇಶದಲ್ಲಿ 54 ಲಕ್ಷ ರೂ. ವೆಚ್ಚದಲ್ಲಿ ಮಲ ಸಂಸ್ಕರಣಾ ಘಟಕ ನಿರ್ಮಾಣವಾಗುತ್ತಿದೆ.

MLA Duryodhana Aihole inaugurates Feces waste treatment plant
ರಾಜ್ಯದ 2ನೇ ಮಲ ಸಂಸ್ಕರಣಾ ಘಟಕಕ್ಕೆ ಶಾಸಕ ದುರ್ಯೋಧನ ಐಹೊಳೆ ಚಾಲನೆ

ಚಿಕ್ಕೋಡಿ: ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮ ವ್ಯಾಪ್ತಿಯಲ್ಲಿ ನಿರ್ಮಾಣವಾಗುತ್ತಿರುವ ರಾಜ್ಯದ 2ನೇ ಮಲ ಸಂಸ್ಕರಣಾ ಘಟಕಕ್ಕೆ ಶಾಸಕ ದುರ್ಯೋಧನ ಐಹೊಳೆ ಚಾಲನೆ ನೀಡಿದರು.

'ಸುಮಾರು 4 ಎಕರೆ ಪ್ರದೇಶದಲ್ಲಿ 54 ಲಕ್ಷ ರೂ. ವೆಚ್ಚದಲ್ಲಿ ಮಲ ಸಂಸ್ಕರಣ ಘಟಕ ನಿರ್ಮಾಣವಾಗುತ್ತಿದೆ. ಈ ಸಂಸ್ಕರಣ ಘಟಕದಲ್ಲಿ ಸಂಗ್ರಹವಾಗುವ ಮಲದಿಂದ ಕಾಂಪೋಸ್ಟ್ ಗೊಬ್ಬರ ತಯಾರಿಸಿ ರೈತರಿಗೆ ಪೂರೈಕೆ ಮಾಡುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ' ಎಂದು ಶಾಸಕ ಐಹೊಳೆ ತಿಳಿಸಿದರು.

ಹೆಸ್ಕಾಂ ನಿರ್ದೇಶಕ ಮಹೇಶ್​​ ಭಾತೆ ಮಾತನಾಡಿ, 'ಈ ಪ್ರದೇಶದಲ್ಲಿ ಸುಮಾರು ಒಂದು ಸಾವಿರ ಸಸಿ ನೆಡುವ ಮುಖಾಂತರ ಒಳ್ಳೆಯ ಪರಿಸರ ನಿರ್ಮಾಣ ಮಾಡುವ ಗುರಿಯೂ ಇದೆ' ಎಂದರು.

ಗ್ರಾಮ ಪಂಚಾಯತ್ ಅಧ್ಯಕ್ಷೆ ಸಾವಿತ್ರಿ ಜೇದೆ, ಉಪಾಧ್ಯಕ್ಷ ರಮೇಶ ಚೌಡನ್ನವರ, ಮಾಜಿ ಅಧ್ಯಕ್ಷ ಸಂಜಯ ಕಾಂಬಳೆ, ಸುರೇಶ ಕೇಸ್ತಿ, ಗ್ರಾ.ಪಂ ಸದಸ್ಯ ರಾಜು ಕೋಟಗಿ‌ ಉಪಸ್ಥಿತರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.