ETV Bharat / state

ಸುಮ್ಮನೆ ಜಾತ್ರೆ ಮಾಡುವುದಿದ್ದರೆ ಬೆಳಗಾವಿ ಅಧಿವೇಶನದ ಅವಶ್ಯಕತೆ ಇಲ್ಲ: ಬಸನಗೌಡ ಯತ್ನಾಳ್ ಕಿಡಿ

author img

By

Published : Dec 24, 2021, 5:01 PM IST

ಸಿಎಂ ಬೊಮ್ಮಾಯಿ ಅವರು ಮೊದಲ ಐದು ದಿನ ಉ.ಕರ್ನಾಟಕದ ಬಗ್ಗೆ ಚರ್ಚೆ ಮಾಡಬೇಕಾಗಿತ್ತು. ಅಭಿವೃದ್ಧಿಗೆ ಸರ್ಕಾರ ಯಾವ ರೀತಿಯ ಕ್ರಮ ಕೈಗೊಂಡಿದೆ ಎಂದು ಸಿಎಂ ಹೇಳಬೇಕಿತ್ತು. ಆದರೆ ಆಗಿಲ್ಲ. ಇವುಗಳ ಬಗ್ಗೆ ನಮಗೆ ನೋವಿದೆ. ನಮಗೂ ಮಾತನಾಡುವುದಕ್ಕೆ ಅವಕಾಶ ಸಿಗಲಿಲ್ಲ ಎಂದು ಬಸನಗೌಡ ಯತ್ನಾಳ್ ಆಕ್ಷೇಪ ವ್ಯಕ್ತಪಡಿಸಿದರು.

ಬಸನಗೌಡ ಯತ್ನಾಳ್ ಕಿಡಿ
ಬಸನಗೌಡ ಯತ್ನಾಳ್ ಕಿಡಿ

ಬೆಳಗಾವಿ: ಸುಮ್ಮನೆ ಜಾತ್ರೆ ಮಾಡೋದಿದ್ದರೆ ಬೆಳಗಾವಿ ಅಧಿವೇಶನ ಅವಶ್ಯಕತೆಯಿಲ್ಲ. ಇಲ್ಲಿನ ಸಮಸ್ಯೆಗಳ ಬಗ್ಗೆ ಹೆಚ್ಚು ಚರ್ಚೆ ಆಗಬೇಕು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರತಿಪಾದಿಸಿದರು.

ಬಸನಗೌಡ ಯತ್ನಾಳ್ ಕಿಡಿ

ಸುವರ್ಣಸೌಧದಲ್ಲಿ ಮಾತನಾಡಿದ ಅವರು, ಜಾತ್ರೆ ತರಹ ಬಂದು ಹೋದ್ರೆ ಏನು ಪ್ರಯೋಜನ. ಮುಂದೇ ಈ ರೀತಿ ಆಗಬಾರದು. ನೋವಿನಿಂದ ಹೋಗುತ್ತಿದ್ದೇವೆ. ಮೊದಲ ದೊಡ್ಡ ತಪ್ಪು ಅಂದ್ರೆ ಅಧಿವೇಶನ ಪ್ರಾರಂಭದಲ್ಲೇ ಉ.ಕರ್ನಾಟಕದ ಅಭಿವೃದ್ಧಿ ಬಗ್ಗೆ ಚರ್ಚೆ ಆಗಬೇಕಾಗಿತ್ತು. ಆವಾಗ ಸಚಿವರು ಮತ್ತು ಸಿಎಂ ಇರುತ್ತಿದ್ದರು. ಆಗಲೇ ಉತ್ತರ ಕೊಡಬಹುದಿತ್ತು.

ಉದ್ದೇಶ ಪೂರ್ವಕವಾಗಿ ಕೊನೆ ಎರಡು ದಿನಗಳಲ್ಲಿ ಚರ್ಚೆಗೆ ತೆಗೆದುಕೊಂಡರು‌. ಆದ್ದರಿಂದ ಉ.ಕರ್ನಾಟಕ ಭಾಗದ ಕುರಿತಾದ ಚರ್ಚೆ ಸರಿಯಾಗಿ ನಡೆದಿಲ್ಲ ಎಂದು ಬಸವರಾಜ ಪಾಟೀಲ್ ಯತ್ನಾಳ್​ ಅಸಮಾಧಾನ ವ್ಯಕ್ತಪಡಿಸಿದರು.

ಸುವರ್ಣಸೌಧ ಕೇವಲ 15 ದಿನಕ್ಕೆ ಅಷ್ಟೇ ಉಪಯೋಗ ಆಗುತ್ತಿದೆ. ಸಾಕಷ್ಟು ಕಚೇರಿಗಳು ಇಲ್ಲಿಗೆ ಇರಬೇಕಾಗಿತ್ತು. ಸಿಎಂ ಬೊಮ್ಮಾಯಿ ಅವರು ಮೊದಲ ಐದು ದಿನ ಉ.ಕರ್ನಾಟಕದ ಬಗ್ಗೆ ಚರ್ಚೆ ಮಾಡಬೇಕಾಗಿತ್ತು. ಅಭಿವೃದ್ಧಿಗೆ ಸರ್ಕಾರ ಯಾವ ರೀತಿಯ ಕ್ರಮವನ್ನು ಕೈ ಗೊಂಡಿದೆ ಎಂದು ಸಿಎಂ ಹೇಳಬೇಕಿತ್ತು. ಆದರೆ ಆಗಿಲ್ಲ. ಇವುಗಳ ಬಗ್ಗೆ ನಮಗೆ ನೋವಿದೆ. ನಮಗೂ ಮಾತನಾಡುವುದಕ್ಕೆ ಅವಕಾಶ ಸಿಗಲಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಇನ್ನು ಸಿದ್ದರಾಮಯ್ಯ ಈ ಭಾರಿ ಸದನದಲ್ಲಿ ನಡೆದುಕೊಂಡ ರೀತಿ ಸರಿಯಿಲ್ಲ. ವಿಪಕ್ಷ ನಾಯಕರ ನಡವಳಿಕೆ ಅಸಹ್ಯವಾಗಿತ್ತು. ಮುಂದೆ ಈ ಭಾಗದಲ್ಲಿ ಅಧಿವೇಶನ ಮಾಡಿದರೆ, ಇಲ್ಲಿನ ಸಮಸ್ಯೆ ಕುರಿತು ಚರ್ಚೆ ಮಾಡುವುದಿದ್ದರೆ ಮಾತ್ರ ಇಲ್ಲಿ ಅಧಿವೇಶನ ಕರೆಯಬೇಕು ಎಂದು ಕಾಂಗ್ರೆಸ್ ಮತ್ತು ಸ್ಪೀಕರ್ ಇಬ್ಬರಿಗೂ ಹೇಳುತ್ತೇನೆ. ಮತ್ತೊಂದು ಕಡೆ ಕಾಂಗ್ರೆಸ್​​ಗೆ ಉ.ಕರ್ನಾಟಕ ಬಗ್ಗೆ ಆಸಕ್ತಿ ಇದ್ದರೆ, ಬಿಎಸಿ ಮೀಟಿಂಗ್ ನಲ್ಲೇ ಸಿದ್ದರಾಮಯ್ಯ ಹೇಳಬೇಕಾಗಿತ್ತು.

ಮತಾಂತರ ಬಿಲ್ ಪಾಸ್ ಆದ ಮೇಲೆ ಸಿದ್ದರಾಮಯ್ಯ ಹತಾಶೆ ಗೊಂಡಿದ್ದಾರೆ. ಸೋನಿಯಾ ಗಾಂಧಿಯವರಿಗೆ ಮೆಚ್ಚುಗೆಗೆ ಬಂದಿದ್ದಾರೆ. ಇನ್ನು ಕೆಲವರು ಭಾಷಣ ಮಾಡುವುದಕ್ಕೆ ಬಂದು ಹೋಗಿದ್ದಾರೆ. ಒಟ್ಟಾರೆ ನಮಗೆ ನೋವಾಗಿದೆ. ಮುಂದೆ ಬೆಳಗಾವಿಯಲ್ಲಿ ಅಧಿವೇಶನ ನಡೆದರೆ, ಇಲ್ಲಿನ ಬಗ್ಗೆ ಹೆಚ್ಚು ಚರ್ಚೆ ಆಗಬೇಕು ಎಂದು ಒತ್ತಾಯಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.