ETV Bharat / state

ಅಮಿತ್ ಶಾ ಭೇಟಿಯಾದ ಅತೃಪ್ತ ಶಾಸಕ ಅರವಿಂದ ಬೆಲ್ಲದ: ದೆಹಲಿಗೆ ಬರುವಂತೆ ಸೂಚನೆ

author img

By

Published : Jan 17, 2021, 3:35 PM IST

Updated : Jan 17, 2021, 4:39 PM IST

home minister visits to belgavi news
ಅಮಿತ್ ಶಾ ಭೇಟಿಯಾದ ಅತೃಪ್ತ ಶಾಸಕ ಅರವಿಂದ ಬೆಲ್ಲದ

15:29 January 17

ಅತೃಪ್ತ ಶಾಸಕ ಅರವಿಂದ ಬೆಲ್ಲದ ಬೆಳಗಾವಿಯಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್ ​ಶಾ ಅವರನ್ನು ಭೇಟಿ ಮಾಡಿದ್ದಾರೆ. ಶಾ ಎದುರು ಸಂಪುಟ ವಿಸ್ತರಣೆ ವೇಳೆ ಕಡೆಗಣಿಸಿರುವ ಸಂಬಂಧ ಅಳಲು ಹೇಳಿಕೊಳ್ಳುತ್ತಿದ್ದಂತೆ ಶಾ ಬೆಲ್ಲದ ಅವರಿಗೆ ದೆಹಲಿಗೆ ಬನ್ನಿ ಮಾತಾಡೋಣ ಎಂದು ಭರವಸೆ ಸೂಚನೆ ನೀಡಿದ್ದಾರೆ.

ಬೆಳಗಾವಿ:ಕೇಂದ್ರ ಗೃಹ ಸಚಿವ ಅಮಿತ್ ಶಾ ಬೆಳಗಾವಿಗೆ ಆಗಮನ ಹಿನ್ನೆಲೆ ಅವರನ್ನು ಭೇಟಿಯಾಗಲು ರಾಜ್ಯ ನಾಯಕರು ದೌಡಾಯಿಸಿದ್ದಾರೆ.

ಬೆಳಗಾವಿ ಪ್ರವಾಸಿ ಮಂದಿರದಲ್ಲಿ ಅಮಿತ್ ಶಾರನ್ನು ಅತೃಪ್ತ ಶಾಸಕ ಅರವಿಂದ ಬೆಲ್ಲದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಜೊತೆಗೆ ಶಾರನ್ನು ಭೇಟಿಯಾಗಿದ್ದಾರೆ.ಅಮಿತ್ ಶಾ ಅವರಿಗೆ ಹಾರ ಹಾಕಿ, ಸನ್ಮಾನಿಸಿದ್ದಾರೆ. ಇನ್ನು ಶಾ ಎದುರು ಸಂಪುಟ ವಿಸ್ತರಣೆ ವೇಳೆ ಕಡೆಗಣಿಸಿರುವ ಸಂಬಂಧ ಅಳಲು ಹೇಳಿಕೊಳ್ಳುತ್ತಿದ್ದಂತೆ  ಕೇಂದ್ರ ಗೃಹ ಸಚಿವರು ಬೆಲ್ಲದ ಅವರಿಗೆ ದೆಹಲಿಗೆ ಬನ್ನಿ ಮಾತಾಡೋಣ ಎಂದು ಭರವಸೆ ನೀಡಿದ್ದಾರೆ. ದೆಹಲಿಗೆ ಬರುವಂತೆ ಹೇಳಿದಾಕ್ಷಣ ಶಾಸಕ ಅರವಿಂದ್​ ಬೆಲ್ಲದ ಖುಷಿಯಾಗಿದ್ದಾರೆ.

ಇತ್ತ ಬೆಲ್ಲದ ಭೇಟಿ ಬಳಿಕ  ಬೆಳಗಾವಿ ಲೋಕಸಭೆ ಟಿಕೆಟ್ ಆಕಾಂಕ್ಷೆ ಆಗಿರುವ ಮಾಜಿ ರಾಜ್ಯಸಭಾ ಸದಸ್ಯ ಪ್ರಭಾಕರ್ ಕೋರೆ ಸಹ ಅಮಿತ್​ ಶಾರನ್ನು ಭೇಟಿ ಮಾಡಿದ್ದಾರೆ. ನಂತರ ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಸಚಿವ ಉಮೇಶ್​ ಕತ್ತಿ ಮತ್ತು ಚಿಕ್ಕೋಡಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಕೇಂದ್ರ ಗೃಹ ಸಚಿವ ಅಮಿತ್​ ಶಾ ಭೇಟಿಗೆ ಆಗಮಿಸಿದ್ದಾರೆ.

ಇದನ್ನೂ ಓದಿ:ನೂತನ ಕೃಷಿ ಕಾಯ್ದೆಗಳು ರೈತರ ಆದಾಯ ಹೆಚ್ಚಿಸಲು ಸಹಕಾರಿ: ಅಮಿತ್ ಶಾ

Last Updated : Jan 17, 2021, 4:39 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.