ಬೆಳಗಾವಿ: ಲಾಕ್ಡೌನ್ನಿಂದ ಕಂಗಲಾಗಿರುವ ಬಡ ಜನರನ್ನು ಕ್ಷೇತ್ರದ ಬಡ ಹಾಗೂ ದಿನಗೂಲಿ ಕಾರ್ಮಿಕರಿಗೆ ಆಹಾರ ಕಿಟ್ ವಿತರಿಸುವ ಮೂಲಕ ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಅನಿಲ್ ಬೆನಕೆ ಮಾದರಿ ಕಾರ್ಯ ಮಾಡುತ್ತಿದ್ದಾರೆ.
ಕೊರೊನಾ ವೈರಾಣು ಕಾಡ್ಗಿಚ್ಚಿನಂತೆ ಹಬ್ಬುತ್ತಿದ್ದು, ವಿಶ್ವದಾದ್ಯಂತ ತಲ್ಲಣ ಮೂಡಿಸಿದೆ. ಸೋಂಕಿತರ ಸಂಖ್ಯೆ 36ಕ್ಕೆ ಏರಿಕೆಯಾಗಿದ್ದು, ಗಡಿ ಜಿಲ್ಲೆಯನ್ನು ಕೇಂದ್ರ ಸರ್ಕಾರ ಹಾಟ್ಸ್ಪಾಟ್ ಪಟ್ಟಿಗೆ ಸೇರಿಸಿದೆ. ಲಾಕ್ಡೌನ್ ಎಷ್ಟೇ ದಿನ ಮುಂದುವರೆಯಲಿ ಮತ ಹಾಕಿ ಶಾಸಕರನ್ನಾಗಿಸಿದ ಕ್ಷೇತ್ರದ ಬಡ ಜನರನ್ನು ಉಪವಾಸ ಕೆಡವದಿರಲು ಶಾಸಕರು ನಿರ್ಧರಿಸಿದ್ದಾರೆ. ಅಲ್ಲದೇ ಕ್ಷೇತ್ರದ ಮೂರು ಸಾವಿರ ಕೂಲಿ ಕಾರ್ಮಿಕರಿಗೆ ನಿತ್ಯ ಸಿದ್ಧ ಆಹಾರ ಪೂರೈಸುತ್ತಿದ್ದಾರೆ.
ಆರಂಭದಲ್ಲಿ ಕ್ಷೇತ್ರದ ಎಲ್ಲಾ ಬಡವರ ಮನೆ ಮನೆಗೆ ಸಿದ್ಧ ಆಹಾರ ತಲುಪಿಸಲಾಗುತ್ತಿತ್ತು. ಆದರೆ ಆಹಾರ ವಸ್ತುಗಳ ಕಿಟ್ ನೀಡುವಂತೆ ಜನ ಕೇಳಿಕೊಂಡಿದ್ದಕ್ಕೆ ಇವತ್ತಿನಿಂದ 10 ಆಹಾರ ಪದಾರ್ಥಗಳನ್ನು ಒಳಗೊಂಡ ಕಿಟ್ ವಿತರಿಸಲಾಯಿತು. ಕ್ಷೇತ್ರದ ಉದ್ಯಮಿಗಳು ಹಾಗೂ ದಾನಿಗಳ ಸಹಕಾರದೊಂದಿಗೆ 60ಕ್ಕೂ ಅಧಿಕ ಬಿಜೆಪಿ ಕಾರ್ಯಕರ್ತರು ಮನೆ ಮನೆಗೆ ತೆರಳಿ ಅರ್ಹರಿಗೆ ಆಹಾರ ವಸ್ತುಗಳ ಕಿಟ್ ವಿತರಿಸುತ್ತಿದ್ದಾರೆ. ಕ್ಷೇತ್ರದ 12 ಸಾವಿರ ಬಡ ಕುಟುಂಬಗಳಿಗೆ ಆಹಾರ ಕಿಟ್ ಪೂರೈಸುವ ಗುರಿಯನ್ನು ಶಾಸಕರು ಹೊಂದಿದ್ದಾರೆ. ನಗರದ ಮಹಾಂತ್ ಭವನದಲ್ಲಿ ಸಾಂಕೇತಿಕವಾಗಿ ಇಂದು ಐದು ಜನ ಬಡ ಕಾರ್ಮಿಕರಿಗೆ ಆಹಾರ ಪದಾರ್ಥಗಳ ಕಿಟ್ ಪೂರೈಸಿದರು.