ETV Bharat / state

ಮುಂದಿನ ಐದು ವರ್ಷವೂ ನಾವೇ ಅಧಿಕಾರ ನಡೆಸುತ್ತೇವೆ : ಸಚಿವ ಉಮೇಶ್ ಕತ್ತಿ ವಿಶ್ವಾಸ - Umesh katti Statement on Full Time Power

ಇವತ್ತಿನ ರಾಜಕಾರಣದಲ್ಲಿ ಬಂಡಾಯದ ಬಿಸಿ ಎಲ್ಲರಿಗೂ ಇದೆ. ಕೆಲಸ ಮಾಡುವ ಜನಪ್ರತಿನಿಧಿಗಳನ್ನು‌ ಜನ ಆಯ್ಕೆ ಮಾಡುತ್ತಾರೆ. ಬೆಳಗಾವಿಯ ಜನ ಬುದ್ದಿವಂತರು.‌.

minister-umesh-katti
ಅರಣ್ಯ ಮತ್ತು ಆಹಾರ ಸಚಿವ ಉಮೇಶ್ ಕತ್ತಿ
author img

By

Published : Aug 24, 2021, 6:02 PM IST

ಬೆಳಗಾವಿ : ಬೊಮ್ಮಾಯಿ ಸರ್ಕಾರ ಪೂರ್ಣಾವಧಿ ಮಾಡಲಿದೆ. ಅವರ ನೇತೃತ್ವದಲ್ಲಿ ಮುಂದಿನ ಐದು ವರ್ಷವೂ ನಾವೇ ಅಧಿಕಾರ ನಡೆಸುತ್ತೇವೆ ಎಂದು ಅರಣ್ಯ ಮತ್ತು ಆಹಾರ ಸಚಿವ ಉಮೇಶ್ ಕತ್ತಿ ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸೆಪ್ಟೆಂಬರ್ 3ರಂದು ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ನಾವು 58 ವಾರ್ಡ್‌ಗಳಲ್ಲಿ ಗೆದ್ದೇ ಗೆಲ್ತೇವೆ.

100 ಪರ್ಸೆಂಟ್ ಒಳ್ಳೆಯ ರಿಸಲ್ಟ್ ಕೊಡ್ತೇವೆ. ನಮ್ಮ ಅಭ್ಯರ್ಥಿಗಳು ಜನಸೇವೆ ಮೂಲಕ ರಾಜಕಾರಣಕ್ಕೆ ಬಂದವರು. ನಾವು ಮೇಲಿಂದ ಬಂದವರಲ್ಲ. ಕೆಳಗಿನಿಂದ ಬಂದವರು ಎಂದರು.

ಪಾಲಿಕೆ ಚುನಾವಣೆ ಗೆದ್ದೇ ಗೆಲ್ತೇವೆ ಅನ್ನೋ ವಿಶ್ವಾಸ ವ್ಯಕ್ತಪಡಿಸಿರುವ ಸಚಿವ ಉಮೇಶ್ ಕತ್ತಿ..

ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಗೆ ಬಂಡಾಯದ ಬಿಸಿ ವಿಚಾರಕ್ಕೆ ಅವರು ಪ್ರತಿಕ್ರಿಯಿಸಿದರು. ಇವತ್ತಿನ ರಾಜಕಾರಣದಲ್ಲಿ ಬಂಡಾಯದ ಬಿಸಿ ಎಲ್ಲರಿಗೂ ಇದೆ. ಕೆಲಸ ಮಾಡುವ ಜನಪ್ರತಿನಿಧಿಗಳನ್ನು‌ ಜನ ಆಯ್ಕೆ ಮಾಡುತ್ತಾರೆ. ಬೆಳಗಾವಿಯ ಜನ ಬುದ್ಧಿವಂತರು.‌ ಲೋಕಸಭೆ ಉಪಚುನಾವಣೆಯಲ್ಲಿ ಮಂಗಲ ಅಂಗಡಿಯನ್ನು ಗೆಲ್ಲಿಸಿದ್ದಾರೆ. ಮಹಾನಗರ ಪಾಲಿಕೆ ಗೆದ್ದು ಒಳ್ಳೆಯ ಮೇಯರ್ ಆಯ್ಕೆ ಮಾಡುತ್ತೇವೆ ಎಂದು ತಿಳಿಸಿದರು.

ಹೈಕಮಾಂಡ್ ಜೊತೆ ಸಿಎಂ ಮಾತನಾಡ್ತಾರೆ : ಬೊಮ್ಮಾಯಿ ಸರ್ಕಾರ ಪೂರ್ಣಾವಧಿ ಮಾಡುತ್ತೆ‌. ಅವರ ನೇತೃತ್ವದಲ್ಲಿ ನಾವು ಮುಂದಿನ ಐದು ವರ್ಷವೂ ಅಧಿಕಾರದಲ್ಲಿರುತ್ತೇವೆ. ಅಸಮಾಧಾನ ಇರೋದು ಸಹಜ. ಒಂದು ಮನೆ ಅಂದಮೇಲೆ ಹೆಚ್ಚು ಕಡಿಮೆ ಇರುತ್ತದೆ. ವಲಸಿಗ ಶಾಸಕರಿಗೆ ಸಚಿವ ಸ್ಥಾನ ನೀಡೋದು ಸಿಎಂಗೆ ಬಿಟ್ಟ ವಿಚಾರ.

ಹೈಕಮಾಂಡ್ ಜೊತೆ ಸಿಎಂ ಮಾತನಾಡ್ತಾರೆ. ಬೊಮ್ಮಾಯಿ ಸೇರಿ ಈಗ 30 ಸಚಿವರು ಇದ್ದೇವೆ‌. ಇನ್ನೂ ನಾಲ್ಕು ಸ್ಥಾನ ಖಾಲಿ ಇದೆ. ಒಳ್ಳೆಯವರನ್ನು ಮಂತ್ರಿಯನ್ನಾಗಿ ಮಾಡುತ್ತಾರೆಂಬ ಆಸೆಯಿದೆ ಎಂದರು.

ಕೆಲಸ ಮಾಡ್ತೀನಿ : ತಾತ್ಕಾಲಿಕವಾಗಿ ಉಸ್ತುವಾರಿ ಸಚಿವರನ್ನು ಆಯ್ಕೆ ಮಾಡಿಲ್ಲ.‌ ಬಾಗಲಕೋಟೆ ಉಸ್ತುವಾರಿ ಸಚಿವ ಇರೋವರೆಗೂ ಅಲ್ಲಿಯೇ ಇದ್ದು ಕೆಲಸ ಮಾಡ್ತೀನಿ. ಬೆಳಗಾವಿ ಜಿಲ್ಲಾ ಉಸ್ತುವಾರಿ ಕೊಟ್ಟರೆ ಇಲ್ಲಿ ಬಂದು ಕೆಲಸ ಮಾಡ್ತೀನಿ ಎಂದು ತಿಳಿಸಿದರು.

ಓದಿ: ರಾಘವೇಂದ್ರ ಶ್ರೀಗಳ ಮಧ್ಯಾರಾಧನೆ: ರಾಯರ ದರ್ಶನ ಮಾಡಿದ ಸಿಎಂ ಬೊಮ್ಮಾಯಿ..!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.