ETV Bharat / state

2012ರ ಬಿಪಿಎಲ್​ ಕಾರ್ಡ್ ಮಾನದಂಡಗಳು ಮುಂದುವರಿಯುತ್ತವೆ; ಸಚಿವ ಉಮೇಶ ಕತ್ತಿ

ಮುಖ್ಯಮಂತ್ರಿಗಳ ಜತೆ ಈ ಬಗ್ಗೆ ಚರ್ಚೆನೂ ಆಗಿಲ್ಲ. ಇದರ ಬಗ್ಗೆ ಇಲ್ಲ ಸಲ್ಲದ ಹೇಳಿಕೆ ಕೊಟ್ಟು ಬಡತನ ರೇಖೆಗಿಂತ ಕೆಳಗಿದ್ದ ಜನರನ್ನು ತಪ್ಪು ದಾರಿಗೆ ಒಯ್ಯಬೇಡಿ. 2012 ರಿಂದ ಹೊರಡಿಸಿದ್ದ ಮಾನದಂಡಗಳು ಏನಿವೆಯೋ ಅವೇ ಮುಂದುವರಿಯುತ್ತವೆ ಎಂದು ಸಚಿವ ಉಮೇಶ ಕತ್ತಿ ಹೇಳಿದರು.

Minister Umesh katti statement on BPL card in Belagavi
ಸಚಿವ ಉಮೇಶ ಕತ್ತಿ ಹೇಳಿಕೆ
author img

By

Published : Feb 16, 2021, 12:50 PM IST

ಬೆಳಗಾವಿ: ಬೈಕ್, ಟಿವಿ, ಫ್ರಿಡ್ಜ್ ಇದ್ದವರು ಬಿಪಿಎಲ್ ಕಾರ್ಡ್ ವಾಪಸ್ ನೀಡಿ ಎಂಬ ಹೇಳಿಕೆಗೆ ಸಚಿವ ಉಮೇಶ ಕತ್ತಿ, ನಗರದ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರಕಟಣೆ ಪ್ರತಿ ನೀಡಿ ಕೈ ಮುಗಿದು ಹೊರಡಲು ಮುಂದಾದರು.

ಸಚಿವ ಉಮೇಶ ಕತ್ತಿ ಹೇಳಿಕೆ

ಈ ವೇಳೆ ಮಾಧ್ಯಮ ಪ್ರಕಟಣೆ ಬಗ್ಗೆ ಸ್ಪಷ್ಟನೆ ಕೇಳಿದ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದೆ, ದಯಮಾಡಿ ನಿಮ್ಮ ಟಿವಿ ಮಾಧ್ಯಮಗಳು ಟಿಆರ್‌ಪಿಗಾಗಿ ಏನೂ ಬೇಕಾದರೂ ಮಾಡಿ. ಒಂದು ಸರ್ಕಾರ ಒಬ್ಬ ರಾಜ್ಯದ ಮಂತ್ರಿಯಾಗಿ ಜವಾಬ್ದಾರಿಯುತ ಸ್ಥಾನದಲ್ಲಿದ್ದೇನೆ. ಇಂದಿಗೂ ನನ್ನ ಹೇಳಿಕೆಗೆ ಖಚಿತವಾದ ಸರ್ಕಾರಿ ಆದೇಶಗಳನ್ನು ಕೊಡ್ತೀನಿ. ಈಗಾಗಲೇ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ಪ್ರಿಂಟ್ ಮಾಡಿ ಎಲ್ಲ ಕಡೆ ಹಂಚುತ್ತೇನೆ. ಈ ಬಗ್ಗೆ ಸರ್ಕಾರ, ಸಿಎಂ ಯಾವುದೇ ನಿರ್ದೇಶನ ಕೊಟ್ಟಿಲ್ಲ. ಮುಖ್ಯಮಂತ್ರಿಗಳ ಜತೆ ಈ ಬಗ್ಗೆ ಚರ್ಚೆನೂ ಆಗಿಲ್ಲ. ಇದರ ಬಗ್ಗೆ ಇಲ್ಲ ಸಲ್ಲದ ಹೇಳಿಕೆ ಕೊಟ್ಟು ಬಡತನ ರೇಖೆಗಿಂತ ಕೆಳಗಿದ್ದ ಜನರನ್ನು ತಪ್ಪು ದಾರಿಗೆ ಒಯ್ಯಬೇಡಿ. 2012 ರಿಂದ ಹೊರಡಿಸಿದ್ದ ಮಾನದಂಡಗಳು ಏನಿವೆಯೋ ಅವೇ ಮುಂದುವರಿಯುತ್ತವೆ ಎಂದು ಹೇಳಿದರು.

ಈ ಹಿಂದಿನ ಆದೇಶದಲ್ಲಿ ಬೈಕ್, ಫ್ರಿಡ್ಜ್ ಬಗ್ಗೆ ಇತ್ತಾ ಎಂಬ ಮಾಧ್ಯಮಗಳ ಪ್ರಶ್ನೆಗೆ, ಆದೇಶ ಇದೇ ನೀವೆ ನೋಡಿ ಎಂದು ಹೇಳಿ ಸಚಿವ ಉಮೇಶ ಕತ್ತಿ ತೆರಳಿದರು.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.