ETV Bharat / state

ಪ್ರಯಾಣಿಕರ ಸಮಸ್ಯೆ ಆಲಿಸಲು ರೈಲು ಪ್ರಯಾಣ; ಕೇಂದ್ರ ಸಚಿವರಿಂದ ಪ್ರಾಯೋಗಿಕ ಪರಿಹಾರ

ರೈಲ್ವೆ ಇಲಾಖೆಯಲ್ಲಿರುವ ಸಮಸ್ಯೆಗಳನ್ನು ಆಲಿಸಿ ಅವುಗಳಿಗೆ ಸೂಕ್ತ ಪರಿಹಾರ ನೀಡುವ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದಿಟ್ಟಿರುವ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ರೈಲು ಪ್ರಯಾಣ ಬೆಳೆಸಿದರು.

ಸುರೇಶ್ ಅಂಗಡಿ
author img

By

Published : Jun 23, 2019, 7:54 PM IST

ಬೆಳಗಾವಿ : ರೈಲ್ವೆ ಇಲಾಖೆಯಲ್ಲಿರುವ ಸಮಸ್ಯೆಗಳನ್ನು ಆಲಿಸಿ ಅವುಗಳಿಗೆ ಪ್ರಾಯೋಗಿಕ ಪರಿಹಾರ ನೀಡುವ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದಿಟ್ಟಿರುವ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ರೈಲು ಪ್ರಯಾಣ ಬೆಳೆಸಿದರು.

ಬೆಳಗಾವಿ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಚಿವ ಸುರೇಶ್ ಅಂಗಡಿ, ನಿಲ್ದಾಣದಲ್ಲಿ ಡಬ್ಲಿಂಗ್ ಕಾಮಗಾರಿ ಪರಿಶೀಲಿಸಿದರು. ನಂತರ ಬೆಳಗಾವಿ ಮಾರ್ಗವಾಗಿ ಹುಬ್ಬಳ್ಳಿವರೆಗೆ ರೈಲಿನಲ್ಲಿ ಪ್ರಯಾಣ ಮಾಡಿದರು.

ರೈಲಿನಲ್ಲಿ ಪ್ರಯಾಣಿಸುವ ಮೂಲಕ ಸಮಸ್ಯೆ ಅರಿಯಲು ಹೊರಟ ಕೇಂದ್ರ ಸಚಿವ ಸುರೇಶ್ ಅಂಗಡಿ

ಇದಕ್ಕೂ ಮುನ್ನ ಕಪಿಲೇಶ್ವರ ಮಂದಿರದಿಂದ ಶನಿ ಮಂದಿರದವರೆಗೆ ರೈಲ್ವೆ ಮೆಲ್ಸೇತುವೆ ನಿರ್ಮಾಣವಾಗಿರುವುದರಿಂದ ಪಾದಚಾರಿಗಳಿಗೆ ಅನ್ಯಮಾರ್ಗ ಕಲ್ಪಿಸುವಂತೆ ಸಚಿವ ಅಂಗಡಿಯವರಿಗೆ ಸ್ಥಳೀಯರು ಮನವಿ ಮಾಡಿಕೊಂಡರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು, ತೊಂದರೆ ಸರಿಪಡಿಸಲು ಎಕ್ಸೆಲೇಟರ್, ಅಂಡರ್ ಪಾಸ್ ಅಥವಾ ಎರಡು ಕಡೆ ಲಿಫ್ಟ್ ಸೌಕರ್ಯ ಒದಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

Intro:ಪ್ರಯಾಣಿಕರ ಕುಂದು ಕೊರತೆ ಆಲಿಸಲು ಕೇಂದ್ರ ಸಚಿವರಿಂದ ರೈಲು ಪ್ರಯಾಣ

ಬೆಳಗಾವಿ : ರೈಲ್ವೆ ಇಲಾಖೆಯಲ್ಲಿರುವ ಸಮಸ್ಯೆಗಳನ್ನು ಆಲಿಸಿ ಅವುಗಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದಿಟ್ಟಿರುವ ಸಚಿವ ಸುರೇಶ್ ಅಂಗಡಿ. ರೈಲು ಪ್ರಯಾಣ ಮಾಡುವ ಮುಖಾಂತರ ಜನರ ಸಮಸ್ಯೆ ಆಲಿಸಿದರು.

Body:ಬೆಳಗಾವಿ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ. ರೈಲ್ವೆ ನಿಲ್ದಾಣದಿಂದ ಡಬ್ಲಿಂಗ್ ಕಾಮಗಾರಿಯನ್ನ ಪರಿಶೀಲನೆ ಮಾಡಿದರು. ನಂತರ ಬೆಳಗಾವಿ ಮಾರ್ಗವಾಗಿ ಹುಬ್ಬಳ್ಳಿ ವರೆಗೆ ರೈಲಿನಲ್ಲಿ ಪ್ರಯಾಣ ಮಾಡಿದರು.

Conclusion:ಇದಕ್ಕೂ ಮುನ್ನ ಕಪಿಲೇಶ್ವರ ಮಂದಿರದಿಂದ ಶನಿಮಂದಿರದವರೆಗೆ ರೈಲ್ವೆ ಮೆಲ್ಸೇತುವೆ ನಿರ್ಮಾಣವಾಗಿರುವುದರಿಂದ ಪಾದಚಾರಿಗಳಿಗೆ ಅನ್ಯಮಾರ್ಗ ಕಲ್ಪಿಸುವಂತೆ ಸಚಿವ ಸುರೇಶ ಅಂಗಡಿ ಅವರಿಗೆ ಸ್ಥಳೀಯರು ಮನವಿ ಮಾಡಿಕೊಂಡರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂಧಿಸಿದ ಕೇಂದ್ರ ಸಚಿವರು ಕಪಿಲೇಶ್ವರ ಮಂದಿರದ ಅಕ್ಕಪಕ್ಕದ ಜನರಿಗೆ ಮೆಲ್ಸೇತುವೆ ನಿರ್ಮಾಣ ಮಾಡಿರುವುದರಿಂದ ತೊಂದರೆಯಾಗುತ್ತಿದೆ. ಆದ್ದರಿಂದ ಎಕ್ಸೆಲೆಟರ್, ಅಂಡರ್ ಪಾಸ್ ಅಥವಾ ಎರಡು ಕಡೆ ಲಿಫ್ಟ್ ಮಾಡುವುಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ವಿನಾಯಕ ಮಠಪತಿ
ಬೆಳಗಾವಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.