ಬೆಳಗಾವಿ : ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಮಾರ್ಕೆಟಿಂಗ್ ವುಮೆನ್ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ವ್ಯಂಗ್ಯವಾಡಿದ್ದಾರೆ.
ಗೋಕಾಕ್ ತಾಲೂಕಿನ ಜಮನಾಳ ಗ್ರಾಮದಲ್ಲಿ ರಮೇಶ್ ಜಾರಕಿಹೊಳಿ ಮಂತ್ರಿ ಮಾಡಿದ್ದು ನಾನೇ ಎಂಬ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆ ವಿಚಾರಕ್ಕೆ ಮಾಧ್ಯಮದವರೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ನನ್ನ ಹಿತೈಷಿಗಳು ಆಕೆ ಬಗ್ಗೆ ಮಾತನಾಡದಂತೆ ನನಗೆ ವಾರ್ನಿಂಗ್ ಮಾಡಿದ್ದಾರೆ.
ಆಕೆ ಮಾರ್ಕೆಟಿಂಗ್ ವುಮೆನ್, ಏನೇ ಮಾಡಿದರೂ ಮಾರ್ಕೆಟಿಂಗ್ ಮಾಡಿಕೊಳ್ಳುತ್ತಾಳೆ. ಹೀಗಾಗಿ, ನನ್ನ ಹಿತೈಷಿಗಳು ಆಕೆ ಬಗ್ಗೆ ಮಾತನಾಡದಂತೆ ಬಹಳಷ್ಟು ಮನವಿ ಮಾಡಿದ್ದಾರೆ. ನನ್ನನ್ನು ಯಾರು ಮಂತ್ರಿ ಮಾಡಿದ್ದಾರೆ ಅಂತಾ ಮುಂದೆ ಹೇಳ್ತೇನೆ. ಸಿದ್ದರಾಮಯ್ಯರನ್ನ ಕೇಳಿ ನನ್ನ ಯಾರು ಮಂತ್ರಿ ಮಾಡಿದ್ದು ಅಂತಾ? ಎಂದು ಲಕ್ಷ್ಮಿ ಹೇಳಿಕೆಗೆ ತಿರುಗೇಟು ನೀಡಿದರು.
ಓದಿ: ಪಾರ್ಕಿಂಗ್ ವಿಚಾರದಲ್ಲಿ ಅಂಗಡಿ ಮಾಲೀಕನೊಂದಿಗೆ ಗಲಾಟೆ: ರಿಯಾಲಿಟಿ ಶೋ ಸ್ಪರ್ಧಿ ರಜತ್ ವಿರುದ್ಧ ಕೇಸ್
ಮಹದಾಯಿ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಸಭೆ ಯಶಸ್ವಿ ಆಗಿದೆ ಅನ್ನೊದಕ್ಕಿಂತ ತಾಂತ್ರಿಕ ಹಾಗೂ ಕಾನೂನು ಅಧಿಕಾರಿಗಳು ಸೇರಿ ಕಾರ್ಯನಿರ್ವಹಿಸಬೇಕೆಂಬ ಉದ್ದೇಶದಿಂದ ಸಭೆ ನಡೆಸಿ ಮಾಹಿತಿ ನೀಡಿ, ಯೋಜನೆ ನಮ್ಮ ಪರವಾಗುವಂತೆ ಕೆಲಸ ಮಾಡಲಾಗುತ್ತಿದೆ.
ಮೂರು ರಾಜ್ಯಗಳ ಜಂಟಿ ರಚನೆ ಮಾಡಿಲ್ಲ. ಗೋವಾ ರಾಜ್ಯದವರು ಸುಳ್ಳು ಪ್ರಮಾಣ ಪತ್ರ ಮಾಡಿದ್ದರಿಂದ ಕೋರ್ಟ್ ವರದಿ ಕೇಳಿದೆ. ಆದ್ರೆ, ಯಾವುದೇ ಕಾರಣಕ್ಕೂ ನಾವು ಕಾನೂನು ಉಲ್ಲಂಘನೆ ಮಾಡಲು ಸಾಧ್ಯವಿಲ್ಲ. ಗೋವಾ ರಾಜ್ಯ ಕೋರ್ಟ್ನಲ್ಲಿ ಮತ್ತೊಮ್ಮೆ ಮುಖಭಂಗ ಅನುಭವಿಸಲಿದೆ ಎಂದರು.