ETV Bharat / state

ಪಾಕಿಸ್ತಾನ್ ಜಿಂದಾಬಾದ್ ಎಂದವರು ಕಾಂಗ್ರೆಸ್​​ನಲ್ಲಿದ್ದಾರೆ: ಸಚಿವ ನಾಗೇಶ್ - criticisms against congress

ಬೆಳಗಾವಿಯಲ್ಲಿ ಸಚಿವ ನಾಗೇಶ್ ಅವರು ಕಾಂಗ್ರೆಸ್​ ಬಗ್ಗೆ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

minister nagesh
ಸಚಿವ ನಾಗೇಶ್
author img

By

Published : Dec 21, 2022, 12:03 PM IST

ಸಚಿವ ನಾಗೇಶ್

ಬೆಳಗಾವಿ: ರಾಷ್ಟ್ರೀಯ ವಿಚಾರ ಹಾಗೂ ಹಿಂದೂ ಧರ್ಮದ ಬಗ್ಗೆ ಯಾರು ಮಾತಾಡುವವರ ಬಗ್ಗೆ ಲಘುವಾಗಿ ಕಾಂಗ್ರೆಸ್ ನಾಯಕರು ಮಾತನಾಡುವ ಅಭ್ಯಾಸ ಹೊಂದಿದ್ದಾರೆಂದು ಸಚಿವ ಬಿ.ಸಿ ನಾಗೇಶ್, ಕಾಂಗ್ರೆಸ್ ವಿರುದ್ಧ ಗುಡುಗಿದರು.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಎಂದಿಗೂ ರಾಷ್ಟ್ರೀಯತೆ ಒಪ್ಪಿಕೊಂಡಿಲ್ಲ. ಬ್ರಿಟಿಷರ ಮೌಂಟ್ ಬ್ಯಾಟನ್​​ಗೆ ಸಿಗರೇಟ್ ಹಚ್ಚಿದವರು ಯಾರು ಅಂತ ಗೊತ್ತಿದೆ. ರಾಷ್ಟ್ರ ವಿರೋಧಿ ಮಾತುಗಳನ್ನು ಹೇಳುತ್ತಾ ಬಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

5 ವರ್ಷ ಕಾಂಗ್ರೆಸ್ ಸರ್ಕಾರ ಇತ್ತು. ಅವರಿಗೆ ನಾವು ಯಾವುದಾದರು ಭಾವಚಿತ್ರ ಹಾಕಲು ಅಡ್ಡಿ ಮಾಡಿದ್ದೇವಾ? ಅವರಿಗೆ ಈ ರೀತಿಯ ಐಕಾನ್ಸ್​ಗಳ ಚಿತ್ರ ಹಾಕಿ ಗೊತ್ತಿಲ್ಲ. ಅವರಿಗೆ ಒಂದು ಕುಟುಂಬ ಜೊತೆ ಇದ್ದು, ಒಂದು ಕುಟುಂಬದದಿಂದಲೇ ಈ ದೇಶ ಅನ್ನೋದು ಮಾತ್ರ ಗೊತ್ತು ಎಂದು ಕುಟುಕಿದರು.

ರಾಷ್ಟ್ರದ ವಿರುದ್ಧ ಯಾರು ಮಾತನಾಡಿದ್ದಾರೋ ಅಂತಹವರನ್ನು ಇವರು ಇಟ್ಟುಕೊಂಡಿದ್ದಾರೆ. ಪಾಕಿಸ್ತಾನ ಜಿಂದಾಬಾದ್ ಎಂದವರ ವಿರುದ್ಧ ಇವರು ಕ್ರಮ ಕೈಗೊಳ್ಳಲ್ಲ. ಆರ್ಟಿಕಲ್ 370 ಮಾಡಿದಾಗ ಸಂತೋಷವಾಗಿ ಭಾರತವನ್ನು ಒಡೆಯುವ ಕೆಲಸ ಮಾಡಿದರು. POK ಅನ್ನು ಬಿಟ್ಟುಕೊಟ್ಟು ಬಂದವರು ಈಗ ಸೈನಿಕರ ಬಗ್ಗೆ ಮಾತನಾಡುತ್ತಾರೆ ಎಂದರು.

ಇದನ್ನೂ ಓದಿ: ಚಳಿಗಾಲದ ಅಧಿವೇಶನಕ್ಕೆ ಪ್ರತಿಭಟನೆ ಬಿಸಿ: ಸಂಘಟನೆಗಳಿಂದ ಬೇಡಿಕೆ ಈಡೇರಿಕೆಗೆ ಒತ್ತಾಯ

ಇತಿಹಾಸದ ಪುಸ್ತಕದಲ್ಲಿ ಏನಿತ್ತು? ಇಷ್ಟು ದಿನ ರಾಷ್ಟ್ರಕ್ಕಾಗಿ ಹೋರಾಡಿದವರ ಇತಿಹಾಸ ಇತ್ತಾ? ನಮ್ಮ ರಾಷ್ಟ್ರದ ಮೇಲೆ ಆಕ್ರಮಣ ಮಾಡಿ ಆಳಿದವರ ವಿಚಾರವೇ ಇತ್ತು ಹೊರತು ರಾಷ್ಟದ ಬಗ್ಗೆ ಇರಲಿಲ್ಲ ಎಂದು ಸಚಿವ ನಾಗೇಶ್ ಮಾತಿನ ಉದ್ದಕ್ಕೂ ಕಾಂಗ್ರೆಸ್ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.