ETV Bharat / state

ಶಾಲಾ ಶಿಕ್ಷಕರ ಬಡ್ತಿ ನಿಯಮಗಳ ಪರಿಷ್ಕರಣೆ ಕುರಿತು ನಿರ್ಧರಿಸಲು ಎಂಎಲ್​ಸಿಗಳೊಂದಿಗೆ ಸಭೆ: ಮಧು ಬಂಗಾರಪ್ಪ - ​ ETV Bharat Karnataka

School teachers promotion rules: ಶಾಲಾ ಶಿಕ್ಷಕರಿಗೆ ಬಡ್ತಿ ನೀಡಲು ರೂಪಿಸಿರುವ ನಿಯಮಗಳಲ್ಲಿ ತಾರತಮ್ಯಗಳನ್ನು ಪರಿಹರಿಸುವ ವಿಚಾರವನ್ನು ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಸದನದಲ್ಲಿ ಪ್ರಸ್ತಾಪಿಸಿದರು.

ಸಚಿವ ಮಧು ಬಂಗಾರಪ್ಪ
ಸಚಿವ ಮಧು ಬಂಗಾರಪ್ಪ
author img

By ETV Bharat Karnataka Team

Published : Dec 7, 2023, 4:33 PM IST

ಬೆಂಗಳೂರು: ಶಾಲಾ ಶಿಕ್ಷಕರಿಗೆ ಬಡ್ತಿ ನೀಡಲು ರೂಪಿಸಿರುವ ನಿಯಮಗಳಲ್ಲಿ ಪರಿಷ್ಕರಣೆ ಮಾಡುವ ಕುರಿತು ಇನ್ನೊಂದು ವಾರದಲ್ಲಿ ವಿಧಾನ ಪರಿಷತ್ ಸದಸ್ಯರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಸ್ಪಷ್ಟಪಡಿಸಿದ್ದಾರೆ.

ವಿಧಾನ ಪರಿಷತ್ ಕಲಾಪದಲ್ಲಿ ಇಂದು ಶಾಲಾ ಶಿಕ್ಷಕರಿಗೆ ಬಡ್ತಿ ನೀಡಲು ರೂಪಿಸಿರುವ ನಿಯಮಗಳಲ್ಲಿ ತಾರತಮ್ಯ ಪರಿಹರಿಸುವಂತೆ ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಪ್ರಸ್ತಾಪಿಸಿದ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದ ಸಚಿವರು, ಬಡ್ತಿ ವೇಳೆ ಅಗತ್ಯ ತರಬೇತಿ ನೀಡುವುದನ್ನು ಒಪ್ಪಿಕೊಳ್ಳುತ್ತೇನೆ. ಆದರೆ ಬಡ್ತಿಗೆ ಪರೀಕ್ಷೆ ಬರೆಯಬೇಕು ಎನ್ನುವುದನ್ನು ಒಪ್ಪಲು ಸಾಧ್ಯವಿಲ್ಲ. 2014ರ ಸಿ ಆ್ಯಂಡ್ ಆರ್ ರೂಲ್ ಬದಲಾವಣೆ ಸೇರಿದಂತೆ ಬಡ್ತಿ ಸಂದರ್ಭದಲ್ಲಿ ಶಿಕ್ಷಕರು ಪರೀಕ್ಷೆ ಬರೆಯುವ ಪದ್ದತಿ ರದ್ದುಪಡಿಸುವ ಕುರಿತು ವಿಧಾನ ಪರಿಷತ್ ಸದಸ್ಯರೊಂದಿಗೆ ಚರ್ಚಿಸಿ ಹೆಜ್ಜೆ ಇಡುತ್ತೇವೆ ಎಂದರು.

ಅನುಪಾತದ ವಿಚಾರದ ಬಗ್ಗೆ ಈಗ ಭರವಸೆ ನೀಡಲ್ಲ, ಚರ್ಚಿಸುವಾಗ ಇದನ್ನೂ ಪರಿಗಣಿಸೋಣ. ಡಿಸೆಂಬರ್15ರೊಳಗೆ ಮಂಗಳವಾರ ಅಥವಾ ಬುಧವಾರ ಚರ್ಚಿಸಿ ನಿರ್ಧರಿಸೋಣ. ಮಕ್ಕಳಿಗೆ ಅನುಕೂಲಕರವಾದ ಬದಲಾವಣೆಗೆ ನಾವು ಸಿದ್ದರಿದ್ದೇವೆ, ಶಿಕ್ಷಕರ ಪರವಾಗಿರುತ್ತೇನೆ. ಬರೀ ಅಧಿಕಾರಿಗಳೇ ಇಲಾಖೆ ನಡೆಸುತ್ತಾರೆ ಎನ್ನುವುದನ್ನು ಮನಸ್ಸಿನಿಂದ ತೆಗೆದುಹಾಕಿ, ನಾವೆಲ್ಲಾ ಸೇರಿ ಆಡಳಿತ ನಡೆಸುತ್ತಿದ್ದೇವೆ ಎಂದು ತಿಳಿಸಿದರು.

ವಿ.ವಿಗಳ ಮೂಲಸೌಕರ್ಯ ಕೊರತೆ ನೀಗಿಸಲು ಸಿಎಂ ಜೊತೆ ಸಭೆ: ಪ್ರಾದೇಶಿಕ ಅಸಮತೋಲನ ನಿರ್ಮೂಲನೆ ಮಾಡುವ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ಜಿಲ್ಲೆಗಳಲ್ಲಿ ಉನ್ನತ ಶಿಕ್ಷಣದ ವಾರ್ಷಿಕ ನೋಂದಣಿ ಅನುಪಾತ ಸುಧಾರಿಸುವ ನಿಟ್ಟಿನಲ್ಲಿ ಸ್ಥಾಪಿಸಿರುವ ವಿಶ್ವವಿದ್ಯಾಲಯಗಳಲ್ಲಿನ ಮೂಲಭೂತ ಸೌಕರ್ಯಗಳ ಕೊರತೆ ನೀಗಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಸ್ಪಷ್ಟಪಡಿಸಿದ್ದಾರೆ.

ವಿಧಾನ ಪರಿಷತ್ ಕಲಾಪದಲ್ಲಿ ಜೆಡಿಎಸ್ ಸದಸ್ಯರಾದ ಗೋವಿಂದರಾಜು, ಕೆ.ಎ.ತಿಪ್ಪೇಸ್ವಾಮಿ, ಸೂರಜ್ ರೇವಣ್ಣ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದ ಸಚಿವ ಸುಧಾಕರ್, ಯಾವುದೇ ರೀತಿ ಆರ್ಥಿಕ ಸಹಾಯ ಇಲ್ಲದೇ ಇದ್ದರೆ ವಿವಿಗಳ ಸಂಕಷ್ಟಕ್ಕೆ ಸಿಲುಕುವುದು ಖಚಿತವಾಗಿದೆ. ಮೈಸೂರು ಮಹಾರಾಜರು ಸ್ಥಾಪಿಸಿದ ವಿ.ವಿ ಇಂದು ಯಾವ ಮಟ್ಟಕ್ಕೆ ತಲುಪಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಇತಿಹಾಸ ಇರುವ ವಿ.ವಿಗಳಲ್ಲಿ ಹಣಕಾಸು ಮುಗ್ಗಟ್ಟಿದೆ, ಸ್ವಂತ ಸಂಪನ್ಮೂಲಗಳಿಂದ ವಿಶ್ವವಿದ್ಯಾಲಯಗಳನ್ನು ನಡೆಸಬೇಕು ಎನ್ನುವಂತಾಗಿದೆ.

ಇದರಿಂದಾಗಿ ಬಡವರು, ಎಸ್ಸಿಎಸ್ಟಿಗಳಿಂದ ಹೆಚ್ಚಿನ ಹಣ ಪಡೆದರೆ ಖಾಸಗಿ ವಿವಿಗೂ ನಮ್ಮ ವಿವಿಗಳಿಗೂ ವ್ಯತ್ಯಾಸವೇ ಇರುವುದಿಲ್ಲ. ಹಾಗಾಗಿ ಒಂದು ಹೊಸ ವಿ.ವಿ ಸ್ಥಾಪನೆಯಾದರೆ ಐದು ವರ್ಷಕ್ಕೆ ಎಷ್ಟು ಹಣ ಬೇಕಾಗಲಿದೆ ಎನ್ನುವ ಕುರಿತು ಸಮಿತಿ ರಚಿಸಿ ವರದಿ ಪಡೆಯಲಾಗಿದೆ. ಆ ವರದಿಯಂತೆ ಹೊಸ ವಿವಿ ಐದು ವರ್ಷ ನಡೆಯಲು 342 ಕೋಟಿ ರೂ ಬೇಕಾಗಲಿದೆ. ಆದರೆ ಹಿಂದಿನ ಸರ್ಕಾರ ಅವೈಜ್ಞಾನಿಕವಾಗಿ ಯಾವುದೇ ರೀತಿ ವಿವಿ ಸ್ಥಾಪನೆ ಮಾಡಬೇಕಾದರೆ ಅನುಸರಿಸಬೇಕಾದ ಮಾನದಂಡ ಅನುಸರಿಸಲ್ಲ. ಇದರಿಂದ ವಿವಿಗಳು ಮೂಲಸೌಕರ್ಯ ಸಮಸ್ಯೆ ಎದುರಿಸುತ್ತಿವೆ. ಇದನ್ನು ಸಿಎಂ ಗಮನಕ್ಕೆ ತಂದಿದ್ದೇನೆ, ಮುಂದಿನ ದಿನಗಳಲ್ಲಿ ಸರ್ಕಾರ ಸೂಕ್ತ ಕ್ರಮ ವಹಿಸಲಿದೆ ಎಂದರು.

ಈಗಾಗಲೇ ವಿವಿಗಳ ಸ್ಥಾನಪನೆ ನಂತರ ಐದು ವರ್ಷಕ್ಕೆ ಬೇಕಾಗುವ ಸಂಪನ್ಮೂಲದ ಪ್ರಮಾಣದ ಕುರಿತ ವರದಿಯನ್ನು ಪಡೆದಿದ್ದು ಸಧ್ಯದಲ್ಲೇ ಅದನ್ನು ಸಿಎಂ ಗಮನಕ್ಕೆ ತರಲಿದ್ದೇನೆ, ಸಿಎಂ ಜೊತೆ ಚರ್ಚಿಸಿ ಒಂದು ನಿರ್ಧಾರ ಕೈಗೊಳ್ಳಲಿದ್ದೇವೆ. ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಅವರು ಪಡೆಯುವ ಪದವಿಗೆ ಗೌರವ ಸಿಗುವಂತೆ ಮಾಡುತ್ತೇವೆ. ಮೂಲಸೌಕರ್ಯ ಕಲ್ಪಿಸಲು ಏನೆಲ್ಲಾ ಮಾಡಬಹುದು ಎನ್ನುವ ಕುರಿತು ಚರ್ಚಿಸಿ ನಿರ್ಧರಿಸುತ್ತೇವೆ ಎಂದು ತಿಳಿಸಿದರು.

ಇದನ್ನೂ ಓದಿ: ವಿದ್ಯಾರ್ಥಿಗಳಿಗೆ ಉಚಿತ ಬೈಸಿಕಲ್ ವಿತರಣೆ ಬಗ್ಗೆ ಸಿಎಂ ಜೊತೆ ಚರ್ಚೆ: ಸಚಿವ ಮಧು ಬಂಗಾರಪ್ಪ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.