ಬೆಳಗಾವಿ: ಕನ್ನಡ ಭಾಷೆ ನಮಗೆ ತಾಯಿ ಸಮಾನ. ಸೂರ್ಯ-ಚಂದ್ರ ಇರುವವರೆಗೂ ಈ ಭಾಷೆ ಇರುತ್ತದೆ ಎಂದು ಸಚಿವ ಗೋವಿಂದ ಕಾರಜೋಳ ಹೇಳಿದರು. ಹಿಂದಿ ಭಾಷೆ ಹೇರಿಕೆ ಜಟಾಪಟಿ ಕುರಿತು ಬೆಳಗಾವಿಯಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸುತ್ತಾ, ಯಾರ ಜಟಾಪಟಿನೂ ಅಗತ್ಯ ಇಲ್ಲ. ದೇಶದಲ್ಲಿ ಆಯಾ ಪ್ರದೇಶ, ರಾಜ್ಯಗಳಲ್ಲಿ ಮಾತೃಭಾಷೆ ಇದೆ. ಅದೇ ರೀತಿ ಕರ್ನಾಟಕದಲ್ಲಿ ಕನ್ನಡ ಮಾತೃಭಾಷೆ ಎಂದರು.
ಬ್ರಿಟಿಷರು, ಮುಸ್ಲಿಮರು, ಪೋರ್ಚುಗೀಸರು ಸೇರಿ ದೇಶವನ್ನು 600 ವರ್ಷಗಳ ಕಾಲ ಪರಕೀಯರು ಆಳಿದ್ದಾರೆ. ಆದರೂ ಸಹ ಕನ್ನಡ ಭಾಷೆ ನಶಿಸಿ ಹೋಗಿಲ್ಲ, ಹಿಂದೂ ಧರ್ಮ ನಶಿಸಿ ಹೋಗಿಲ್ಲ. ಹಿಂದೂ ಧರ್ಮ ಮತ್ತು ಮಾತೃ ಭಾಷೆ ಶಾಶ್ವತವಾಗಿ ಇರುತ್ತದೆ ಎಂದು ಹೇಳಿದರು.
ಇದನ್ನೂ ಓದಿ : ಚಿಕ್ಕಮಗಳೂರು: ಬೆಳಗಾವಿ ಮೂಲದ ಸೂಪರ್ ವೈಸರ್ ಆತ್ಮಹತ್ಯೆಗೆ ಶರಣು
ಸಿಎಂ ನಾಳೆ ದೆಹಲಿಗೆ: ಸಂಪುಟ ವಿಸ್ತರಣೆ ಚರ್ಚೆ ಬೆನ್ನಲ್ಲೇ ನಾಳೆ ಸಿಎಂ ದೆಹಲಿ ಪ್ರವಾಸ ಕೈಗೊಳ್ಳಲಿದ್ದಾರೆ. ದೆಹಲಿ ವರಿಷ್ಠರ ಜತೆ ಚರ್ಚೆ ಮಾಡಿ ಬಂದ ಬಳಿಕ ಸಿಎಂ ಏನು ನಿರ್ಧಾರ ತಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡೋಣ. ಸಂಪುಟ ಪುನರ್‌ರಚನೆ, ವಿಸ್ತರಣೆ ಸಿಎಂ ಪರಮಾಧಿಕಾರ ಎಂದು ಕಾರಜೋಳ ತಿಳಿಸಿದರು.