ಬೆಳಗಾವಿ: ಎಂಇಎಸ್ ಆಗಲಿ, ಬೇರೆ ಯಾರೇ ಏನೇ ಮಾಡಿದರೂ ಅವರ ಪ್ರಯತ್ನ ಫಲಿಸುವುದಿಲ್ಲ. ಬಿಜೆಪಿ ಅಭ್ಯರ್ಥಿಯ ಗೆಲುವು ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
ಇಂದು ಎಂಇಎಸ್ ಅಭ್ಯರ್ಥಿ ಪರ ಶಿವಸೇನೆಯ ಸಂಜಯ್ ರಾವತ್ ಪ್ರಚಾರ ನಡೆಸುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಇಡೀ ದೇಶದಲ್ಲಿ ಮೋದಿ ನಾಯಕತ್ವಕ್ಕೆ ಎಲ್ಲ ಸಮಾಜದವರಿಂದಲೂ ಬೆಂಬಲವಿದೆ. ಮೊದಲಿನ ಟ್ರೆಂಡ್ ಇವತ್ತೂ ಇದ್ದು ಯಾರೇ ಡಿಸ್ಟರ್ಬ್ ಮಾಡಿದರೂ ಡಿಸ್ಟರ್ಬ್ ಆಗೊದಿಲ್ಲ. ಎಂಇಎಸ್ ಅಭ್ಯರ್ಥಿ ಪರ ಶಿವಸೇನೆ ಮುಖಂಡರ ಪ್ರಚಾರ ಬಗ್ಗೆ ಮಾತನಾಡಲ್ಲ. ಬಿಜೆಪಿ ಅಭ್ಯರ್ಥಿ ಗೆಲುವು ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದರು.
ಬೆಲೆ ಏರಿಕೆ ವಿಚಾರ ಚುನಾವಣೆಯಲ್ಲಿ ಪರಿಣಾಮ ಬೀರಲ್ಲ. ನಾವು ಕ್ಯಾಂಪೇನ್‌ಗೆ ಹೋದಲ್ಲಿ ಯಾರೂ ಬೆಲೆ ಏರಿಕೆ ಬಗ್ಗೆ ಪ್ರಶ್ನಿಸಿಲ್ಲ. ಕಾಂಗ್ರೆಸ್ ಬೆಲೆ ಏರಿಕೆ ಇಶ್ಯೂ ಮಾಡಿದೆ ಅದೇನೂ ಪರಿಣಾಮ ಬೀರಲ್ಲ. ಮೊದಲು ಏನು ಪ್ಲ್ಯಾನ್ ಇತ್ತೋ ಆ ಪ್ರಕಾರವೇ ಸಿಎಂ ಪ್ರಚಾರ ಮಾಡಲಿದ್ದಾರೆ. ಇಂದು ಸಿಎಂ ಬಿಎಸ್‌ವೈ ಚುನಾವಣಾ ಪ್ರಚಾರಕ್ಕೆ ಬರ್ತಿದ್ದಾರೆ. ಇಂದು ಮಧ್ಯಾಹ್ನ ಬಾಳೇಕುಂದ್ರಿ ಕೆ.ಹೆಚ್. ಗ್ರಾಮದಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ಬಳಿಕ ಮಧ್ಯಾಹ್ನ ಸ್ಥಳೀಯ ನಾಯಕರ ಜೊತೆ ಸಮಾಲೋಚನೆ ನಡೆಸಲಿದ್ದು, ಸಂಜೆ 4.30ಕ್ಕೆ ಅರಭಾವಿ ಕ್ಷೇತ್ರ ವ್ಯಾಪ್ತಿಯ ಮೂಡಲಗಿಯಲ್ಲಿ ಪ್ರಚಾರ ಸಭೆ ನಡೆಯಲಿದೆ. ಬಳಿಕ ಗೋಕಾಕ್‌ನಲ್ಲಿ ರೋಡ್ ಶೋ ಮಾಡಿ ಬಳಿಕ ಚುನಾವಣಾ ಪ್ರಚಾರ ಮಾಡ್ತಾರೆ ಎಂದರು.
ಜಿಲ್ಲೆಯ ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲೂ ಬಿಜೆಪಿಗೆ ಹೆಚ್ಚಿನ ಲೀಡ್ ಬರುತ್ತದೆ. ನಿನ್ನೆ ಎಲ್ಲಾ ವಿಧಾನಸಭಾ ಕ್ಷೇತ್ರಕ್ಕೆ ಭೇಟಿ ನೀಡಿ ಬಂದಿದ್ದೇನೆ. ಎಲ್ಲ ಕಡೆ ಕಾರ್ಯಕರ್ತರು ಪರಿಣಾಮಕಾರಿ ಕ್ಯಾಂಪೇನ್ ಮಾಡಿದಾರೆ. ನಮ್ಮ ಕಾರ್ಯಕರ್ತರು ಮನೆಮನೆಗೆ ಹೋಗಿ ಕ್ಯಾಂಪೇನ್ ಮಾಡಿದ್ದಾರೆ. ಗ್ರೌಂಡ್ ಲೆವೆಲ್‌ನಲ್ಲಿ ನಮ್ಮ ಕೆಲಸ ಕಾರ್ಯಗಳು ಮುಂದುವರೆಯುತ್ತವೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.