ಚಿಕ್ಕೋಡಿ : ಕಾಗವಾಡ ಮತಕ್ಷೇತ್ರದಲ್ಲಿ ಹಿನ್ನಡೆ ಮತ್ತೊಂದು ಮಗದೊಂದು ಎಂಬ ಪ್ರಶ್ನೆನೇ ಇಲ್ಲ ಎಂದು ಬೆಳಗಾವಿ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಹೇಳಿದರು.
ಕಾಗವಾಡ ವಿಧಾನಸಭಾ ಮತಕ್ಷೇತ್ರದ ಉಪಚುನಾವಣೆ ಪ್ರಚಾರಕ್ಕೆ ಕೆಂಪವಾಡ ಗ್ರಾಮಕ್ಕೆ ಆಗಮಿಸಿದಾಗ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ಚುನಾವಣೆಗಳನ್ನ ಬಿಜೆಪಿ ಹಾಗೂ ನಾವೆಲ್ಲಾ ಬಹಳ ಗಂಭೀರವಾಗಿ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು. ಸಿಎಂ ಯಡಿಯೂರಪ್ಪನವರಿಗೆ ಸಮುದಾಯ ಹಾಗೂ ಎಲ್ಲಾ ವರ್ಗದ ಸಮಾಜದ ಬೆಂಬಲ ಇದೆ. ಈಗ ಶಾಸಕರು ಒಂದು ಸಮುದಾಯದವರು ಬೇಕೋ ಅಥವಾ ಮುಖ್ಯಮಂತ್ರಿ ಸಮುದಾಯದವರು ಬೇಕೋ ಎಂಬ ಪ್ರಶ್ನೆ ಇದೆ ಎಂದರು.
ಡಿ ಕೆ ಶಿವಕುಮಾರ್ಗೆ ಪ್ರಚಾರದಿಂದ ದೂರವಿಡಲು ಐಟಿ ನೋಟಿಸ್ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಡಿಕೆಶಿ ಬರುವುದರಿಂದ ಹೋಗುವುದರಿಂದ ಯಾವುದೇ ದೊಡ್ಡ ಪರಿಣಾಮ ಆಗಲ್ಲ ಎಂದು ಶೆಟ್ಟರ್ ಹೇಳಿದರು.