ETV Bharat / state

‘ಕಾಂಗ್ರೆಸ್ ಮುಳುಗುತ್ತಿರುವ ಹಡುಗು, ಅಸ್ತಿತ್ವ ಕಳೆದುಕೊಂಡ ಜೆಡಿಎಸ್.. ಬಿಜೆಪಿಗೆ ಉಜ್ವಲ ಭವಿಷ್ಯ’ - ಬೆಳಗಾವಿಯಲ್ಲಿ ಗ್ರಾಮ ಸ್ವರಾಜ್ಯ ಸಮಾವೇಶ

ಬಿಜೆಪಿಯಲ್ಲಿರುವ ಕಾರ್ಯಕರ್ತರ ಬಲದಿದಂದ ಮುಂದೆ ಯಾವ ಪಕ್ಷಕ್ಕೂ ಬಿಜೆಪಿಯನ್ನು ಸೋಲಿಸಲು ಸಾಧ್ಯವಿಲ್ಲ. ಹೀಗಾಗಿ ಬಿಜೆಪಿಯಲ್ಲಿ ಕಾರ್ಯಕರ್ತರನ್ನು ಬಲಪಡಿಸುವ ಉದ್ದೇಶಕ್ಕಾಗಿಯೇ ದೇಶದ ಎಲ್ಲ ಸ್ಥಳೀಯ ಚುನಾವಣೆಗಳಲ್ಲಿ ಸಹ ಕಾರ್ಯಕರ್ತರ ಗೆಲುವಿಗಾಗಿ ರಾಷ್ಟ್ರ ಮಟ್ಟದ ನಾಯಕರು ಕ್ಯಾಂಪೇನ್ ಮಾಡುತ್ತಿದ್ದಾರೆ..

ಬೆಳಗಾವಿಯಲ್ಲಿ ಗ್ರಾಮ ಸ್ವರಾಜ್ಯ ಸಮಾವೇಶದಲ್ಲಿ ಸಚಿವ ಜಗದೀಶ್ ಶೆಟ್ಟರ್ ಭಾಗಿ

author img

By

Published : Dec 2, 2020, 4:04 PM IST

ಬೆಳಗಾವಿ : ದೇಶದಲ್ಲಿ ಕಾಂಗ್ರೆಸ್ ಮುಳುಗುತ್ತಿರುವ ಹಡುಗು, ಜೆಡಿಎಸ್ ಅಸ್ತಿತ್ವ ಕಳೆದುಕೊಳ್ಳುತ್ತಿದೆ ಎಂದು ಸಚಿವ ಜಗದೀಶ ಶೆಟ್ಟರ್ ಹೇಳಿದ್ದಾರೆ.

ಬೆಳಗಾವಿಯಲ್ಲಿ ಗ್ರಾಮ ಸ್ವರಾಜ್ಯ ಸಮಾವೇಶದಲ್ಲಿ ಸಚಿವ ಜಗದೀಶ್ ಶೆಟ್ಟರ್..

ನಗರದ ಧರ್ಮನಾಥ ಸಭಾಭವನದಲ್ಲಿ ಹಮ್ಮಿಕೊಂಡ ಗ್ರಾಮ ಸ್ವರಾಜ್ಯ ಸಮಾವೇಶದಲ್ಲಿ ಮಾತನಾಡಿದ ಸಚಿವ ಜಗದೀಶ ಶೆಟ್ಟರ್, ಕಾಂಗ್ರೆಸ್ ಪಕ್ಷ ಇಂದು ಅಧೋಗತಿಯತ್ತ ಸಾಗುತ್ತಿದೆ. ಕೆಲ ರಾಜ್ಯಗಳಲ್ಲಿ ಮಾತ್ರ ಉಳಿದಿದ್ದು, ಇನ್ನೇನು ಕೆಲ ದಿನಗಳಲ್ಲಿ ಸರ್ವನಾಶವಾಗಲಿದೆ‌. ಜೆಡಿಎಸ್ ಪಕ್ಷ ಕೆಲ ಭಾಗಗಳಲ್ಲಿ ಅಸ್ತಿತ್ವದಲ್ಲಿತ್ತು. ಅಲ್ಲಿ ಬಿಜೆಪಿ ಗೆಲ್ಲುವ ಮೂಲಕ ಜೆಡಿಎಸ್ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿದೆ ಎಂದು ಕುಟುಕಿದರು.

ಕಾಂಗ್ರೆಸ್​ನಲ್ಲಿ ನೆಹರೂ, ಇಂದಿರಾ ಗಾಂಧಿ, ರಾಜೀವ್ ಗಾಂಧಿ ನಂತರ ಸೋನಿಯಾ ಗಾಂಧಿ, ಪ್ರಿಯಾಂಕಾ ಈಗ ಸಣ್ಣ ಹುಡುಗ ರಾಹುಲ್ ಗಾಂಧಿ ನಾಯಕತ್ವ ಇರುವ ಕಾಂಗ್ರೆಸ್​, ಕುಟುಂಬವೇ ಆದ್ಯತೆ ಆಗಿರುವ ಪಕ್ಷವಾಗಿದೆ. ಆದರೆ, ಬಿಜೆಪಿ ಸಾಮೂಹಿಕ ನಾಯಕತ್ವದ ತತ್ವ ಇಟ್ಟುಕೊಂಡ ಪಕ್ಷವಾಗಿದೆ. ಇಂದಿಗೂ ಕಾಂಗ್ರೆಸ್ ಒಂದೇ ಕುಟುಂಬಕ್ಕೆ ಜೋತು ಬಿದ್ದ ಪರಿಣಾಮ, ಇದೀಗ ಸ್ವಪಕ್ಷೀಯರೇ ಆಕ್ಷೇಪ ವ್ಯಕ್ತಪಡಿಸುವ ಸ್ಥಿತಿ ಬಂದಿದೆ.

ಅವರ ಪಕ್ಷದವರೇ ಅವರಿಗೆ ಬಿಜೆಪಿ ಕಾರ್ಯಕರ್ತರನ್ನು ನೋಡಿ ಕಲಿಯಿರಿ ಎನ್ನುತ್ತಿದ್ದಾರೆ. ಮುಂದಿನ‌ ದಿನಗಳಲ್ಲಿ ಕಾಂಗ್ರೆಸ್ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತದೆ. ಮುಂದೆ ಬಿಜೆಪಿಗೆ ಇನ್ನೂ ಉತ್ತಮ ಭವಿಷ್ಯ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.‌

ಕಾಂಗ್ರೆಸ್ ಪಕ್ಷ ಬಳಸಿಕೊಳ್ಳದ ರಮೇಶ ಜಾರಕಿಹೊಳಿ‌ಯನ್ನ ಬಿಜೆಪಿ ಬಳಸಿಕೊಳ್ಳುತ್ತಿದೆ. ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಮಂತ್ರಿ ಆದಾಗ ಬಹಳಷ್ಟು ‌ಜನರು ಇವರೇನು ಮಾಡುತ್ತಾರೆ ಅಂದಿದ್ದರು.

ಆದರೆ, ಜಲಸಂಪನ್ಮೂಲ ಇಲಾಖೆ‌ಯ ಕಾಮಗಾರಿ ಹಾಗೂ ಮಹದಾಯಿ ನೀರು ಉಪಯೋಗಕ್ಕೆ ನೋಟಿಫಿಕೇಷನ್, ಕಳಸಾ ಬಂಡೂರಿಗೆ 500 ಕೋಟಿ ರೂ. ಅನುದಾನ ಸೇರಿದಂತೆ ಹಲವಾರು ಅಭಿವೃದ್ಧಿ ಕಾಮಗಾರಿಗಳು ರಮೇಶ ಜಾರಕಿಹೊಳಿ ಅವರಿಂದಲೇ ಸಾಧ್ಯವಾಗಿದೆ ಎಂದರು.

ಮಹಾದಾಯಿಗೆ ಇನ್ನೇನು ಕೆಲವು ತಾಂತ್ರಿಕ ಸಮಸ್ಯೆಗಳಿದ್ದು, ಅವುಗಳನ್ನು ಬಗೆ ಹರಿಸಿಕೊಂಡು ಕಾಮಗಾರಿ ಆರಂಭಿಸುವುದಷ್ಟೇ ಬಾಕಿ ಇದೆ. ಆದರೆ, ವಿನಾಕಾರಣ ಗೋವಾ ಸಿಎಂ ತಂಟೆ ತೆಗೆಯುತ್ತಿದ್ದಾರೆ.‌ ಅದರಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಹೇಳಿದರು.

ಬಿಜೆಪಿಯಲ್ಲಿರುವ ಕಾರ್ಯಕರ್ತರ ಬಲದಿದಂದ ಮುಂದೆ ಯಾವ ಪಕ್ಷಕ್ಕೂ ಬಿಜೆಪಿಯನ್ನು ಸೋಲಿಸಲು ಸಾಧ್ಯವಿಲ್ಲ. ಹೀಗಾಗಿ ಬಿಜೆಪಿಯಲ್ಲಿ ಕಾರ್ಯಕರ್ತರನ್ನು ಬಲಪಡಿಸುವ ಉದ್ದೇಶಕ್ಕಾಗಿಯೇ ದೇಶದ ಎಲ್ಲ ಸ್ಥಳೀಯ ಚುನಾವಣೆಗಳಲ್ಲಿ ಸಹ ಕಾರ್ಯಕರ್ತರ ಗೆಲುವಿಗಾಗಿ ರಾಷ್ಟ್ರ ಮಟ್ಟದ ನಾಯಕರು ಕ್ಯಾಂಪೇನ್ ಮಾಡುತ್ತಿದ್ದಾರೆ.

ಗ್ರಾಮ‌ ಪಂಚಾಯತ್‌ಗಳಿಗೂ ಕೋಟಿ ಕೋಟಿ ಅನುದಾನ ಬರುತ್ತಿದೆ. ಇದರಿಂದ ಗ್ರಾಮದ ಅಭಿವೃದ್ಧಿಗೆ ಸ್ವತಂತ್ರವಾಗಿ ಅಗತ್ಯ ಕಾಮಗಾರಿಗಳನ್ನು ನಡೆಸಲು ಸಾಧ್ಯ. ಜಿಲ್ಲಾ ಪಂಚಾಯತ್ ಅಧ್ಯಕ್ಷರು, ಶಾಸಕರು ಹಾಗೂ ಸಂಸದರಿಗೆ ಇರುವುದಕ್ಕಿಂತಲೂ ಹೆಚ್ಚಿನ‌ ಅಧಿಕಾರವನ್ನು ಸ್ಥಳೀಯ ಗ್ರಾಮ ಪಂಚಾಯತ್‌ಗಳ ಸದಸ್ಯರು, ಅಧ್ಯಕ್ಷರಿಗೆ ಇದೆ. ಈ ನಿಟ್ಟಿನಲ್ಲಿ ಪಕ್ಷವನ್ನು ಗ್ರಾಮೀಣ ಮಟ್ಟದಲ್ಲಿ ಸದೃಢಗೊಳಿಸಲು ಈ ಗ್ರಾಮ‌ ಸ್ವರಾಜ್ಯ ಸಮಾವೇಶ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಹುಬ್ಬಳ್ಳಿ-ಧಾರವಾಡ, ಬೆಳಗಾವಿಯಲ್ಲಿ ಮುಂದಿನ‌ ದಿನಗಳಲ್ಲಿ ಕೈಗಾರಿಕಾ ಅಭಿವೃದ್ಧಿ ನಡೆಯಲಿದೆ. ಅವಳಿನಗರ ಎಂದು ಕರೆಸಿಕೊಳ್ಳುವ ಹುಬ್ಬಳ್ಳಿ-ಧಾರವಾಡದ ಜತೆ ಬೆಳಗಾವಿಯೂ ಸೇರಿ ತ್ರಿವಳಿ ನಗರ ಎಂಬ ಜನಪ್ರಿಯತೆಗೆ ಪಾತ್ರವಾಗಲಿವೆ. ಅಷ್ಟು ಅಭಿವೃದ್ಧಿ ನಡೆದು, ಜನರಿಗೆ ಸೌಲಭ್ಯಗಳು ದೊರಯುತ್ತವೆ ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.