ಬೆಳಗಾವಿ: ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎನ್.ಆರ್. ಸಂತೋಷ್ ಆತ್ಮಹತ್ಯೆ ಪ್ರಕರಣ ಸಂಬಂಧ ಬೆಳಗಾವಿಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಸಚಿವ ಈಶ್ವರಪ್ಪ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಅವರು ಯಾರೋ ಸತ್ರೆ ನನ್ನೇಕೆ ಪ್ರಶ್ನಿಸುತ್ತೀರಿ ಎಂದಿದ್ದಾರೆ.
ರಾತ್ರಿಯಷ್ಟೇ ನಾನು ಮಾಧ್ಯಮಗಳಲ್ಲಿ ಈ ಬಗ್ಗೆ ನೋಡಿದೆ. ಮಾತ್ರೆ ತೆಗೆದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವುದು ಗೊತ್ತಾಯಿತು. ರಾಜ್ಯದಲ್ಲಿ ಒಂದು ಕೋಟಿಗೂ ಹೆಚ್ಚು ಬಿಜೆಪಿ ಸದಸ್ಯರಿದ್ದಾರೆ. ಅವನು ಯಾಕೆ ಆತ್ಮಹತ್ಯೆಗೆ ಪ್ರಯತ್ನ ಮಾಡಿದ. ಅವರ ವೈಯಕ್ತಿಕ ಸಮಸ್ಯೆ ನೂರು ಇರುತ್ತೆ. ಅವರ ಮನೆಯವರನ್ನು ಕೇಳಬೇಕು. ರಾಜಕೀಯ ಒತ್ತಡ ಏನು ಎಂಬುವುದು ನನಗೆ ಗೊತ್ತಿಲ್ಲ. ಇಂತಹ ವ್ಯಕ್ತಿ ಇಂತಹ ಕಾರಣಗಳಿಂದ ತೊಂದರೆ ಕೊಟ್ಟಿದ್ದಾರೆ ಅಂತ ಹೇಳಲಿ. ಇದ್ದರೆ ಪೊಲೀಸ್ ಠಾಣೆಗೆ ದೂರು ಕೊಡಲಿ. ಸುಮ್ಮನೇ ಹೇಳಿಕೆ ಕೊಟ್ಟು ಬಿಜೆಪಿ ಮೇಲೆ ಆಪಾದನೆ ಮಾಡುತ್ತಾ ಕುಳಿತರೇ ಹೇಗೆ? ಮನೆಯಲ್ಲಿಯೂ ಪಾಲಿಟಿಕ್ಸ್ ತುಂಬಾ ಇರುತ್ತೆ. ಖಾಸಗಿ ವಿಚಾರ ಬಗ್ಗೆ ನಾನು ಉತ್ತರ ಕೊಡೋಕೆ ಇಷ್ಟಪಡಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ:ವೈಯಕ್ತಿಕ ವಿಡಿಯೋ ಇಟ್ಟುಕೊಂಡು ಸಂತೋಷ್ಗೆ ಸಚಿವರ ಬ್ಲ್ಯಾಕ್ ಮೇಲ್ : ಡಿಕೆಶಿ ಬಾಂಬ್
ರಮೇಶ್ ಜಾರಕಿಹೊಳಿ ಅವರ ಬೆಂಗಳೂರು ನಿವಾಸ ಪವರ್ ಸೆಂಟರ್ ಆಗ್ತಿದೆಯಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ರಾಜಕೀಯದಲ್ಲಿ ಚಟುವಟಿಕೆ ಮಾಡುವಂತಹ ವ್ಯಕ್ತಿ ಎಲ್ಲರೂ ಇರಲ್ಲ. ರಮೇಶ್ ಜಾರಕಿಹೊಳಿ ಆ್ಯಂಡ್ ಟೀಮ್ ಚಟುವಟಿಕೆ ಮಾಡಿದ್ದಕ್ಕೆ ನಮ್ಮ ಸರ್ಕಾರ ಬಂದಿದೆ. ಅವರು ಕಾಂಗ್ರೆಸ್ನಲ್ಲಿದ್ದ ಸಂದರ್ಭದಲ್ಲಿ ಚಟುವಟಿಕೆ ಮಾಡದಿದ್ದರೆ ಅನೇಕರು ರಾಜೀನಾಮೆ ಕೊಡುತ್ತಿರಲಿಲ್ಲ. ಇಂದು ಸರ್ಕಾರ ರಚನೆ ಆಗುತ್ತಿರಲಿಲ್ಲ. ಸಂಪುಟದ ಬಗ್ಗೆಯೂ ಚರ್ಚೆ ನಡೆಯುತ್ತಿರಲಿಲ್ಲ. ಅವರ ಸ್ನೇಹಿತರೆಲ್ಲರೂ ಒಟ್ಟಿಗೆ ಸೇರುತ್ತಿರಬಹುದು, ಸೇರಬಾರದಂತೆನಿಲ್ಲವಲ್ಲ. ರಮೇಶ್ ಜಾರಕಿಹೊಳಿ ಸ್ನೇಹಿತರದೊಂದು ಟೀಮ್, ಬೇರೆ ಸ್ನೇಹಿತರದ್ದೊಂದು ಟೀಮ್ ಹೀಗೆ ಹತ್ತು ಟೀಮ್ ಗಳಿರಬಹುದು. ಆದರೆ ಪಕ್ಷ ಒಂದೆ. ಮೂರ್ನಾಲ್ಕು ಜನ ಒಂದು ಕಡೆ ಸೇರಿದರೆ ಮಂತ್ರಿಮಂಡಲದ ಬಗ್ಗೆ ಚರ್ಚೆ ಮಾಡುತ್ತಿದ್ದಾರಂತೆನಿಲ್ಲ. ಸರ್ಕಾರ ತರಲು ಯೋಗೇಶ್ವರ ಪ್ರಯತ್ನ ಮಾಡಿದ್ದಾರೆ ಅಂತ ರಮೇಶ್ ಜಾರಕಿಹೊಳಿ ಹೇಳಿಕೊಂಡಿದ್ದಾರೆ. ಹಾಗಂತ ರಮೇಶ್ ಜಾರಕಿಹೊಳಿ ಹೇಳಿದ್ದೆ ಆಗಿ ಬಿಡುತ್ತಾ ಎಂದೆನಿಲ್ಲ. ವ್ಯಕ್ತಿಯ ಅಭಿಪ್ರಾಯ ಪಕ್ಷದ ಅಭಿಪ್ರಾಯ ಅಲ್ಲ ಎಂದರು.
ಇದನ್ನೂ ಓದಿ:ಜಾರಕಿಹೊಳಿ ವಿರುದ್ಧ ಮಿತ್ರಮಂಡಳಿ ಸಭೆ: ಸಿಎಂ ಭೇಟಿ ಮಾಡಿದ ಸಚಿವ ರಮೇಶ್ ಭೇಟಿ
ನಮ್ಮೆಲ್ಲ ಶಾಸಕರು ಪಕ್ಷದಿಂದಲೇ ಆಯ್ಕೆದ್ದಾರೆಯೇ ಹೊರತು ವೈಯಕ್ತಿಕವಲ್ಲ. ಯಾರಿಗೆ ಸಚಿವ ಸ್ಥಾನ ಕೊಡಬೇಕು ಅಂತ ಪಕ್ಷ ಚರ್ಚೆ ಮಾಡುತ್ತದೆ. ತ್ಯಾಗ ಮಾಡಿ ಬಂದವರಲ್ಲಿಯೂ ಯಾರಿಗೆ ಕೊಡಬೇಕು ಅಂತಾನೂ ಚರ್ಚೆ ನಡೆದಿದೆ. ಬಿಜೆಪಿಯಲ್ಲಿ ವಲಸಿಗರು, ಮೂಲ ಬಿಜೆಪಿಗರು ಎಂಬುವುದು ಇಲ್ಲವೇ ಇಲ್ಲ. ಅವರವರ ಅಭಿಪ್ರಾಯ ವ್ಯಕ್ತ ಪಡಿಸಲು ಪೂರ್ಣ ಸ್ವಾತಂತ್ರ ಬಿಜೆಪಿಯಲ್ಲಿದೆ. ಸಿಎಂ ಬದಲಾಗ್ತಾರೆ ಎಂದು ಪದೆ ಪದೇ ಹೇಳುವ ಸಿದ್ದರಾಮಯ್ಯನವರಿಗೆ ಈ ಸ್ಥಿತಿ ಬರಬಾರದಿತ್ತು. ಅವರ ಇಂದಿನ ಸ್ಥಿತಿ ಅಡ್ಡಗೋಡೆ ಮೇಲಿನ ದೀಪ ಇದ್ದಂಗೆ. ಕಾಂಗ್ರೆಸ್ನಲ್ಲಿ ಪೂರ್ಣ ಸ್ವಾತಂತ್ರ ಸಿದ್ದರಾಮಯ್ಯ ಒಬ್ಬರಿಗೆ ಇದೆ. ಈಗಲೂ ನಾನೇ ಮುಖ್ಯಮಂತ್ರಿ ಮುಂದೆಯೂ ನಾನೇ ಮುಖ್ಯಮಂತ್ರಿ ಎಂದು ಸಿದ್ದರಾಮಯ್ಯ ಸರ್ವಾಧಿಕಾರಿ ಹೇಳಿಕೆ ನೀಡುತ್ತಿದ್ದಾರೆ. ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಹುಚ್ಚು ಹೇಳಿಕೆ ಕೊಡುವುದರಲ್ಲಿ ಅರ್ಥವೇ ಇಲ್ಲ. ಸಣ್ಣಪುಟ್ಟ ತಪ್ಪುಗಳಿದ್ದರೆ ನಮ್ಮನ್ನ ತಿದ್ದಬೇಕು. ಇದನ್ನ ಬಿಟ್ಟು ಯಡಿಯೂರಪ್ಪ ಬದಲಾವಣೆ ಮಾಡ್ತಾರೆ, ನನಗೆ ದೆಹಲಿ ಮೂಲದಿಂದ ಮಾಹಿತಿ ಇದೆ ಅಂತಿದ್ದಾರೆ. ದೆಹಲಿಯಿಂದ ಸಿದ್ದರಾಮಯ್ಯಗೋಸ್ಕರ ಟೆಲಿಗ್ರಾಂ ಬಂದಿರಬಹುದು ಎಂದು ಕಾಳೆಲೆದರು.