ಬೆಳಗಾವಿ: ಮಹಾನಗರ ಪಾಲಿಕೆ ಚುನಾವಣೆ ನಡೆಯುತ್ತಿರುವ ವೇಳೆಯೇ ನಾಡದ್ರೋಹಿ ಎಂಇಎಸ್ ಮತ್ತೊಮ್ಮೆ ಕನ್ನಡಿಗರನ್ನು ಕೆದಕಿದೆ. ಪಾಲಿಕೆ ಎದುರು ಅಳವಡಿಸಿರುವ ಧ್ವಜಸ್ತಂಭದ ಮೇಲೆ ಹಾರಾಡುತ್ತಿರುವ ಕನ್ನಡ ಧ್ವಜ ಅನಧಿಕೃತ ಎಂದು ಎಂಇಎಸ್ ಪುಂಡರು ಫೇಸ್ಬುಕ್ನಲ್ಲಿ ಫೋಸ್ಟ್ ಮಾಡಿದ್ದಾರೆ.
ಸೆಪ್ಟೆಂಬರ್ 3ರಂದು ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ ಬಿಜೆಪಿ ಹಾಗೂ ರಾಜ್ಯ ಸರ್ಕಾರವನ್ನು ಟಾರ್ಗೆಟ್ ಮಾಡುವ ಭರದಲ್ಲಿ ಪಾಲಿಕೆ ಎದುರಿನ ಕನ್ನಡ ಧ್ವಜ ಅನಧಿಕೃತ ಎಂದಿದೆ. ಬಿಜೆಪಿಯಿಂದ ಮರಾಠಿಗರು ಕನ್ನಡಿಗರ ಮಧ್ಯೆ ಜಗಳ ಹಚ್ಚುವ ಯತ್ನ ಮಾಡುತ್ತಿದೆ ಎಂದು ಪೋಸ್ಟ್ ಮೂಲಕ ಟೀಕಿಸಿದೆ.
ಈ ಹಿಂದೆ ಬೆಳಗಾವಿ ಮಹಾನಗರ ಪಾಲಿಕೆ ಮೇಲಿದ್ದ ಭಗವಾಧ್ವಜ ಇಳಿಸಲಾಗಿದೆ. ಈಗ ಅನಧಿಕೃತ ಕೆಂಪು ಹಳದಿ ಕನ್ನಡ ಬಾವುಟ ಹಾರಿಸಲಾಗಿದೆ ಎಂದು ಭಗವಾಧ್ವಜ ಹಾಗೂ ಕನ್ನಡ ಧ್ವಜ ಇರುವ ಭಾವಚಿತ್ರದ ಪೋಸ್ಟ್ ಹಾಕಿ ಎಂಇಎಸ್ ಪುಂಡರು ವೈರಲ್ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಎಂಇಎಸ್ ಕಾರ್ಯಕರ್ತರು ನಾಡದ್ರೋಹಿ ಚಟುವಟಿಕೆ ಮುಂದುವರೆಸಿದ್ದಾರೆ.
ಇದನ್ನೂ ಓದಿ:ಬೆಳಗಾವಿ ಪಾಲಿಕೆ ಚುನಾವಣೆಗೆ ಅಭ್ಯರ್ಥಿಗಳೇನೋ ನಾಮ ಪತ್ರ ಸಲ್ಲಿಸಿದರು.. ಆದರೆ, ಅಬ್ಬರದ ಪ್ರಚಾರಕ್ಕೆ ಬ್ರೇಕ್..