ಬೆಳಗಾವಿ: ಜಿಲ್ಲೆಯನ್ನು ವಿಭಜನೆ ಮಾಡಬೇಕು ಎಂಬುದು ಸರ್ಕಾರಕ್ಕೂ ಗೊತ್ತಿದೆ. ನಾನು ಜಿಲ್ಲೆಯ ನಾಯಕನಾಗಿದ್ದು, ಜನರ ನಾಡಿಮಿಡಿತ ಗೊತ್ತಿದೆ. ಜೆ.ಎಚ್.ಪಾಟೀಲ ಸಿಎಂ ಆಗಿದ್ದಾಗ ಜಿಲ್ಲೆಯನ್ನು ಪ್ರತ್ಯೇಕ ಮಾಡಲು ನಿರ್ಧರಿಸಲಾಗಿತ್ತು ಎಂದು ಸಚಿವ ಉಮೇಶ್ ಕತ್ತಿ ಹೇಳಿದರು.
ಎಂಇಎಸ್ ಪ್ರಭಾವದಿಂದ ಆಗ ಜಿಲ್ಲಾ ವಿಭಜನೆ ಆಗಿರಲಿಲ್ಲ. ಈಗ ಎಂಇಎಸ್ ಪ್ರಭಾವ ಕುಗ್ಗಿದೆ, ಅಭಿವೃದ್ಧಿ ದೃಷ್ಟಿಯಿಂದ ಜಿಲ್ಲಾ ವಿಭಜನೆ ಆಗಬೇಕು. ಇದಕ್ಕಾಗಿ ಪಕ್ಷಾತೀತವಾಗಿ ನಿಯೋಗವನ್ನು ಸಿಎಂ ಬಳಿ ಕೊಂಡೊಯ್ಯುವೆ ಎಂದರು.
ಜಿಲ್ಲಾ ಬಿಜೆಪಿ ಕಾರ್ಯಕಾರಣಿ ಸಭೆ ನಡೆಯುತ್ತಿದೆ. ಪಕ್ಷ ಸಂಘಟನೆ ದೃಷ್ಟಿಯಿಂದ ಕಾರ್ಯಕಾರಣಿ ಸಭೆ ನಡೆಯುತ್ತಿದೆ. ಜಿಲ್ಲೆಯಲ್ಲಿ ಬಣ ರಾಜಕೀಯ ಇರುವುದು ನಿಜ, ಇದಕ್ಕೆ ನಾನೇನು ಪ್ರತಿಕ್ರಿಯೆ ನೀಡಲ್ಲ ಎಂದು ತಿಳಿಸಿದರು.
ಇದನ್ನೂ ಓದಿ: ಬಿಎಸ್ವೈ ಜೊತೆ ಚರ್ಚಿಸಿದ ಸಿಎಂ : ಇಂದೇ ರಾಜೀನಾಮೆ ನೀಡ್ತಾರಾ ಈಶ್ವರಪ್ಪ?