ಬೆಳಗಾವಿ: ಮೆಡಿಕಲ್ ಶಾಪ್ ಮೇಲ್ಛಾವಣಿ ಒಡೆದು ಒಂದು ಚೀಲ ಮಾಸ್ಕ್ ಕದ್ದು ಖದೀಮರು ಪರಾರಿಯಾಗಿರುವ ಘಟನೆ ಜಿಲ್ಲೆಯ ಸವದತ್ತಿ ತಾಲೂಕಿನ ಇನಾಮಹೊಂಗಲ ಗ್ರಾಮದಲ್ಲಿ ತಡರಾತ್ರಿ ನಡೆದಿದೆ.
ಇನಾಮಹೊಂಗಲ ಗ್ರಾಮದ ಚಂದ್ರಶೇಖರ ಹುಚ್ಚಣ್ಣವರ ಅವರಿಗೆ ಸೇರಿದ ಗುರು ಮೆಡಿಕಲ್ ಶಾಪ್ ಕಳ್ಳತನವಾಗಿದೆ. ಇಂದು ಬೆಳಗ್ಗೆ ಅಂಗಡಿ ಬಾಗಿಲು ತೆರೆದಾಗ ಪ್ರಕರಣ ಬೆಳಕಿಗೆ ಬಂದಿದೆ.
ಐದು ಸಾವಿರ ರೂಪಾಯಿ ಮೌಲ್ಯದ ಒಂದು ಚೀಲ ಮಾಸ್ಕ್ ಹಾಗೂ 50 ಕ್ಕೂ ಅಧಿಕ ಮೂವ್ ಸ್ಪ್ರೇ ಕಳ್ಳತನ ಮಾಡಲಾಗಿದೆ. ಅಲ್ಲದೇ ಕ್ಯಾಶ್ ಕೌಂಟರಲ್ಲಿದ್ದ 6 ಸಾವಿರ ನಗದನ್ನೂ ಕದ್ದು ಕಳ್ಳರು ಪರಾರಿಯಾಗಿದ್ದಾರೆ.
ಈ ಕುರಿತು ಸವದತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.