ETV Bharat / state

ಮನಬಂದಂತೆ ಥಳಿಸಿದ್ದ ಪೊಲೀಸರು: ಸಿಆರ್​​ಪಿಎಫ್ ಯೋಧನಿಗೆ ವೈದ್ಯಕೀಯ ತಪಾಸಣೆ

ಪೇದೆ ಮೇಲಿನ ಹಲ್ಲೆ ಪ್ರಕರಣದ ಹಿನ್ನೆಲೆ ಬಂಧನಕ್ಕೊಳಗಾಗಿದ್ದ ಯೋಧನಿಗೆ ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಲಾಯಿತು. ಬಂಧನದ ಬಳಿಕ ಸದಲಗಾ ಪೊಲೀಸರು ಮನಬಂದಂತೆ ಥಳಿಸಿದ್ದಾರೆ ಎನ್ನಲಾಗುತ್ತಿದ್ದು, ಈ ಹಿನ್ನೆಲೆ ಯೋಧನಿಗೆ ವೈದ್ಯಕೀಯ ತಪಾಸಣೆ ಮಾಡಿಸಲಾಯಿತು.

Medical checkup of CRPF soldier
ಸಿಆರ್​​ಪಿಎಫ್ ಯೋಧನಿಗೆ ವೈದ್ಯಕೀಯ ತಪಾಸಣೆ
author img

By

Published : Apr 29, 2020, 9:22 PM IST

ಬೆಳಗಾವಿ: ಸಿಆರ್​​ಪಿಎಫ್​​ ಕೋಬ್ರಾ ಕಮಾಂಡೋ ಸಚಿನ್ ಸಾವಂತ್ ಅವರಿಗೆ ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಲಾಯಿತು. ಪೊಲೀಸರು ಬಾಸುಂಡೆ ಬರುವ ರೀತಿ ಹೊಡೆದ ಹಿನ್ನೆಲೆ ಸಿಆರ್​​ಪಿಎಫ್​​ ಅಧಿಕಾರಿಗಳು ಯೋಧನನ್ನು ಆಸ್ಪತ್ರೆಗೆ ಕರೆತಂದರು.

ಸಿಆರ್​​ಪಿಎಫ್ ಯೋಧನಿಗೆ ವೈದ್ಯಕೀಯ ತಪಾಸಣೆ

ಮಾಸ್ಕ್ ವಿಚಾರಕ್ಕೆ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಗ್ರಾಮದಲ್ಲಿ ಸಿಆರ್​​ಪಿಎಫ್​​ ಯೋಧ ಹಾಗೂ ಸದಲಗಾ ಪೊಲೀಸರ ಮಧ್ಯೆ ಇತ್ತೀಚೆಗೆ ಗಲಾಟೆ ಆಗಿತ್ತು. ಯೋಧನನ್ನು ವಶಕ್ಕೆ ಪಡೆದಿದ್ದ ಪೊಲೀಸರು ಮನಬಂದಂತೆ ಥಳಿಸಿದ್ದರು. ಈ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ‌ವೈರಲ್ ಆಗಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ಹಿಂಡಲಗಾ ‌ಜೈಲಿನಿಂದ ಬಿಡುಗಡೆ ಆಗಿದ್ದ ಯೋಧನನ್ನು ನಿನ್ನೆಯಷ್ಟೇ ಸಿಆರ್‌ಪಿಎಫ್ ಹಿರಿಯ ‌ಅಧಿಕಾರಿಗಳು ಕ್ಯಾಂಪ್​​ಗೆ ಕರೆದೊಯ್ದಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.