ETV Bharat / state

ಮಾತೆ ಮಹಾದೇವಿ ಲಿಂಗೈಕ್ಯ... ತೋಂಟದಾರ್ಯ ಮಠದ ಸಿದ್ಧರಾಮ ಶ್ರೀ ಸಂತಾಪ - undefined

ನಿನ್ನೆ ಸಂಜೆ ಲಿಂಗೈಕ್ಯರಾದ ಮಾತೆ ಮಹಾದೇವಿಯವರ ಅಗಲಿಕೆಗೆ ತೋಂಟದಾರ್ಯ ಮಠದ ಸಿದ್ಧರಾಮ ಶ್ರೀಗಳು ಭಾವುಕರಾಗಿ ಶ್ರದ್ಧಾಂಜಲಿ ಸಮರ್ಪಿಸಿದರು.

ತೋಂಟದಾರ್ಯ ಶ್ರೀ
author img

By

Published : Mar 15, 2019, 11:42 AM IST

ಬೆಳಗಾವಿ: ಬಸವಾದಿ ಶಿವಶರಣರ ತತ್ವ ಪ್ರಸಾರ ಕಾಯಕವನ್ನು ಬದುಕಿನುದ್ದಕ್ಕೂ ಮಾಡಿಕೊಂಡು ಬಂದಿದ್ದ ಜಗದ್ಗುರು ಮಾತೆ ಮಹಾದೇವಿಯವರು ನಮ್ಮ ನಾಡಿನ ಅನರ್ಘ್ಯರತ್ನವೆನಿಸಿದ್ದಾರೆ ಎಂದುತೋಂಟದಾರ್ಯ ಮಠದ ಡಾ. ಸಿದ್ಧರಾಮ ಸ್ವಾಮೀಜಿ ಸಂತಾಪ ಸೂಚಿಸಿದ್ದಾರೆ.

ಮಾತೆ ಮಹಾದೇವಿ ಅವರನ್ನು ಕಳೆದುಕೊಂಡದ್ದು ತುಂಬ ದುಃಖ ತಂದಿದೆ. ಮಾತಾಜಿ ಅವರ ಅಗಲಿಕೆ ನಮ್ಮ ಧರ್ಮೀಯರನ್ನು ಬಾಧಿಸದೇ ಇರದು ಎಂದು ಸಿದ್ದರಾಮ ಶ್ರೀ ಕಂಬನಿ ಮಿಡಿದಿದ್ದಾರೆ.

ಜಗದ್ಗುರು ಲಿಂಗಾನಂದ ಸ್ವಾಮೀಜಿ ಮಾರ್ಗದರ್ಶನದಲ್ಲಿ ಬಸವಧರ್ಮ ಪೀಠವನ್ನು ಸ್ಥಾಪಿಸಿ, ಆ ಪೀಠವನ್ನೇರಿದ ಮೊದಲ ಮಹಿಳಾ ಜಗದ್ಗುರು ಎಂಬ ಅಭಿದಾನಕ್ಕೆ ಮಾತೆ ಮಹಾದೇವಿ ಪಾತ್ರರಾಗಿದ್ದರು. ಬಸವಾದಿ ಶಿವಶರಣರನ್ನು ಕುರಿತು ಉತ್ಕೃಷ್ಟ ಸಾಹಿತ್ಯ ರಚನೆ ಮಾಡಿದ್ದ ಮಾತಾಜಿ ಅವರು ಲಿಂಗೈಕ್ಯರಾಗಿದ್ದು, ನಮ್ಮ ನಾಡು ಹಾಗೂ ಧರ್ಮಕ್ಕೆ ತುಂಬಲಾಗದ ಹಾನಿಯನ್ನುಂಟು ಮಾಡಿದೆ ಎಂದು ಶ್ರೀಗಳು ಸಂತಾಪ ಸೂಚಿಸಿದ್ದಾರೆ.

ಜಗದ್ಗುರು ಮಾತೆ ಮಹಾದೇವಿ ಅವರು ಕೂಡಲಸಂಗಮ, ಬಸವಕಲ್ಯಾಣ, ಅಲ್ಲಮಗಿರಿ, ಬೆಂಗಳೂರು, ಧಾರವಾಡದಲ್ಲಿ ಬಸವಧರ್ಮ ಪೀಠದ ಶಾಖೆಗಳನ್ನು ಸ್ಥಾಪಿಸಿದ್ದಾರೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿಯೂ ಬಸವಧರ್ಮ ಪೀಠದ ಶಾಖೆಯನ್ನು ಸ್ಥಾಪಿಸುವ ಮೂಲಕ ಮಹೋನ್ನತ ಕಾರ್ಯ ಮಾಡಿದ್ದರು. ಬಸವಕಲ್ಯಾಣ, ಕೂಡಲಸಂಗಮ, ಅಲ್ಲಮಗಿರಿ ಇಂದು ನಮ್ಮ ನಾಡಿನ ಖ್ಯಾತ ಪ್ರವಾಸಿ ಧಾರ್ಮಿಕ ಕೇಂದ್ರಗಳಲ್ಲಿ ಪರಿಗಣಿಸಲ್ಪಟ್ಟಿವೆ. ಇದರ ಹಿಂದೆ ಮಾತಾಜಿ ಅವರ ಅಪರಿಮಿತ ಪರಿಶ್ರಮವಿರುವುದನ್ನು ಮರೆಯಲಾಗದು ಎಂದಿದ್ದಾರೆ ಸಿದ್ಧರಾಂ ಶ್ರೀ.

ಮಾತಾಜಿ ಅವರು ಶ್ರೇಷ್ಠ ವಚನಕಾರರಾಗಿದ್ದರು. ತಮ್ಮ ಪ್ರವಚನಗಳಲ್ಲಿ ಬಸವಾದಿ ಶಿವಶರಣರ ವಚನ ಸಾಹಿತ್ಯದ ಸಾರ ಸರ್ವಸ್ವವನ್ನೇ ಶ್ರೋತೃಗಳಿಗೆ ಉಣಬಡಿಸುತ್ತಿದ್ದರು. ಇತ್ತೀಚೆಗೆ ನಡೆದ ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಯನ್ನು ಪಡೆಯುವ ಹೋರಾಟದಲ್ಲಿ ಅವರು ಅಗ್ರಗಣ್ಯರಾಗಿದ್ದರು ಎಂದು ತಮ್ಮ ಶೋಕ ವ್ಯಕ್ತಪಡಿಸಿದ್ದಾರೆ.

sample description

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.