ETV Bharat / state

ಅಥಣಿಯಿಂದ ಮಹೇಶ್ ಕುಮಟಳ್ಳಿ ಟಿಕೆಟ್ ಫಿಕ್ಸ್​: ಡಿಸಿಎಂ ಲಕ್ಷ್ಮಣ್ ಸವದಿ ಅತಂತ್ರ..!? - ಲಕ್ಷ್ಮಣ್ ಸವದಿ

ಅನರ್ಹ ಶಾಸಕರ ಸ್ಪರ್ಧೆಗೆ ಸುಪ್ರೀಂಕೋರ್ಟ್ ಅಸ್ತು ಎನ್ನುತ್ತಲೆ. ಅಥಣಿಯಲ್ಲಿ ಹೊಸ ರಾಜಕೀಯ ಲೆಕ್ಕಾಚಾರ ಆರಂಭವಾಗಿದ್ದು, ಡಿಸಿಎಂ ಲಕ್ಷ್ಮಣ್ ಸವದಿ ಮುಂದಿನ ಭವಿಷ್ಯವೇನೂ ಎಂಬ ಚರ್ಚೆ ಆರಂಭವಾಗಿದೆ.

ಡಿಸಿಎಂ ಲಕ್ಷ್ಮಣ್ ಸವದಿ ಅತಂತ್ರ
author img

By

Published : Nov 13, 2019, 8:58 PM IST

ಬೆಳಗಾವಿ: ಅಥಣಿಯಿಂದ ವಿಧಾನಸಭಾ ಕ್ಷೇತ್ರದ ಬೈ ಎಲೆಕ್ಷನ್​ಗೆ ಬಿಜೆಪಿಯಿಂದ ಮಹೇಶ್ ಕುಮಟಳ್ಳಿಗೆ ಟಿಕೆಟ್​ ಪಕ್ಕಾ ಆಗುತ್ತಿದಂತೆ ಟಿಕೆಟ್​ ಆಕಾಂಕ್ಷಿಯಾಗಿದ್ದ ಡಿಸಿಎಂ ಲಕ್ಷ್ಮಣ್ ಸವದಿಗೆ ಹಿನ್ನೆಡೆಯಾಗುವ ಎಲ್ಲ ಲಕ್ಷಣಗಳು ಕಾಣಿಸಿಕೊಳ್ಳತ್ತಿವೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಥಣಿಯಿಂದ ಸೋತರು ಅದೃಷ್ಟವೆಂಬತೆ ಡಿಸಿಎಂ, ಹಾಗೂ ಸಚಿವ ಸ್ಥಾನ ಮತ್ತು ಮಹಾರಾಷ್ಟ್ರ ಚುನಾವಣೆ ಉಸ್ತುವಾರಿಯನ್ನು ಸವದಿಗೆ ವಹಿಸಲಾಗಿತ್ತು. ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಲಕ್ಷ್ಮಣ್ ಸವದಿ ಪ್ರಚಾರ ಕೈಗೊಂಡಿದ್ದರು. ಆದರೆ, ಅಲ್ಲಿ ಬಿಜೆಪಿ ಪಕ್ಷ ಅಂದುಕೊಂಡಂತೆ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ. ಎಲ್ಲೋ ಒಂದು ಕಡೆ ಬಿಜೆಪಿ ಹೈಕಮಾಂಡ್ ಲಕ್ಷ್ಮಣ್ ಸವದಿ ಮೇಲೆ ಇಟ್ಟಿರುವ ನಂಬಿಕೆಯನ್ನು ಅವರು ಉಳಿಸಿಕೊಂಡಿಲ್ಲ ಎಂಬ ಮಾತು ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಿದೆ.

ಈ ಹಿಂದೆ ಅಥಣಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಉಪಚುನಾವಣೆಯಲ್ಲಿ ನಾನೇ ಸ್ಪರ್ಧೆ ಮಾಡುತ್ತೇನೆ ಎಂದು ಆಪ್ತರ ಬಳಿ ಸವದಿ ಹೇಳಿದ್ದರು ಎನ್ನಲಾಗಿದೆ. ಆದರೆ, ಇವತ್ತಿನ ಸುಪ್ರೀಂಕೋರ್ಟ್ ಆದೇಶ ಹಾಗೂ ಸಿಎಂ ಯಡಿಯೂರಪ್ಪರ ಮಾತು ಕೇಳಿ ಲಕ್ಷ್ಮಣ್ ಸವದಿ ಬೇಸರವಾಗಿದ್ದಾರೆ ಎನ್ನಲಾಗಿದೆ. ಸದ್ಯ ಅಥಣಿ ಉಪಚುನಾವಣೆಯಲ್ಲಿ ಮಹೇಶ್ ಕುಮಟಳ್ಳಿ ಜಯಭೇರಿ ಬಾರಿಸುವ ಮೂಲಕ ವಿಧಾನಸಭಾ ಪ್ರವೇಶ ಮಾಡಿದರೆ ಲಕ್ಷ್ಮಣ ಸವದಿ ಆಟಕ್ಕುಂಟು ಲೆಕ್ಕಕ್ಕಿಲ್ಲಾ ಆಗುತ್ತಾರಾ ಎಂಬ ಪ್ರಶ್ನೆ ಎಲ್ಲರಲ್ಲೂ ಎದ್ದಿದೆ.

Intro:ಅಥಣಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿ ಟಿಕೆಟ್ ನೀಡಿದೆಯಾದರೆ, ಡಿಸಿಎಂ ಲಕ್ಷ್ಮಣ್ ಸವದಿ ಅತಂತ್ರ..!?Body:ಅಥಣಿ ವರದಿ:
ವಿಶೇಷ ವರದಿ:

*ಹರಕೆ ಕುರಿ ಆದರಾ ಡಿಸಿಎಂ ಲಕ್ಷ್ಮಣ್ ಸವದಿ...!?*

ಅಥಣಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಪ್ರಭಲ ನಾಯಕ ಲಕ್ಷ್ಮಣ್ ಸವದಿ ಯಲ್ಲೋ ಒಂದು ಕಡೆ ಯಿಂದ ರಾಜಕಾರಣದಿಂದ ಅವರಿಗೆ ಹಿನ್ನೆಡೆ ಉಂಟಾಗುವ ಯಲ್ಲ ಲಕ್ಷಣಗಳು ಕಾಣಿಸಿಕೊಳ್ಳತಿದೆ.

ಹೌದು ನೋಡಿ ಅಥಣಿ ವಿಧಾನಸಭಾ ಕ್ಷೇತ್ರದ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತರು ಅವರಿಗೆ ಡಿಸಿಎಂ, ಹಾಗೂ ಸಚಿವ ಸ್ಥಾನ ಮತ್ತು ಮಹಾರಾಷ್ಟ್ರ ಚುನಾವಣೆ ಉಸ್ತುವಾರಿ ಅವರಿಗೆ ಕೊಡಲಾಗಿತ್ತು.

ಸದ್ಯ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಲಕ್ಷ್ಮಣ್ ಸವದಿ, ಯಲ್ಲಿ ಪ್ರಚಾರ ಕೈಗೊಂಡಿದ್ದರು ಅಲ್ಲಿ ಬಿಜೆಪಿ ಪಕ್ಷ ಅಂದುಕೊಂಡಂತೆ ಗೆಲುವು ಸಾಧಿಸಲು ಸಾಧ್ಯವಿಲ್ಲ.

ಯಲ್ಲೋ ಒಂದು ಕಡೆ ಬಿಜೆಪಿ ಹೈಕಮಾಂಡ್ ಲಕ್ಷ್ಮಣ್ ಸವದಿ ಮೇಲೆ ಇಟ್ಟಿರುವ ನಂಬಿಕೆ ಕಳೆದುಕೊಂಡಿದ್ದಾರೆ...!? ಎಂಬ ಮಾತುಗಳು ಕೇಳಿಬರುತ್ತಿವೆ, ಅದು ಏನೇ ಇರಲಿ ಅಥಣಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಾಗಿ ಉಪಚುನಾವಣೆಯಲ್ಲಿ ನಾನೆ ಸ್ಪರ್ಧೆ ಮಾಡುತ್ತೆನೆ ಎಂದು ಅವರ ಆಪ್ತ ಬಳಿ ಹಂಚಿಕೊಡ್ಡಿದ್ದರು, ಆದರೆ ಇವತ್ತಿನ ಸುಪ್ರೀಂಕೋರ್ಟ್ ಆದೇಶ ಹಾಗೂ ಸಿಎಂ ಯಡಿಯೂರಪ್ಪರ ಮಾತು ಕೆಳಿ ಲಕ್ಷ್ಮಣ್ ಸವದಿ ಅವರಿಗೆ ಸದ್ಯ ರಾಜಕೀಯ ಬೆಳವಣಿಗೆಗಳು ನೋಡಿ ಒಂದು ರೀತಿ ಘಾಸಿ ಆಗಿದ್ದಾರೆಯೆ...!?

ಒಟ್ಟಾರೆಯಾಗಿ ಅನರ್ಹ ಶಾಸಕ ಮಹೇಶ್ ಕುಮಟ್ಟಳ್ಳಿ ಅಥಣಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ನೀಡಿದ್ರೆ ಏನಾದರೂ ಬಿಜೆಪಿ ಪಕ್ಷದಿಂದ ಜಯಸಾಲಿ ಯಾದರೆ, ಲಕ್ಷ್ಮಣ್ ಸವದಿ ಮುಂದಿನ ಬಹುಶಃ ಏನು,..?

ಲಕ್ಷ್ಮಣ ಸವದಿ ಮಹಾರಾಷ್ಟ್ರಲ್ಲಿ ವಿಧಾನಸಭೆ ಕ್ಷೇತ್ರದ ಉಪಚುನಾವಣೆಯಲ್ಲಿ ಅಂದುಕೊಂಡಷ್ಟು ಜಯಭೇರಿ ಬಾರಿಸಲು ಸಾಧ್ಯವಾಗಲಿಲ್ಲ , ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರಕ್ಕೂ ರಚನೆ ಮಾಡಲು ಸಾಧ್ಯವಾಗಲಿಲ್ಲ. ಏನಾದರೂ ಲಕ್ಷ್ಮಣ ಸವದಿ ಉಸ್ತುವಾರಿ ವಹಿಸಿದ ವಿಧಾನಸಭಾ ಕ್ಷೇತ್ರದಲ್ಲಿ ಗೆದ್ದಿದೆ ಆಗಿದ್ದರೆ ಸರಳವಾಗಿ ಸರ್ಕಾರ ರಚನೆ ಮಾಡಬಹುದಾಗಿತ್ತು, ಇದನ್ನು ಕೂಡ್ ಬಿಜೆಪಿ ಹೈಕಮಾಂಡ್ ಗಮನಿಸಿದೆ.

ಸದ್ಯ ಅಥಣಿ ಉಪಚುನಾವಣೆಯಲ್ಲಿ ಮಹೇಶ್ ಕುಮಟಳ್ಳಿ ಜಯಭೇರಿ ಬಾರಿಸುವ ಮೂಲಕ ವಿಧಾನಸಭಾ ಪ್ರವೇಶ ಮಾಡಿದರೆ ಲಕ್ಷ್ಮಣ ಸವದಿ ಆಟಕುಂಟು ಲೆಕ್ಕಕ್ಕಿಲ್ಲಾ ಆಗುತ್ತಾರೆ.

ಡಿಸಿಎಂ ಪಟ್ಟ ಕಟ್ಟಿ ಮಹಾರಾಷ್ಟ್ರ ಚುನಾವಣೆ ಉಸ್ತುವಾರಿ ಕೊಟ್ಟು ಈಗ ಅಥಣಿ ವಿಧಾನಸಭಾ ಟಿಕೆಟು ಇಲ್ಲದೆ, ಮುಂದೆ ಒಂದಿನ ಎಲ್ಲಾ ಪ್ರಮುಖ ಖಾತೆಗಳಿಗೆ ರಾಜೀನಾಮೆ ನೀಡಿ ಎಂಬ ಹೈಕಮಾಂಡ್ ಘೋಷಣೆ ಮಾಡಿದ್ದೆ ಆದರೆ...!? ಲಕ್ಷ್ಮಣ್ ಸವದಿ ಅತಂತ್ರ ರಾಗುವುದು ಸುಳ್ಳಲ್ಲ, ಎಲ್ಲೋ ಒಂದು ಕಡೆ ಲಕ್ಷ್ಮಣ ಸವದಿ ಹರಿಕೆ ಕುರಿ ಆದರೆ ಎಂಬ ಮಾತುಗಳು ಅಥಣಿ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.ಈ ಟಿವಿ ಭಾರತ ಅಥಣಿ

Conclusion:ಶಿವರಾಜ್ ನೇಸರ್ಗಿ ಅಥಣಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.