ಅಥಣಿ: ಕೊಳಚೆ ನಿರ್ಮೂಲನೆ ನಿಗಮ ಮಂಡಳಿ (ಸ್ಲಮ್ ಬೋರ್ಡ್) ಅಧ್ಯಕ್ಷರಾಗಿ ನೇಮಕಗೊಂಡ ನಂತರ ಮೊದಲ ಬಾರಿಗೆ ಅಥಣಿಗೆ ಆಗಮಿಸಿದ ಶಾಸಕ ಮಹೇಶ್ ಕುಮಟಳ್ಳಿ ಅವರನ್ನು ಅಭಿಮಾನಿಗಳು ಪ್ರವಾಸಿ ಮಂದಿರದಲ್ಲಿ ಅದ್ದೂರಿಯಾಗಿ ಸ್ವಾಗತಿಸಿದರು.
ಸಚಿವ ಸ್ಥಾನಕ್ಕಿಂತಲೂ ನಿಗಮ ಸ್ಥಾನ ತೃಪ್ತಿ ತಂದಿದೆ. ಕಸದಿಂದ ರಸ ತೆಗೆದು ತೋರಿಸುತ್ತೇನೆ. ಈ ನಿಗಮದಿಂದ ಹಲವಾರು ಯೋಜನೆಗಳನ್ನು ರೂಪಿಸಲು ಅಧಿಕಾರಿಗಳ ಜೊತೆ ನಿನ್ನೆ ಒಂದು ಹಂತದ ಸಭೆ ನಡೆಸಿದ್ದೇನೆ. ಡಿಸಿಎಂ ಲಕ್ಷ್ಮಣ್ ಸವದಿ ಅವರಿಗೆ ನಮಗೆ ಯಾವುದೇ ವೈಮನಸ್ಸು ಇಲ್ಲ. ಅಥಣಿ ಭಾಗಕ್ಕೆ ಜಲಸಂಪನ್ಮೂಲ ಸಚಿವರು ಹಲವಾರು ಯೋಜನೆ ನೀಡಿದ್ದಾರೆ. ಇದುವರೆಗೆ ಅಥಣಿ ತಾಲೂಕಿಗೆ 1,200 ಕೋಟಿ ರೂ ನೀಡಿದ್ದಾರೆ. ಮುಂದೆ ಕೂಡ ಅಥಣಿ ಭಾಗಕ್ಕೆ ವಿಶೇಷ ಯೋಜನೆ ನೀಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.