ETV Bharat / state

ಸಿಎಂ ಸಚಿವ ಸ್ಥಾನದ ಭರವಸೆ ನೀಡಿದ್ದಾರೆ, ಸಾಂದರ್ಭಿಕವಾಗಿ ಸಿಗುತ್ತೆ- ಮಹೇಶ್​ ಕುಮಟಳ್ಳಿ ವಿಶ್ವಾಸ - ಸಚಿವ ಸಂಪುಟ ವಿಸ್ತರಣೆ 2020

ಸಿಎಂ ಅವರು ನನಗೂ ಮುಂಬರುವ ದಿನಗಳಲ್ಲಿ ಸಚಿವ ಸ್ಥಾನ ನೀಡುವ ಕುರಿತು ಭರವಸೆ ನೀಡಿದ್ದಾರೆ. ನಾನು ಅತ್ತರೆ ಮಾತ್ರ ಹಾಲು ಕುಡಿಸ್ತಾರೆಂದು ನಾನು ನಂಬಿದವನಲ್ಲ. ವರಿಷ್ಠರು ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಾರೆ ಎಂಬ ನಂಬಿಕೆ ಇದೆ. ಸಿಎಂ ಯಡಿಯೂರಪ್ಪನವರ 2023ರವರೆಗೆ ಅಧಿಕಾರದಲ್ಲಿ ಮುಂದುವರೆಯುತ್ತಾರೆ..

ಶಾಸಕ ಮಹೇಶ್​ ಕುಮಟಳ್ಳಿ
ಮಹೇಶ್​ ಕುಮಟಳ್ಳಿ
author img

By

Published : Nov 29, 2020, 4:47 PM IST

Updated : Nov 29, 2020, 9:30 PM IST

ಬೆಳಗಾವಿ : ಮುಂಬರುವ ದಿನಗಳಲ್ಲಿ ಸಚಿವ ಸ್ಥಾನ ನೀಡುವುದಾಗಿ ಸಿಎಂ ಭರವಸೆ ನೀಡಿದ್ದಾರೆ. ಕಾದುನೋಡೋಣ ಪದೇಪದೆ ಸಚಿವ ಸ್ಥಾನ ನೀಡುವಂತೆ ಕೇಳುವುದು ಸರಿ ಅಲ್ಲ. ಸಿಎಂ ಜವಾಬ್ದಾರಿ ಸ್ಥಾನದಲ್ಲಿದ್ದಾರೆ. ಸಾಂದರ್ಭಿಕವಾಗಿ ಮಂತ್ರಿ ಸ್ಥಾನ ನೀಡಲಿದ್ದಾರೆ ಎಂದು ಶಾಸಕ ಮಹೇಶ ಕುಮಟಳ್ಳಿ ವಿಶ್ವಾಸ ವ್ಯಕ್ತಪಡಿಸಿದರು.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್​ನಿಂದ ಬಂದು ಗೆದ್ದಿರೋರಿಗೆ ಸಚಿವ ಸ್ಥಾನ ನೀಡುವ ಕುರಿತಾಗಿ ಸಿಎಂ ಯಡಿಯೂರಪ್ಪನವರು ಹೇಳಿದ್ದರು. ಆದರೀಗ ಯಾವುದೋ ಒಂದು ಸಮಸ್ಯೆ ಅವರಿಗೆ ಬಂದಿರಬಹುದು. ಹೀಗಾಗಿ ಅದನ್ನು ಸೂಕ್ಷ್ಮವಾಗಿ ತಿಳಿದುಕೊಂಡ ನಾನು ಯಾವುದೇ ಸಂದರ್ಭದಲ್ಲಿಯೂ ಭಾರತೀಯ ಜನತಾ ಪಾರ್ಟಿಗೆ, ವರಿಷ್ಟರಿಗೆ ಮುಜುಗರ ತರುವ ಕೆಲಸ ಮಾಡೋದಿಲ್ಲ ಎಂದರು.

ಶಾಸಕ ಮಹೇಶ್​ ಕುಮಟಳ್ಳಿ

ಸಿಎಂ ಅವರು ನನಗೂ ಮುಂಬರುವ ದಿನಗಳಲ್ಲಿ ಸಚಿವ ಸ್ಥಾನ ನೀಡುವ ಕುರಿತು ಭರವಸೆ ನೀಡಿದ್ದಾರೆ. ನಾನು ಅತ್ತರೆ ಮಾತ್ರ ಹಾಲು ಕುಡಿಸ್ತಾರೆಂದು ನಾನು ನಂಬಿದವನಲ್ಲ. ವರಿಷ್ಠರು ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಾರೆ ಎಂಬ ನಂಬಿಕೆ ಇದೆ. ಸಿಎಂ ಯಡಿಯೂರಪ್ಪನವರ 2023ರವರೆಗೆ ಅಧಿಕಾರದಲ್ಲಿ ಮುಂದುವರೆಯುತ್ತಾರೆ ಎಂದರು.

ಕಾಂಗ್ರೆಸ್​ನಿಂದ ಬಂದಿರುವ ಶಾಸಕರು ಬೆಂಗಳೂರಿನಲ್ಲಿ‌ ಸಭೆ ಮಾಡಿರುವ ಕುರಿತು ಯಾವುದೇ ಮಾಹಿತಿ ಇಲ್ಲ. ನಾನು ನನ್ನ ಕ್ಷೇತ್ರದಲ್ಲಿದ್ದೇನೆ. ಅದ್ಯಾವುದೂ ನಮ್ಮ ಗಮನಕ್ಕೆ ಬಂದಿಲ್ಲ. ಆ ಕುರಿಂತೆ ನಾನು ಪ್ರತಿಕ್ರಿಯೆ ನೀಡೋದಿಲ್ಲ. ನಾನು ನನ್ನ ಕೆಲಸದ ಕಡೆ ಗಮನ ಕೊಟ್ಟಿದ್ದೇನೆ ಎಂದರು. ಸಿಎಂ ಯಡಿಯೂರಪ್ಪ‌ ನನಗೆ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಆ ಸ್ಥಾನ ಕೊಟ್ಟ ಬಳಿಕ ನಾನು ಬಹಳ ಸಂತೋಷವಾಗಿದ್ದೇನೆ. ಈಗಾಗಲೇ ಸಿಎಂ ಅವರು ಸ್ಲಂ ಬೋರ್ಡ್​ನಲ್ಲಿ ಸುಮಾರು 97,137 ಮನೆಗಳನ್ನು ಕೊಟ್ಟಿದ್ದಾರೆ.

ರಾಜ್ಯದಲ್ಲಿರುವ ಸ್ಲಂ ಜನರ ಕುಟುಂಬಗಳ ಕಣ್ಣೀರು ಒರೆಸುವ ಒಳ್ಳೆಯ ಕೆಲಸಕ್ಕೆ ನನಗೆ ಅವಕಾಶ ಸಿಕ್ಕಿದೆ. ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದ ಸಂತೋಷವಿದೆ. ಕ್ಷೇತ್ರದ ಅಭಿವೃದ್ಧಿ ಕೆಲಸಗಳಿಗೆ ಮಂತ್ರಿಗಳು, ಸಚಿವರು ತಕ್ಷಣವೇ ಸ್ಪಂದಿಸುತ್ತಾರೆ. ಇದರಲ್ಲಿ ಮೂಲ, ವಲಸಿಗರು ಅನ್ನೋದಿಲ್ಲ ಎಂದರು.

Last Updated : Nov 29, 2020, 9:30 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.