ETV Bharat / state

ರಾಜ್ಯೋತ್ಸವಕ್ಕೆ ಕ್ಯಾತೆ ತೆಗೆದ ಮಹಾರಾಷ್ಟ್ರ: ರಾಜ್ಯದ ಕೆಲವು ಭಾಗಗಳನ್ನು ಸೇರಿಸಿಕೊಳ್ತಾರಂತೆ! - ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದ

ಕನ್ನಡ ರಾಜ್ಯೋತ್ಸವಕ್ಕೆ ಕರ್ನಾಟಕ ಸಿದ್ಧವಾಗಿರುವ ಬೆನ್ನಲ್ಲೆ ಮಹಾರಾಷ್ಟ್ರದ ಇಬ್ಬರು ಸಚಿವರು ಗಡಿ ಭಾಗದ ಜನರಿಗೆ ವಿವಾದಾತ್ಮಕ ಪತ್ರ ಬರೆದಿದ್ದಾರೆ.

Maharashtra ministers letter
ಕನ್ನಡ ರಾಜ್ಯೋತ್ಸವಕ್ಕೆ ಕ್ಯಾತೆ ತೆಗೆದ ಮಹಾರಾಷ್ಟ್ರ
author img

By

Published : Oct 30, 2020, 11:00 AM IST

ಮುಂಬೈ (ಮಹಾರಾಷ್ಟ್ರ): ನಾವು ಬೆಳಗಾವಿಯ ಕೆಲವು ಭಾಗಗಳು ಸೇರಿದಂತೆ ಹಲವು ಪ್ರದೇಶಗಳನ್ನು ಆದಷ್ಟು ಬೇಗ ಮಹಾರಾಷ್ಟ್ರದೊಳಗೆ ಸೇರಿಸಿಕೊಳ್ಳಲು ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದೇವೆ ಎಂದು ಏಕನಾಥ್ ಶಿಂಧೆ ಹಾಗೂ ಚಗನ್ ಭುಜ್ಪಾಲ್ ಗಡಿ ಪ್ರದೇಶದ ಜನರಿಗೆ ಪತ್ರ ಬರೆದಿದ್ದಾರೆ.

Maharashtra ministers letter
ಸಚಿವರ ಪತ್ರ

ಮಹಾರಾಷ್ಟ್ರ ಕರ್ನಾಟಕ ಗಡಿ ವಿವಾದ ಪ್ರಕರಣದ ಸಂಯೋಜಕರಾದ ಹಾಗೂ ಮಹಾರಾಷ್ಟ್ರ ಸರ್ಕಾರದಲ್ಲಿ ಸಚಿವರಾದ ಇವರು ಈ ಪ್ರಯತ್ನ ಯಶಸ್ವಿಯಾದ ದಿನ ಅದು ಐತಿಹಾಸಿಕವಾಗಿರುತ್ತದೆ. ಆ ದಿನದವರೆಗೂ ನಾವು ನಿಮ್ಮ ಜೊತೆಯಲ್ಲಿರುತ್ತೇವೆ ಎಂದು ಎರಡೂ ರಾಜ್ಯಗಳ ಗಡಿಯಲ್ಲಿರುವ ಜನರಿಗೆ ಪತ್ರ ಬರೆದಿದ್ದಾರೆ.

Maharashtra ministers letter
ಸಚಿವರ ಪತ್ರ

ಇದರ ಜೊತೆಗೆ ಮಹಾರಾಷ್ಟ್ರ ರಚನೆಯಾದಾಗ ಮುಂಬೈ ಅನ್ನು ಸೇರಿಸಿಕೊಂಡೆವು. ದುರಾದೃಷ್ಟವಶಾತ್ ದಕ್ಷಿಣದ ಕೆಲವು ಗ್ರಾಮಗಳನ್ನು ಸೇರಿಸಿಕೊಳ್ಳಲಾಗಲಿಲ್ಲ. ಸುಮಾರು 6 ದಶಕಗಳಿಂದ ನಾವು ಹೋರಾಡುತ್ತಿದ್ದೇವೆ. ಶೀಘ್ರವಾಗಿ ಬೆಳಗಾವಿ, ಕಾರವಾರ, ನಿಪ್ಪಾಣಿ, ಬೀದರ್, ಭಾಲ್ಕಿ ಮುಂತಾದ ಪ್ರದೇಶಗಳನ್ನು ಮಹಾರಾಷ್ಟ್ರದೊಳಗೆ ಸೇರಿಸಿಕೊಳ್ಳುತ್ತೇವೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

Maharashtra ministers letter
ಸಚಿವರ ಪತ್ರ

ಇನ್ನು ನವೆಂಬರ್ 1ರಂದು ಕರ್ನಾಟಕ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಗಡಿಭಾಗದಲ್ಲಿ ವಾಸಿಸುತ್ತಿರುವ ಮರಾಠಿ ಜನರಿಗೆ ಕರಾಳ ದಿನವನ್ನಾಗಿ ಆಚರಿಸಲು ಕರೆ ನೀಡಲಾಗಿದೆ. ಈ ದಿನದಂದು ಮಹಾರಾಷ್ಟ್ರದ ಎಲ್ಲಾ ಸಚಿವರು ಕಪ್ಪು ರಿಬ್ಬನ್​ಗಳನ್ನು ಧರಿಸಿ ಕೆಲಸ ನಿರ್ವಹಿಸಲು ನಿರ್ಧರಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.