ETV Bharat / state

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 120 ಕೆಜಿ ಗಾಂಜಾ ಜಪ್ತಿ - ಡ್ರಗ್ ಪೆಡ್ಲರ್ ಅರೆಸ್ಟ್​ ನ್ಯೂಸ್​

ಮೀರಜ್ ತಾಲೂಕಿನ ಮೈಶಾಲ್ ಗ್ರಾಮದ ಹೊರವಲಯದಲ್ಲಿ ಪೊಲೀಸರು ದಾಳಿ ನಡೆಸಿ ಮಹಾರಾಷ್ಟ್ರ ಮೂಲದ‌ ಗಾಂಜಾ ಪೆಡ್ಲರ್ ಒಬ್ಬನನ್ನು ಬಂಧಿಸಿ, 24 ಲಕ್ಷ ರೂ ಮೌಲ್ಯದ ಗಾಂಜಾ ವಶಪಡಿಸಿಕೊಂಡಿದ್ದಾರೆ.

Maharashtra  Ganja peddler arrested
ಗಾಂಜಾ ಜಪ್ತಿ
author img

By

Published : Sep 26, 2020, 4:01 PM IST

ಬೆಳಗಾವಿ:ಬೆಳಗಾವಿ ಜಿಲ್ಲಾ ಅಪರಾಧ ತನಿಖಾ ತಂಡ ಭರ್ಜರಿ ಕಾರ್ಯಾಚರಣೆ ನಡೆಸಿ 24 ಲಕ್ಷ ರೂ ಮೌಲ್ಯದ 120 ಕೆಜಿ ಗಾಂಜಾ ಜಪ್ತಿ ಮಾಡಿಕೊಂಡಿದ್ದಾರೆ.

Maharashtra  Ganja peddler arrested
ಗಾಂಜಾ ಜಪ್ತಿ

ಮಹಾರಾಷ್ಟ್ರದ ಮೀರಜ್ ಮೂಲದ ಡ್ರಗ್ ಪೆಡ್ಲರ್ ಆಶ್ಪಕ್ ಮುಲ್ಲಾ ಬಂಧಿತ ಆರೋಪಿ. ಮೀರಜ್ ತಾಲೂಕಿನ ಮೈಶಾಲ್ ಗ್ರಾಮದ ಹೊರವಲಯದ ಪಂಪಹೌಸ್ ಹತ್ತಿರ ಆರೋಪಿಯನ್ನು ಡಿಸಿಐಬಿ ‌ತಂಡ ಖೆಡ್ಡಾಕ್ಕೆ ‌ಕೆಡವಿದೆ. 2 ಕೆಜಿ ತೂಕದ 60 ಗಾಂಜಾ ಪಾಕೆಟ್, ಸ್ವಿಫ್ಟ್ ಕಾರು, ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ತೆಲಂಗಾಣದ ವಾರಂಗಲ್ ಮತ್ತು ಹೈದರಾಬಾದ್​ ನಿಂದ ಗಾಂಜಾ ಖರೀದಿಸಿ ಈತ ಮಹಾರಾಷ್ಟ್ರದ ಸಾಂಗ್ಲಿ, ಮೀರಜ್, ಬೆಳಗಾವಿ, ಧಾರವಾಡಕ್ಕೆ ಪೂರೈಸುತ್ತಿದ್ದನು ಎಂದು ತಿಳಿದು ಬಂದಿದೆ.

Maharashtra  Ganja peddler arrested
ಗಾಂಜಾ ಜಪ್ತಿ

ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದ ಬೆಳಗಾವಿ ಡಿಸಿಐಬಿ ತಂಡ ಆರೋಪಿಯನ್ನು ಬಂಧಿಸಿದೆ. ಆರೋಪಿ ಆಶ್ಪಕ್ ಗೆ ಗಾಂಜಾ ಪೂರೈಸುತ್ತಿದ್ದ ತೆಲಂಗಾಣದ ಇಬ್ಬರಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ. ಈ ಸಂಬಂಧ ಬೆಳಗಾವಿ ‌ಎಸ್ಪಿ ಲಕ್ಷ್ಮಣ ನಿಂಬರಗಿ ಅವರಿಂದ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.