ETV Bharat / state

ಡಿಕೆಶಿ ಬಂಧನ ಮಾಡಿಸಿ ಹೀರೋ ಮಾಡುವ ಅಗತ್ಯ ಬಿಜೆಪಿಗೆ ಇಲ್ಲ: ಸಚಿವ ಮಾಧುಸ್ವಾಮಿ

ನಾವು ಕೆಟ್ಟ ರಾಜಕಾರಣ ಮಾಡಿಕೊಂಡು ಬಂದಿಲ್ಲ. ಡಿ.ಕೆ.ಶಿವಕುಮಾರ್​ ಬಂಧನ ಮಾಡಿಸಬೇಕಾದ ಅವಶ್ಯಕತೆ, ಹಠ ಇಲ್ಲ. ಅವರನ್ನ ಬಂಧನ ಮಾಡಿಸಿ ಹೀರೋ ಮಾಡಿಸುವ ಅಗತ್ಯನೇ ಇಲ್ಲ ಎಂದು ಜೆ.ಸಿ.ಮಾಧುಸ್ವಾಮಿ ಹೇಳಿದ್ದಾರೆ.

ಜೆ.ಸಿ. ಮಾಧುಸ್ವಾಮಿ
author img

By

Published : Sep 4, 2019, 11:33 AM IST

Updated : Sep 4, 2019, 11:41 AM IST

ಬೆಳಗಾವಿ: ಮಾಜಿ ಸಚಿವ ಡಿ.ಕೆ.ಶಿವಕುಮಾರ್​ ಬಂಧಿಸಿ ಹೀರೋ ಮಾಡುವ ಅಗತ್ಯ ನಮಗಿಲ್ಲ ಎಂದು ಕಾನೂನು ಸಂಸದೀಯ ವ್ಯವಹಾರಗಳ ಮತ್ತು ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ‌ ಹೇಳಿದರು.

ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಮಾಧುಸ್ವಾಮಿ

ನಗರದ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಡಿ ಇಲಾಖೆಯ ಮಾಜಿ ಸಚಿವ ಡಿ.ಕೆ.ಶಿವಕುಮಾರ್​ ಅವರನ್ನು‌ ಬಂಧನ ಮಾಡಿರುವುದು ಸ್ವಾಭಾವಿಕ. ಅದರ ಬಗ್ಗೆ ಪ್ರತಿಕ್ರಿಯೆ ನೀಡುವ ಅಗತ್ಯ ಬಿಜೆಪಿಗೆ ಇಲ್ಲ. ನಾವು ಕೆಟ್ಟ ರಾಜಕಾರಣ ಮಾಡಿಕೊಂಡು ಬಂದಿಲ್ಲ. ಡಿ.ಕೆ.ಶಿವಕುಮಾರ್​ ಬಂಧನ ಮಾಡಿಸಬೇಕಾದ ಅವಶ್ಯಕತೆ, ಹಠ ಇಲ್ಲ. ಅವರನ್ನ ಬಂಧನ ಮಾಡಿಸಿ ಹೀರೋ ಮಾಡಿಸುವ ಅಗತ್ಯವೇ ಇಲ್ಲ ಎಂದು‌ ಪ್ರತಿಕ್ರಿಯಿಸಿದರು.

ಡಿಸಿಎಂ ಹುದ್ದೆ ಬಗ್ಗೆ ಪ್ರತಿಕ್ರಿಯಿಸಿ, ರಾಜ್ಯದಲ್ಲಿ ಮೂರು ಡಿಸಿಎಂ ಹುದ್ದೆ ನೀಡಿರುವುದು ಬಿಜೆಪಿ‌ ಹೈಕಮಾಂಡ್​ಗೆ ಬಿಟ್ಟಿದ್ದು. ಆದರೆ ರಾಜಕಾರಣದಲ್ಲಿ ಎಲ್ಲರಿಗೂ ಆಸೆ ಇರುತ್ತದೆ. ಹಿರಿಯರು ಇರುತ್ತಾರೆ. ಆಯಾ ಜಿಲ್ಲೆಯ ಪ್ರಾಂತ್ಯಗಳನ್ನು ನೋಡಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ, ಕೇಂದ್ರ ಗೃಹ‌ ಸಚಿವ ಅಮಿತ್ ಶಾ ಎಲ್ಲವನ್ನು ಅಳೆದು ತೂಗಿ ಸಚಿವರನ್ನು ನೇಮಕ ಮಾಡಿದ್ದಾರೆ ಎಂದರು.

ಬೆಳಗಾವಿ ಜಿಲ್ಲೆಯ ಪ್ರವಾಹದಲ್ಲಿ ಸಣ್ಣ ನೀರಾವರಿಗೆ ಸೇರಿದಂತೆ ಕೆರೆಗಳು ಹಾನಿಯಾಗಿರುವ ಕುರಿತು ನಾನೇ ಸ್ವತಃ ಪರಿಶೀಲನೆ ನಡೆಸಲಿದ್ದೇನೆ. ಹಿರಿಯ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿದಿಗಳ ಜತೆ ಸಭೆ ನಡೆಸಲಿದ್ದೇನೆ ಎಂದರು.

Intro:ಡಿ.ಕೆ ಶಿವಕುಮಾರ ಬಂಧನ ಮಾಡಿಸಿ ಯಾರನ್ನು ಹಿರೋ ಮಾಡುವ ಅಗತ್ಯ ಬಿಜೆಪಿಗೆ ಇಲ್ಲ : ಜೆ.ಸಿ. ಮಾಧುಸ್ವಾಮಿ

ಬಡಳಗಾವಿ : ಮಾಜಿ ಸಚಿವ ಡಿ.ಕೆ.ಶಿವಕುಮಾರ ಬಂಧನ ಮಾಡಿಸಿ ಯಾರನ್ನು ಹಿರೋ ಮಾಡುವ ಅಗತ್ಯ ನಮಗೆ ಇಲ್ಲ ಎಂದು ಕಾನೂನು ಸಂಸದೀಯ ವ್ಯವಹಾರಗಳ ಮತ್ತು ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ‌ ಹೇಳಿದರು.

ಬುಧವಾರ ನಗರದ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಮಾಧುಸ್ವಾಮಿ. ಇಡಿ ಇಲಾಖೆಯ ಮಾಜಿ ಸಚಿವ ಡಿ.ಕೆ.ಶಿವಕುಮಾರ ಅವರನ್ನು‌ ಬಂಧನ ಮಾಡಿರುವುದು ಸ್ವಾಭಾವಿಕ. ಅದರ ಬಗ್ಗೆ ಪ್ರತಿಕ್ರಿಯೆ ನೀಡುವ ಅಗತ್ಯ ಬಿಜೆಪಿಗೆ ಇಲ್ಲ. ನಾವು ಕೆಟ್ಟ ರಾಜಕಾರಣ ಮಾಡಿಕೊಂಡು ಬಂದಿಲ್ಲ. ಡಿಕೆ.ಶಿವಕುಮಾರ ಬಂಧನ ಮಾಡಿಸಬೇಕಾದ ಅವಶ್ಯಕತೆ, ಹಠ ಇಲ್ಲ. ಅವರನ್ನ ಬಂಧನ ಮಾಡಿಸಿ ಹೀರೊ ಮಾಡಿಸುವ ಅಗತ್ಯನೇ ಇಲ್ಲ ಎಂದು‌ ಖಾರವಾಗಿ ಪ್ರತಿಕ್ರಿಯಿಸಿದರು.

ಮಾಜಿ ಸಚಿವ ಡಿ.ಕೆ.ಶಿವಕುಮಾರ ಬಂಧನವಾಗಿರುವುದು ಸ್ವತಃ ಅವರೆ ಹೇಳಿದ್ದಾರೆ. ನಾವೇ ಮಾಡಿದ ಅಧಿಕಾರಿಗಳು, ನಾವೇ ಕಾನೂನು ರಚನೆ ಮಾಡಿದವರೆ ನಮ್ಮನ್ನು‌ ಬಂಧಿಸಿದ್ದಾರೆ ಎಂದು ಹೇಳಿದ್ದಾರೆ. ಇದಕ್ಕೆ ಬಿಜೆಪಿ ಹೊಣೆ ಎನ್ನುವುದು ತಪ್ಪು ಕಲ್ಪನೆ ಎಂದರು.

Body:ರಾಜ್ಯದಲ್ಲಿ ಮೂರು ಡಿಸಿಎಂ ಹುದ್ದೆ ನೀಡಿರುವುದು ಬಿಜೆಪಿ‌ ಹೈಕಮಾಂಡ್ ಗೆ ಬಿಟ್ಟಿದ್ದು, ಆದರೆ ರಾಜಕಾರಣದಲ್ಲಿ ಎಲ್ಲರಿಗೂ ಆಸೆ ಇರುತ್ತದೆ. ಹಿರಿಯರು ಇರುತ್ತಾರೆ. ಆಯಾ ಜಿಲ್ಲೆಯ ಪ್ರಾಂತಗಳನ್ನು ನೋಡಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ, ಕೇಂದ್ರ ಗೃಹ‌ ಸಚಿವ ಅಮಿತ್ ಶಾ ಎಲ್ಲವನ್ನು ಅಳೆದು ತೂಗಿ ಸಚಿವರನ್ನು ನೇಮಕ ಮಾಡಿದ್ದಾರೆ ಎಂದರು.

ನಾನು ಬೆಳಗಾವಿ ಜಿಲ್ಲೆಯ ಪ್ರವಾಹದಲ್ಲಿ ಸಣ್ಣ ನೀರಾವರಿಗೆ ಸೇರಿದಂತೆ ಕೆರೆಗಳು ಹಾನಿಯಾಗಿರುವ ಕುರಿತು ನಾನೆ ಸ್ವತಃ ಪರಿಶೀಲನೆ ನಡೆಸಲಿದ್ದೇನೆ. ಹಿರಿಯ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿದಿಗಳ ಜತೆ ಸಭೆ ನಡೆಸಲಿದ್ದೇನೆ ಎಂದರು.

ಕೇಂದ್ರ ಸರಕಾರ ನೆರೆ ಹಾನಿ ಪರಿಹಾರ ನೀಡುವಲ್ಲಿ ವಿಳಂಭ ಮಾಡಿಲ್ಲ. ನೆರೆಯಲ್ಲಿ ಕೊಚ್ಚಿ ಹೊದವರಿಗೆ ಪರಿಹಾರ, ಮನೆ ಕಳೆದುಕೊಂಡವರಿಗೆ ಮನೆ ನಿರ್ಮಾಣ ಮಾಡುವುದರ ಕುರಿತು. ಸಮಿತಿ ರಚನೆ ಮಾಡಿ ಕೇಂದ್ರ ಸರಕಾರಕ್ಕೆ ಪತ್ರ ಬರೆಯಲಾಗಿದೆ.

Conclusion:ದಕ್ಷಿಣ ಕನ್ನಡದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಹಾನಿಯಾಗಿದೆ. ಆದರೆ ಐದು ಎಕರೆ ಹೆಚ್ಚಿನ ಪ್ರಮಾಣದಲ್ಲಿ‌ ಜಮೀನು ಹೊಂದಿದವರಿಗೆ ಪರಿಹಾರ ಸಿಗುವುದು ಕಷ್ಟ. ಕೇಂದ್ರ ಸರಕಾರಕ್ಕೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಅನುದಾನ ನೀಡುವಂತೆ ಒತ್ತಾಯ ಮಾಡಲಾಗುವುದು. ವಿರೋಧ ಪಕ್ಷದವರು ಯಾವುದರಲ್ಲಿ ಅಡ್ಡಿಯಾಗುತ್ತಿದೆ ಎನ್ನುವುದನ್ನು ಸ್ಪಷ್ಟವಾಗಿ ಹೇಳಲಿ ಎಂದು ಪ್ರಶ್ನಿಸಿದರು.

ವಿನಾಯಕ ಮಠಪತಿ
ಬೆಳಗಾವಿ

Last Updated : Sep 4, 2019, 11:41 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.