ETV Bharat / state

ಮನೆಗೆ ನುಗ್ಗಿದ ಲಾರಿ : ಬೈಕ್‌ ಸವಾರ, ಜಾನುವಾರು ಸಾವು - etv bharat

ನಿಯಂತ್ರಣ ತಪ್ಪಿ ಮನೆಗೆ ಉಗ್ಗಿತು ಕಟ್ಟಿಗೆ ತುಂಬಿದ್ದ ಲಾರಿ. ಮನೆ ಸಂಪೂರ್ಣ ಕುಸಿತ. ಬೈಕ್​ ಸವಾರ, ಜಾನುವಾರುಗಳು ಸಾವು. ರಾಯಬಾಗ ತಾಲೂಕಲ್ಲಿ ದುರ್ಘಟನೆ.

ಮನೆಗೆ ನುಗ್ಗಿದ ಲಾರಿ
author img

By

Published : Mar 26, 2019, 12:28 PM IST

ಚಿಕ್ಕೋಡಿ : ಕಟ್ಟಿಗೆ ತುಂಬಿದ್ದ ಲಾರಿಯೊಂದು ರಸ್ತೆ ಪಕ್ಕದ ಮನೆಗೆ ನುಗ್ಗಿದ್ದರಿಂದ ಬೈಕ್​ ಸವಾರ ಹಾಗೂ ಮನೆಯಲ್ಲಿದ್ದ ಜಾನುವಾರುಗಳು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ರಾಯಬಾಗ ತಾಲೂಕಿನ ಹೊರವಲಯದಲ್ಲಿ ಸಂಭವಿಸಿದೆ.

ರಾಯಬಾಗ-ಚಿಕ್ಕೋಡಿ ಮುಖ್ಯ ರಸ್ತೆಯ ಕಳ್ಳಿಕೋಡಿ ಸ್ಟಾಪ್‌ ಬಳಿ ಘಟನೆ ಸಂಭವಿಸಿದೆ. ಲಾರಿ ಮನೆಯತ್ತ ರಭಸವಾಗಿ ನುಗ್ಗುತ್ತಿದ್ದ ವೇಳೆ ರಾಯಬಾಗ ಕಡೆ ತೆರಳುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್​​ನಲ್ಲಿ ಬರುತ್ತಿದ್ದ ಬಾವನ ಸವದತ್ತಿಯ ರಾಜು ಸಿದ್ದಪ್ಪ ಖೋತ (35) ಎಂಬಾತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಮನೆಗೆ ನುಗ್ಗಿದ ಲಾರಿ

ಇನ್ನು ಮನೆಯವರು ಸಂತೆಗೆ ಹೋಗಿದ್ದರಿಂದ ಯಾವುದೇ ಪ್ರಾಣ ಹಾನಿಯಾಗಿಲ್ಲ. ಲಾರಿ ನುಗ್ಗಿದ ಮನೆಯು ಮಲ್ಲಪ್ಪ ರಾಮಪ್ಪ ರಂಗಣ್ಣವರ ಎಂಬುವರಿಗೆ ಸೇರಿದ್ದು ಸಂಪೂರ್ಣ ಕುಸಿದಿದೆ. ಘಟನೆ ಬಳಿಕ ಲಾರಿ ಚಾಲಕ ಪರಾರಿಯಾಗಿದ್ದಾನೆ. ಈ ಕುರಿತು ರಾಯಬಾಗ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮನೆಗೆ ನುಗ್ಗಿದ ಲಾರಿ : ಬೈಕ್‌ ಸವಾರ, ದನಕರು ಸಾವು ಚಿಕ್ಕೋಡಿ : ಕಟ್ಟಿಗೆ ತುಂಬಿದ ಲಾರಿಯೊಂದು ರಾಯಬಾಗ-ಚಿಕ್ಕೋಡಿ ಮುಖ್ಯ ರಸ್ತೆಯ ಕಳ್ಳಿಕೋಡಿ ಸ್ಟಾಪ್‌ನ ರಂಗಣ್ಣವರ ತೋಟದ ಬಳಿ ರಸ್ತೆ ಪಕ್ಕದ ಮನೆಗೆ ನುಗ್ಗಿದ್ದರಿಂದ ಮನೆಯಲ್ಲಿದ್ದ ದನಕರುಗಳು ಸ್ಥಳದಲ್ಲಿಯೇ ಮೃತಪಟ್ಟಿದ್ದು ಇದೇ ಘಟನೆಯಲ್ಲಿ ಬೈಕ್‌ ಸವಾರರೊಬ್ಬರು ಮೃತಪಟ್ಟಿರುವ ಘಟನೆ ರಾಯಬಾಗ ತಾಲೂಕಿನ ಹೊರವಲಯದಲ್ಲಿ ನಡೆದಿದೆ. ರಾಯಬಾಗದಿಂದ ಕಟ್ಟಿಗೆ ತುಂಬಿಕೊಂಡು ಹೊರಟಿದ್ದ ಲಾರಿ, ಚಾಲಕನ ನಿಯಂತ್ರಣ ತಪ್ಪಿ ಏಕಾಏಕಿ ಮನೆಯ ಒಳಗೆ ನುಗ್ಗಿದರ ಪರಿಣಾಮ ಮನೆಯಲ್ಲಿಯ ಎರಡು ಎಮ್ಮೆ ಹಾಗೂ ಒಂದು ಆಕಳು ಮೃತಪಟ್ಟು, ಒಂದು ಎಮ್ಮೆ ಗಾಯಗೊಂಡಿದೆ. ಆದರೆ ಇದೇ ಸಮಯಕ್ಕೆ ಸರಿಯಾಗಿ ರಾಯಬಾಗ ಕಡೆಗೆ ಬೈಕ್‌ನಲ್ಲಿ ಬರುತ್ತಿದ್ದ ಬಾವನ ಸವದತ್ತಿಯ ರಾಜು ಸಿದ್ದಪ್ಪ ಖೋತ (35) ಎಂಬುವವರಿಗೆ ಲಾರಿಯು ರಭಸದಿಂದ ನುಗ್ಗುವ ಸಂದರ್ಭದಲ್ಲಿ ಡಿಕ್ಕಿ ಹೊಡೆದ ಪರಿಣಾಮ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮನೆಯವರು ಸಂತೆಗೆ ಹೋಗಿದ್ದರಿಂದ ಸುರಕ್ಷಿತವಾಗಿ ಉಳಿಯುವಂತಾಯಿತು. ಅಕ್ಕಪಕ್ಕದ ಮನೆಯವರು ಕೂಡ ಮನೆಯ ಎದುರಿನ ಮನೆಯಲ್ಲಿ ಕುಳಿತಿದ್ದು ಹೆಚ್ಚಿನ ಅನಾಹುತ ತಪ್ಪಿದಂತಾಗಿದೆ.  ಲಾರಿ ನುಗ್ಗಿದ ಮನೆ ಮಲ್ಲಪ್ಪ ರಾಮಪ್ಪ ರಂಗಣ್ಣವರ ಎಂಬುವವರಿಗೆ ಸೇರಿದ್ದು ಸಂಪೂರ್ಣ ಮನೆ ಕುಸಿತಕ್ಕೊಳಗಾಗಿದೆ ಹಾಗೂ ಲಾರಿ ಚಾಲಕ ತಲೆ ಮರೆಸಿಕೊಂಡಿದ್ದಾನೆ.  ಈ ಕುರಿತು ರಾಯಬಾಗ ಪೋಲಿಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಂಜಯ ಕೌಲಗಿ ಚಿಕ್ಕೋಡಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.