ETV Bharat / state

ಬೆಳಗಾವಿಯ ನೋಂದಣಿ ಇಲಾಖೆಗೆ ಲೋಕಾಯುಕ್ತ ಎಸ್ಪಿ‌ ದಿಢೀರ್‌ ಭೇಟಿ, ದಾಖಲೆಗಳ ಪರಿಶೀಲನೆ - ಲೋಕಾಯುಕ್ತ ಡಿಎಸ್​ಪಿ ರಘು

ಬೆಳಗಾವಿಯ ನೋಂದಣಿ ಇಲಾಖೆಗೆ ಲೋಕಾಯುಕ್ತ ಎಸ್​ಪಿ ಹನುಮಂತರಾಯ್​ ನೇತೃತ್ವದಲ್ಲಿ ಅಧಿಕಾರಿಗಳು ದಿಢೀರ್​ ಭೇಟಿ ನೀಡಿದರು.

ಬೆಳಗಾವಿಯ ನೋಂದಣಿ ಇಲಾಖೆಗೆ ಲೋಕಾಯುಕ್ತ ಎಸ್ಪಿ‌ ಸರ್ಪ್ರೈಸ್ ಭೇಟಿ

author img

By ETV Bharat Karnataka Team

Published : Aug 30, 2023, 10:27 PM IST

ಬೆಳಗಾವಿಯ ನೋಂದಣಿ ಇಲಾಖೆಗೆ ಲೋಕಾಯುಕ್ತ ಎಸ್ಪಿ‌ ಸರ್ಪ್ರೈಸ್ ಭೇಟಿ

ಬೆಳಗಾವಿ: ಇಲ್ಲಿನ ಸಬ್ ರಿಜಿಸ್ಟ್ರಾರ್ ಕಚೇರಿಗೆ ಲೋಕಾಯುಕ್ತ ಅಧಿಕಾರಿಗಳು ಅನಿರೀಕ್ಷಿತ ಭೇಟಿ‌ ನೀಡಿ, ದಾಖಲೆಗಳನ್ನು ಪರಿಶೀಲಿಸಿದರು. ಸಾರ್ವಜನಿಕರಿಂದ ಅನೇಕ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ದಕ್ಷಿಣ ಕ್ಷೇತ್ರದಲ್ಲಿರುವ ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ ಲೋಕಾಯುಕ್ತ ಎಸ್​ಪಿ ಹನುಮಂತರಾಯ್ ನೇತೃತ್ವದಲ್ಲಿ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದರು.

ಬೇನಾಮಿ ಹೆಸರಲ್ಲಿ ಆಸ್ತಿ ಖರೀದಿಗೆ ಅವಕಾಶ ನೀಡದಂತೆ ನೋಂದಣಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಬೇನಾಮಿ ಹೆಸರಿನಲ್ಲಿ ಆಸ್ತಿ ಖರೀದಿಗೆ ಬಂದರೆ ಅಂಥವರ ವಿರುದ್ಧ ದೂರು ದಾಖಲಿಸಬೇಕು. ಮಾಲೀಕರ ನೈಜ ಮಾಹಿತಿ ಪರಿಶೀಲನೆ ಮಾಡಿದ ಬಳಿಕವೇ ನೋಂದಣಿ ಮಾಡುವಂತೆ ಎಸ್ಪಿ, ಅಧಿಕಾರಿಗಳಿಗೆ ಸೂಚಿಸಿದರು.

ಈ ವೇಳೆ ಆನ್​ಲೈನ್​ ನೋಂದಣಿ ಪ್ರಕ್ರಿಯೆಯನ್ನು ಲೋಕಾಯುಕ್ತ ಅಧಿಕಾರಿಗಳು ಪರಿಶೀಲಿಸಿದರು. ಇತ್ತೀಚಿಗೆ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ಆಸ್ತಿ ನೋಂದಣಿ ಮಾಡುವ ಪಕ್ಷಕಾರರ ನೈಜತೆ ಕುರಿತು ಅವರ ದಾಖಲಾತಿಗಳನ್ನು ಪರಿಶೀಲಿಸುವ ಅಧಿಕಾರವನ್ನು ಸರ್ಕಾರ ಉಪ ನೋಂದಣಾಧಿಕಾರಿಗೆ ಕೊಟ್ಟಿದೆ.

ಇನ್ಮುಂದೆ ಖೊಟ್ಟಿ ದಾಖಲೆ ಸೃಷ್ಟಿಸಿ ಆಸ್ತಿ ಮಾರಾಟ ಮಾಡುವವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವ ಅಧಿಕಾರವಿದೆ. ಕಾವೇರಿ-2 ಜನರೇಟ್ ಆಗಿದ್ದರಿಂದ ಅಕ್ರಮಕ್ಕೆ ಯಾವುದೇ ರೀತಿ ಅವಕಾಶ ಇಲ್ಲ. ಹಾಗಾಗಿ ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಲೋಕಾಯುಕ್ತ ಅಧಿಕಾರಿಗಳು ನೋಂದಣಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು‌. ಲೋಕಾಯುಕ್ತ ಡಿಎಸ್​ಪಿ ರಘು, ಡಿಎಸ್​ಪಿ ಬಿ.ಎಸ್.ಪಾಟೀಲ, ಇನ್ಸ್​ಪೆಕ್ಟರ್ ನಿರಂಜನ ಪಾಟೀಲ ಸೇರಿ ಮತ್ತಿತರರು ಇದ್ದರು.

ಆರ್‌ಆರ್‌ ನಗರ ಸಬ್ ರಿಜಿಸ್ಟ್ರಾರ್ ಕಚೇರಿ ಮೇಲೆ ಎಸಿಬಿ ದಾಳಿ: ರಾಜರಾಜೇಶ್ವರಿ ನಗರದ ಸಬ್ ರಿಜಿಸ್ಟ್ರಾರ್ ಕಚೇರಿ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ದಾಳಿ ನಡೆಸಿ ಮಧ್ಯವರ್ತಿಗಳಿಂದ 3.46 ಲಕ್ಷ ನಗದು (ಡಿಸೆಂಬರ್ 19-2020) ವಶಪಡಿಸಿಕೊಳ್ಳಲಾಗಿತ್ತು.

ದಾಳಿ ವೇಳೆ ಸಾರ್ವಜನಿಕರ ಕೆಲ‌ವು ದಾಖಲೆಗಳು, ಖಾಲಿ ಛಾಪಾ ಕಾಗದಗಳು ಪತ್ತೆಯಾಗಿದ್ದವು. ಈ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಮಧ್ಯವರ್ತಿಗಳಿಗೆ ನೊಟೀಸ್ ನೀಡಲಾಗಿದ್ದು, ಎಸಿಬಿ ಅಧಿಕಾರಿಗಳು ತನಿಖೆ ನಡೆಸಿದ್ದರು.

ಇದನ್ನೂ ಓದಿ: ಸಬ್ ರಿಜಿಸ್ಟರ್ ಕಚೇರಿ ಮೂಲಸೌಕರ್ಯ ಕೊರತೆ ನೀಗಿಸಿ, ಇಲ್ಲವಾದರೆ ಕ್ರಮ: ಸಚಿವ ಅಶೋಕ್

ಆರ್.ಆರ್.‌ನಗರದಲ್ಲಿರುವ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಏಜೆಂಟರು, ದಲ್ಲಾಳಿಗಳು ಹಾಗೂ ಜನರಿಂದ ಲಂಚ ಪಡೆಯುತ್ತಿದ್ದಾರೆ ಎಂದು ಸಾರ್ವಜನಿಕರಿಂದ ಎಸಿಬಿಗೆ ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಕಚೇರಿ ಮೇಲೆ ದಾಳಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದರು. ಇದರ ಹಿಂದಿನ ವಾರ ಕೋರಮಂಗಲ ಆರ್‌ಟಿಒ ಕಚೇರಿ ಮೇಲೆ ನಡೆಸಿದ ಎಸಿಬಿ ದಾಳಿಯಲ್ಲಿ 5.96 ಲಕ್ಷ ಹಣ ಪತ್ತೆಯಾಗಿತ್ತು. ಏಜೆಂಟರು ಸೇರಿದಂತೆ ಐವರನ್ನು ಬಂಧಿಸಲಾಗಿತ್ತು.

ಇದನ್ನೂ ಓದಿ: ಆರ್‌ಆರ್‌ ನಗರ ಸಬ್ ರಿಜಿಸ್ಟರ್ ಕಚೇರಿ ಮೇಲೆ ಎಸಿಬಿ ದಾಳಿ: 3.46 ಲಕ್ಷ ನಗದು ಪತ್ತೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.