ETV Bharat / state

ಬೆಳಗಾವಿ: ಕೊಗನೊಳ್ಳಿ ಆರ್‌ಟಿಒ ಚೆಕ್​​ ಪೋಸ್ಟ್ ಮೇಲೆ‌ ಲೋಕಾಯುಕ್ತರ ದಾಳಿ

ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಹೊರವಲಯದಲ್ಲಿರುವ ಕೊಗನೊಳ್ಳಿ ಆರ್‌ಟಿಒ ಚೆಕ್​​ ಪೋಸ್ಟ್ ಮೇಲೆ‌ ಲೋಕಾಯುಕ್ತ ಅಧಿಕಾರಿಗಳು ಇಂದು ಬೆಳ್ಳಂ ಬೆಳಗ್ಗೆ ದಾಳಿ ನಡೆಸಿದ್ದಾರೆ.

Koganolli RTO check post
ಕೋಗನೊಳ್ಳಿ ಆರ್‌ಟಿಒ ಚೆಕ್​​ ಪೋಸ್ಟ್
author img

By

Published : Sep 30, 2022, 10:48 AM IST

ಚಿಕ್ಕೋಡಿ(ಬೆಳಗಾವಿ): ಜಿಲ್ಲೆಯ ನಿಪ್ಪಾಣಿ ತಾಲೂಕಿನ ಹೊರವಲಯದಲ್ಲಿರುವ ಕೋಗನೊಳ್ಳಿ ಆರ್‌ಟಿಒ ಚೆಕ್ ಪೋಸ್ಟ್ ಮೇಲೆ ಲೋಕಾಯುಕ್ತ ಅಧಿಕಾರಿಗಳು ಇಂದು ಬೆಳಗಿನಜಾವ ದಾಳಿ ನಡೆಸಿದ್ದಾರೆ. ಲೋಕಾಯುಕ್ತ ದಾಳಿಯಲ್ಲಿ ಲಕ್ಷಗಟ್ಟಲೆ ಹಣ ಪತ್ತೆಯಾಗಿದೆ ಎನ್ನಲಾಗಿದ್ದು, ಅಧಿಕಾರಿಗಳು ದಾಖಲೆ ಪರಿಶೀಲನೆ ಮುಂದುವರೆಸಿದ್ದಾರೆ.

ಹಣ ವಸೂಲಿ ಆರೋಪ: ನಿಪ್ಪಾಣಿ ತಾಲೂಕಿನ ಕೊಗನೊಳ್ಳಿ ಚೆಕ್ ಪೋಸ್ಟ್ ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿದ್ದು, ಕರ್ನಾಟಕ ರಾಜ್ಯಕ್ಕೆ ಪ್ರವೇಶಿಸಿಸುವ ಪ್ರಮುಖ ಬೆಂಗಳೂರು-ಮುಂಬೈ ರಾಷ್ಟ್ರೀಯ ಹೆದ್ದಾರಿ ಇದಾಗಿದೆ. ರಸ್ತೆ ಪಕ್ಕದಲ್ಲಿರುವ ಆರ್​ಟಿಒ ಚೆಕ್ ಪೋಸ್ಟ್ ಮೂಲಕವೇ ಸಾವಿರಾರು ವಾಹನಗಳು ತಪಾಸಣೆಗೆ ಒಳಪಟ್ಟ ನಂತರವೇ ರಾಜ್ಯಕ್ಕೆ ಪ್ರವೇಶ ನೀಡಲಾಗುತ್ತದೆ.

ಕೊಗನೊಳ್ಳಿ ಆರ್‌ಟಿಒ ಚೆಕ್​​ ಪೋಸ್ಟ್ ಮೇಲೆ‌ ಲೋಕಾಯುಕ್ತ ದಾಳಿ

ಮಹಾರಾಷ್ಟ್ರದಿಂದ ಹೋಗುವ ಬರುವ ಪ್ರಮುಖ ರಾಷ್ಟ್ರೀಯ ಹೆದ್ದಾರಿ ಆಗಿರುವುದರಿಂದ ಚೆಕ್ ಪೋಸ್ಟ್ ಮೂಲಕ ಸಾವಿರಾರು ವಾಹನಗಳಿಂದ ಅಧಿಕಾರಿಗಳು ಹಣ ವಸೂಲಿ ಮಾಡುತ್ತಾರೆ ಎಂಬ ದೂರುಗಳು ಕೇಳಿ ಬರುತ್ತಿದ್ದವು. ಹೀಗಾಗಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ‌ದ್ದು ಶೋಧ ಕಾರ್ಯಾಚರಣೆ ಮುಂದುವರೆಸಿದ್ದಾರೆ.

ಇದನ್ನೂ ಓದಿ: ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಜಿಲ್ಲಾ ಅಗ್ನಿಶಾಮಕ ಅಧಿಕಾರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.