ಬೆಳಗಾವಿ : ಕೊರೊನಾ ನಿಯಂತ್ರಿಸಲು ಬೆಳಗಾವಿ ಜಿಲ್ಲೆಯ ಐದು ತಾಲೂಕುಗಳ ವ್ಯಾಪ್ತಿಯಲ್ಲಿ ಲಾಕ್‌ಡೌನ್ ಜಾರಿಗೊಳಿಸಿ ಬೆಳಗಾವಿ ಜಿಲ್ಲಾಧಿಕಾರಿ ಎಂ ಜಿ ಹಿರೇಮಠ ಆದೇಶ ಹೊರಡಿಸಿದ್ದಾರೆ.
ಇಂದು ರಾತ್ರಿ 8ಗಂಟೆಯಿಂದಲೇ ಬೆಳಗಾವಿಯ 5 ತಾಲೂಕುಗಳಲ್ಲಿ ಲಾಕ್‌ಡೌನ್ ಜಾರಿಯಾಗಲಿದೆ. ಜುಲೈ 22ರ ಬೆಳಗ್ಗೆ 5ಗಂಟೆಯವರೆಗೆ ಲಾಕ್‌ಡೌನ್ ಇರಲಿದೆ. ಐದು ತಾಲೂಕುಗಳಲ್ಲಿ ಕೊರೊನಾ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ಜಿಲ್ಲಾಧಿಕಾರಿಗಳು ಈ ಕ್ರಮ ಕೈಗೊಂಡಿದ್ದಾರೆ.
ಗೋಕಾಕ್, ಮೂಡಲಗಿ,ಅಥಣಿ,ಕಾಗವಾಡ,ನಿಪ್ಪಾಣಿ ತಾಲೂಕಿನಲ್ಲಿ ಲಾಕ್‌ಡೌನ್ ಜಾರಿಗೊಳಿಸಲಾಗಿದೆ. ತುರ್ತು ಸೇವೆ ಹೊರತುಪಡಿಸಿ ಸಾರಿಗೆ ಸಂಚಾರ ಸಂಪೂರ್ಣ ನಿಷೇಧ ಹೇರಲಾಗಿದೆ. 5 ತಾಲೂಕುಗಳಲ್ಲಿ ಸರ್ಕಾರಿ ಬಸ್, ಆಟೋ, ಟ್ಯಾಕ್ಸಿಗಳ ಸಂಚಾರ ನಿಷೇಧಿಸಲಾಗಿದ್ದು, ಐದು ತಾಲೂಕು ಕೇಂದ್ರ ವ್ಯಾಪ್ತಿಯಲ್ಲಿ ದೇವಸ್ಥಾನ, ಧಾರ್ಮಿಕ ಕೇಂದ್ರಗಳು ಬಂದ್ ಆಗಿರಲಿದೆ.
ಲಾಕ್‌ಡೌನ್ ಆದ ಐದೂ ತಾಲೂಕುಗಳಲ್ಲಿ ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. ಬೆಳಗ್ಗೆ 5ರಿಂದ ಮಧ್ಯಾಹ್ನ 12ರವರೆಗೆ ಮಾತ್ರ ಪಡಿತರ ಅಂಗಡಿ ಓಪನ್ ಆಗಲಿದ್ದು, ಆದಷ್ಟು ಮನೆ ಬಾಗಿಲಿಗೆ ಅಗತ್ಯ ವಸ್ತು ಪೂರೈಕೆಗೆ ಪ್ರೋತ್ಸಾಹಿಸಲು ತಾಲೂಕಾಡಾಳಿತಕ್ಕೆ ಸಲಹೆ ನೀಡಲಾಗಿದೆ. ಲಾಕ್‌ಡೌನ್ ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ಡಿಸಿ ನೀಡಿದ್ದಾರೆ.