ಬೆಳಗಾವಿ : ದೇಶಾದ್ಯಂತ ಲಾಕ್ಡೌನ್ ಜಾರಿಗೊಳಿಸಿರುವ ಹಿನ್ನೆಲೆ ಬಾಳೆ ಮತ್ತು ತರಕಾರಿಗಳನ್ನು ಬೆಳೆದ ರೈತರು, ಅವುಗಳನ್ನು ಮಾರಾಟ ಮಾಡಲು ಸಾಗಿಸಲಾಗದೇ ನಷ್ಟ ಅನುಭವಿಸುತ್ತಿದ್ದಾರೆ.
ಜಿಲ್ಲೆಯ ಸವದತ್ತಿ ತಾಲೂಕಿನ ಬೂದಿಗೊಪ್ಪ ಗ್ರಾಮದ ಮಾರುತಿ ಪುಲ್ಲಿ ಎಂಬುವರು ತಮ್ಮ ಐದೂವರೆ ಎಕರೆ ಜಮೀನಿನಲ್ಲಿ ಬಾಳೆ ಬೆಳೆದಿದ್ದರು. ಆದರೆ, ಲಾಕ್ಡೌನ್ ಇರುವ ಕಾರಣ ಬಸ್, ವಾಹನ ಸಂಚಾರ ಬಂದ್ ಮಾಡಲಾಗಿದೆ. ಇದರಿಂದ ಬೆಳೆದ ತರಕಾರಿಗಳನ್ನು ಮಾರುಕಟ್ಟೆಗೆ ಸಾಗಿಸಲಾಗದೇ ನಷ್ಟದಲ್ಲಿದ್ದಾರೆ.
ವಾಹನ ಸಂಚಾರ ಇಲ್ಲದ ಕಾರಣ ಕೊಂಡುಕೊಳ್ಳುವವರ ಹಾಗೂ ತೆಗೆದುಕೊಳ್ಳುವವರ ಸಂಖ್ಯೆ ಕ್ಷೀಣಿಸಿದೆ. ಇದರಿಂದ ಬಾಳೆ ಮತ್ತು ತರಕಾರಿಗಳನ್ನು ಕೇಳುವವರೇ ಇಲ್ಲದಂತಾಗಿದೆ. ಇದರಿಂದ ರೈತನ ಬದುಕು ಸಾಲದಲ್ಲಿ ದೂಡಿದಂತಾಗಿದೆ. ಲಾಕ್ಡೌನ್ನಿಂದ ಅಂದಾಜು ರೈತನಿಗೆ ಹತ್ತು ಲಕ್ಷ ಹಾನಿಯಾಗಿದೆ. ಪರಿಹಾರಕ್ಕಾಗಿ ಸಿಎಂ ಯಡಿಯೂರಪ್ಪಗೆ ಮನವಿ ಮಾಡುತ್ತಿದ್ದಾರೆ.