ETV Bharat / state

ಮಹಿಳೆಯರಿಗೂ ರಾಜ್ಯದ ಮುಖ್ಯಮಂತ್ರಿ ಸ್ಥಾನ ಸಿಗಲಿ: ಕೋಡಿಮಠ ಸ್ವಾಮೀಜಿ - ಕೋಡಿಮಠದ ಡಾ ಶಿವಾನಂದ ಸ್ವಾಮೀಜಿ

ಶ್ರಾವಣ ಮಾಸದ ಮಧ್ಯದಲ್ಲಿ ಕಾರ್ತಿಕದೊಳಗೆ ಜಾಗತಿಕ ಮಟ್ಟದಲ್ಲಿ ವಿಪರೀತ ಮಳೆಯಾಗಲಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಯುದ್ಧ ಭೀತಿಯಿದೆ. ಭೂಕಂಪ, ಸುನಾಮಿಯಿಂದ ಜನರ ಸಾವು, ನೋವು ಸಂಭವಿಸಲಿವೆ ಎಂದು ಇದೇ ವೇಳೆ ಡಾ.ಶಿವಾನಂದ ಸ್ವಾಮೀಜಿ ಭವಿಷ್ಯ ನುಡಿದರು. ಮಹಿಳೆಯರಿಗೆ ಸಿಎಂ ಸ್ಥಾನದ ಕುರಿತೂ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

Dr Sivananda Swamiji of Kodimatha spoke to the media.
ಕೋಡಿಮಠದ ಡಾ ಶಿವಾನಂದ ಸ್ವಾಮೀಜಿ ಮಾಧ್ಯಮದವರ ಜೊತೆಗೆ ಮಾತನಾಡಿದರು.
author img

By

Published : Aug 20, 2023, 2:25 PM IST

ಕೋಡಿಮಠದ ಡಾ.ಶಿವಾನಂದ ಸ್ವಾಮೀಜಿ

ಬೆಳಗಾವಿ: ರಾಜ್ಯದಲ್ಲಿ ಮಹಿಳೆಯರಿಗೂ ಮುಖ್ಯಮಂತ್ರಿ ಆಗುವ ಯೋಗ ಕೂಡಿ ಬರಲಿ ಎಂದು ಕೋಡಿಮಠದ ಡಾ.ಶಿವಾನಂದ ಸ್ವಾಮೀಜಿ ಹೇಳಿದರು. ಬೆಳಗಾವಿಯಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಡೀ ರಾಜ್ಯವೇ ಈಗ ಮಹಿಳೆಯರದ್ದು. ಅವರಿಂದ ಎಲ್ಲವನ್ನೂ ಕಿತ್ತುಕೊಳ್ಳುವ ಕೆಲಸ ನಡೆಯುತ್ತಿದೆ. ಮಹಿಳೆಯರು ಮುಖ್ಯಮಂತ್ರಿ ಆದರೆ ತಪ್ಪೇನು? ಅವರಿಗೂ ಒಂದು ದಿನ ಅಧಿಕಾರ ಸಿಗಲಿ ಎಂದರು.

ನಾಯಕತ್ವ ಬದಲಾವಣೆ ವಿಚಾರಕ್ಕೆ, ರಾಜಕಾರಣದ ಬಗ್ಗೆ ಏನೂ ಹೇಳಲ್ಲ. ಆದರೆ, ಸರ್ಕಾರಕ್ಕೆ‌ ತೊಂದರೆಯಿಲ್ಲ. ಲೋಕಸಭೆ ಚುನಾವಣೆ ಫಲಿತಾಂಶದ ಬಗ್ಗೆ ಹೇಳಲು ಇನ್ನೂ ಸಮಯವಿದೆ, ನೋಡಿ ಹೇಳುತ್ತೇವೆ ಎಂದು ತಿಳಿಸಿದರು.

ದಕ್ಷಿಣ ಭಾರತ ಸಮೃದ್ಧಿಯಾಗುವ ಲಕ್ಷಣಗಳಿವೆ.‌‌ ಯಾವುದೇ ತೊಂದರೆಯಿಲ್ಲ. ಆದರೆ,
ಭೂಕಂಪನದಿಂದ ದೊಡ್ಡ ದೊಡ್ಡ ನಗರಗಳಿಗೆ ಅಪಾಯವಿದೆ. ಇದ್ದಕ್ಕಿದ್ದಂತೆ ಜನರ ಸಾವು ಸಂಭವಿಸುವ ಭೀತಿಯಿದೆ. ಜಾಗತಿಕ ಮಟ್ಟದಲ್ಲಿ ವಿಷಾನಿಲದ ಪರಿಣಾಮ ಭಾರತದ ಮೇಲೂ ಆಗಲಿದೆ. ಜಗತ್ತಿನ ಸಾಮ್ರಾಟರು ತಲ್ಲಣಗೊಳ್ಳುವ ಪ್ರಸಂಗವೂ ಬರಲಿದೆ ಎಂದು ಭವಿಷ್ಯ ನುಡಿದರು.

ದೈವ ಬಲ ಮನುಷ್ಯನಿಗೆ ಮುಖ್ಯವಾಗಿ ಇರಬೇಕು. ಯಾರು ದೈವಗಳನ್ನು ನಂಬುತ್ತಾರೆಯೋ ಅವರಿಗೆ ತೊಂದರೆಯಿಲ್ಲ. ಇಲ್ಲದಿದ್ದರೆ ಆಪತ್ತು, ಸಾವು ಸಂಭವಿಸುತ್ತವೆ. ಕೆಲವರಿಗೆ ದೈವಬಲ ಇದ್ದರೂ ತೊಂದರೆಯಾಗುತ್ತದೆ. ಪ್ರಕೃತಿ ನಿಯಮವದು. ಪ್ರಾಕೃತಿಕ ದೋಷದಿಂದಲೇ ಸಾವು-ನೋವು ಹೆಚ್ಚುತ್ತಿದೆ. ನಾವು ಸೇವಿಸುವ ಆಹಾರ ಪದ್ಧತಿ ಬದಲಾಗಿದೆ. ಮೊದಲು ಸೀಮೆ ಗೊಬ್ಬರ, ದನದ ಗೊಬ್ಬರ ಹಾಕಿ ಬೆಳೆ ಬೆಳೆಯಲಾಗುತ್ತಿತ್ತು. ಈಗ ಎಲ್ಲ ಆಹಾರ ಉತ್ಪನ್ನಗಳಿಗೆ ರಾಸಾಯನಿಕ ಸಿಂಪಡಣೆ ಮಾಡಲಾಗುತ್ತಿದೆ. ಹಣ್ಣಿಗೂ ರಾಸಾಯನಿಕ ಬೆರೆಸಲಾಗುತ್ತಿದೆ. ವಿಷವನ್ನೇ ಬಿತ್ತಿ, ವಿಷವನ್ನೇ ಬೆಳೆದು, ವಿಷವನ್ನೇ ಉಣ್ಣುವಾಗ ಆರೋಗ್ಯ ವೃದ್ಧಿ ಹೇಗೆ ಸಾಧ್ಯ ಎಂದು ಸ್ವಾಮೀಜಿ ಪ್ರಶ್ನಿಸಿದರು.

ಪ್ರಕೃತಿ ಕೂಡ ಮುನಿಸಿಕೊಳ್ಳುವ ಪರಿಸ್ಥಿತಿ ಇದೆ. ಗಿಡ-ಮರಗಳನ್ನು ಮನುಷ್ಯ ನಾಶ ಮಾಡುತ್ತಿದ್ದಾನೆ. ಪ್ರಕೃತಿಯ ದೋಷ ಮನುಕುಲಕ್ಕಿದೆ. ಮೊದಲು 40 ಅಡಿ ಬಾವಿ ಕೊರೆದಾಗ ಶುದ್ಧ ನೀರು ಸಿಗುತ್ತಿತ್ತು. ಆದರೆ ಈಗ ಸಾವಿರ ಅಡಿ ಕೊರೆದು ಕೊಳವೆ ಬಾವಿಯಿಂದ ಕಲ್ಲಿನ ನೀರು ಕುಡಿಯುತ್ತಿದ್ದೇವೆ. ಆ ನೀರಿನಲ್ಲಿ ಮಣ್ಣಿನ ಅಂಶವೇ ಇರುವುದಿಲ್ಲ. ಮಣ್ಣಿನ ಅಂಶ ಮನುಷ್ಯನ ಆರೋಗ್ಯಕ್ಕೆ ಅಗತ್ಯವಾಗಿ ಬೇಕು. ಹಾಗಾಗಿ ಮನುಷ್ಯನ ನರಗಳ ಶಕ್ತಿ ಮತ್ತು ದೃಷ್ಟಿ ದೋಷ ಕಡಿಮೆಯಾಗಿ ಆರೋಗ್ಯ ಸಮಸ್ಯೆ ಉದ್ಭವಿಸುತ್ತಿದೆ ಎಂದರು.

ವೇಗವಾಗಿ ಹಣ ಮಾಡಬೇಕು ಎಂಬ ಮನುಷ್ಯನ ಅತಿ ಆಸೆಯಿಂದಾಗಿಯೇ ಆಪತ್ತುಗಳು ಸಂಭವಿಸುತ್ತಿವೆ. ಇದರ ನಿಯಂತ್ರಣಕ್ಕೆ ಭಗವಂತನಿದ್ದಾನೆ. ಆದರೆ, ಮನುಷ್ಯ ದೇವರನ್ನೇ ಮರೆತ ಜನರು ಹಣದ ಹಿಂದೆ ಹೋಗುತ್ತಿದ್ದಾರೆ. ಆದರೆ ಜನರು ದೈವದ ಹಿಂದೆ ಹೋಗಬೇಕು. ಎಲ್ಲರೂ ದೈವದ ಮೇಲೆ ನಂಬಿಕೆ ಇಟ್ಟು ಜೀವನ ಮಾಡಬೇಕು ಎಂದು ಕೋಡಿಮಠದ ಸ್ವಾಮೀಜಿ ಕಿವಿಮಾತು ಹೇಳಿದರು.

ಇದನ್ನೂಓದಿ: ದೇವರಾಜ ಅರಸು ಕಾರಿನಲ್ಲಿ ಸಿಎಂ ವಿಧಾನಸೌಧ ರೌಂಡ್: 50 ವರ್ಷದ ಬೆಂಜ್‌ನಲ್ಲಿ ಸಂಚರಿಸಿ ಸಂತಸಪಟ್ಟ ಸಿದ್ದರಾಮಯ್ಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.