ETV Bharat / state

ಬೆಳಗಾವಿಯಲ್ಲಿ ಚಿರತೆ ಪ್ರತ್ಯಕ್ಷ: ಸೆರೆಗೆ ಗದಗ, ಭೀಮಗಡ ಅರಣ್ಯವಲಯದಿಂದ ತಜ್ಞ ಸಿಬ್ಬಂದಿ ಆಗಮನ..! - leopard spotted in belagavi

ಬೆಳಗಾವಿಯ ಕೆಲವು ಕಡೆಗಳಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಚಿರತೆ ಸೆರೆಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ಮುಂದುವರೆಸಿದ್ದಾರೆ.

leopard-spotted-in-belagavi
ಬೆಳಗಾವಿಯಲ್ಲಿ ಚಿರತೆ ಪ್ರತ್ಯಕ್ಷ : ಚಿರತೆ ಸೆರೆಗೆ ಗದಗ, ಭೀಮಗಡ ಅರಣ್ಯವಲಯದಿಂದ ತಜ್ಞ ಸಿಬ್ಬಂದಿಗಳ ಆಗಮನ..!
author img

By

Published : Aug 6, 2022, 9:46 AM IST

Updated : Aug 6, 2022, 10:29 AM IST

ಬೆಳಗಾವಿ : ಕುಂದಾನಗರಿಯ ಜಾಧವನಗರದಲ್ಲಿ ಚಿರತೆ ಪ್ರತ್ಯಕ್ಷವಾದ ಹಿನ್ನೆಲೆ ಚಿರತೆ ಸೆರೆಗೆ ಶೋಧ ಕಾರ್ಯಾಚರಣೆ ಮುಂದುವರಿದಿದ್ದು, ಚಿರತೆ ಪ್ರತ್ಯಕ್ಷವಾದ ಸ್ಥಳದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಬೋನು ಮತ್ತು ಕ್ಯಾಮೆರಾಗಳನ್ನು ಅಳವಡಿಸಿದ್ದಾರೆ.

ನಿನ್ನೆ ಜಿಲ್ಲೆಯ ಜಾಧವ್ ನಗರ ಮತ್ತು ವಿಶ್ವೇಶ್ವರಯ್ಯ ನಗರದಲ್ಲಿ ಚಿರತೆ ಪ್ರತ್ಯಕ್ಷವಾಗಿತ್ತು‌. ಅಲ್ಲದೇ ಕಟ್ಟಡ ಕಾರ್ಮಿಕ ಸಿದರಾಯಿ‌ ಮಿರಜಕರ್ ಎಂಬುವವರ ಮೇಲೆ ಚಿರತೆ ದಾಳಿ ಮಾಡಿತ್ತು. ದಾಳಿಯಲ್ಲಿ ಸಿದರಾಯಿ ಪ್ರಾಣಾಪಾಯದಿಂದ ಪಾರಾಗಿದ್ದರು. ಇನ್ನೊಂದೆಡೆ ಮಗನ ಮೇಲೆ ಚಿರತೆ ದಾಳಿ ನಡೆಸಿದ ಸುದ್ದಿ ಕೇಳಿ, ತಾಯಿ‌ ಶಾಂತಾ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.

ಬೆಳಗಾವಿಯಲ್ಲಿ ಚಿರತೆ ಪ್ರತ್ಯಕ್ಷ: ಸೆರೆಗೆ ಗದಗ, ಭೀಮಗಡ ಅರಣ್ಯವಲಯದಿಂದ ತಜ್ಞ ಸಿಬ್ಬಂದಿ ಆಗಮನ..!

ಈ ಚಿರತೆಯನ್ನು ಸೆರೆಹಿಡಿಯಲು ಕಾರ್ಯಾಚರಣೆ ನಡೆಸುತ್ತಿದ್ದು, ಬೋನಿನಲ್ಲಿ ನಾಯಿ ಇಟ್ಟು ಚಿರತೆ ಸೆರೆಗೆ ಕಾರ್ಯಾಚರಣೆ ಮುಂದುವರೆಸಲಾಗಿದೆ. ಚಿರತೆ ಸೆರೆಗೆ ಗದಗ, ಭೀಮಗಡ ಅರಣ್ಯವಲಯದಿಂದ ತಜ್ಞ ಸಿಬ್ಬಂದಿಗಳನ್ನು ಕರೆತರಲಾಗಿದೆ.

ಡಿಸಿ ನಿವಾಸದ ಹಿಂಬದಿಯ ಕ್ವಾಟರ್ಸ್ ನಲ್ಲೂ ಕಾಣಿಸಿಕೊಂಡ ಚಿರತೆ : ಇಲ್ಲಿನ ವಿಶ್ವೇಶ್ವರಯ್ಯ ನಗರದ ಡಿಸಿ ಮನೆಯ ಹಿಂಬದಿಯ ಕ್ವಾಟರ್ಸ್ ನಲ್ಲೂ ನಿನ್ನೆ ಸಂಜೆ ವೇಳೆ ಚಿರತೆ ಕಾಣಿಸಿಕೊಂಡಿರುವುದಾಗಿ ಹೇಳಲಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಸೆರೆಗೆ ಎರಡು ಕಡೆಗಳಲ್ಲೂ ಬೋನು ಅಳವಡಿಸಿದ್ದಾರೆ. ಸದ್ಯ ಜಾಧವ್ ನಗರ ಮತ್ತು ವಿಶ್ವೇಶ್ವರಯ್ಯ ನಗರದಲ್ಲಿ ಚಿರತೆ ಸೆರೆಗೆ ಬೋನು ಅಳವಡಿಸಲಾಗಿದೆ.

ಇತ್ತ ಚಿರತೆ ಪ್ರತ್ಯಕ್ಷವಾದ ಹಿನ್ನೆಲೆ ಮನೆಯಿಂದ ಯಾರು ಹೊರ ಬರದಂತೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಜಾಧವ್ ನಗರ, ಕ್ಯಾಂಪ್ ಪ್ರದೇಶ, ವಿಶ್ವೇಶ್ವರಯ್ಯ ನಗರ, ಹನುಮಾನ್ ನಗರದ ಜನರು ಹೊರಬಾರದಂತೆ ನಗರ ಪೊಲೀಸ್ ಆಯುಕ್ತ ಡಾ.ಎಂ.ಬಿ.ಬೋರಲಿಂಗಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಓದಿ : ಬಳ್ಳಾರಿ ಗುಡ್ಡದಲ್ಲಿ ಕಾಣಿಸಿಕೊಂಡ ಚಿರತೆ: ಆತಂಕದಲ್ಲಿ ಜನತೆ

Last Updated : Aug 6, 2022, 10:29 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.