ಅಥಣಿ: ಚುನಾವಣೆಯಲ್ಲಿ ನೀವೇ ಸ್ಪರ್ಧಿಸುವಂತೆ ಡಿಸಿಎಂ ಲಕ್ಷ್ಮಣ್ ಸವದಿ ಅವ ಮನೆ ಮುಂದೆ ಅಭಿಮಾನಿಗಲೂ, ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಅಥಣಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಮಹೇಶ್ ಕುಮಟಳ್ಳಿ ಪರ ಆರ್.ಎನ್.ಕುಲಕರ್ಣಿ ಸಭಾಭವನದಲ್ಲಿ ಚುನಾವಣಾ ತಯಾರಿ ಸಭೆ ಏರ್ಪಡಿಸಲಾಗಿತ್ತು. ಸಭೆಗ ತೆರಳದಂತೆ ಲಕ್ಷ್ಮಣ್ ಸವದಿ ಅವರ ನಿವಾಸದ ಮುಂದೆ ಅಭಿಮಾನಿಗಳು ಪ್ರತಿಭಟಿಸಿದರು. ನಿಮಗೆ ಟಿಕೆಟ್ ನೀಡದಿದ್ದರೆ ನಮಗೆ ಚುನಾವಣೆ ಬೇಡ, ನೀವು ಆ ಸಭೆಯಲ್ಲಿ ಭಾಗವಹಿಸಬಾರದು ಎಂದು ಡಿಸಿಎಂ ಮನೆ ಎದುರು ಎರಡು ಗಂಟೆಗಳ ಕಾಲ ಪ್ರತಿಭಟನೆ ಮಾಡಿದರು.
ಪ್ರತಿಭಟನೆ ಕಾವು ತೀವ್ರ ಸ್ವರೂಪಕ್ಕೆ ಏರ್ಪಟ್ಟಿದ್ದರಿಂದ ಅಥಣಿಯಿಂದ ಜಮಖಂಡಿ ಮಾರ್ಗದಲ್ಲಿ ಒಂದು ಗಂಟೆವರೆಗೆ ಟ್ರಾಫಿಕ್ ಜಾಮ್ ನಿರ್ಮಾಣವಾಯಿತು. ನಂತರ ಅಥಣಿ ಪೊಲೀಸರ ಸಹಾಯದಿಂದ ಟ್ರಾಫಿಕ್ ಜಾಮ್ ತೆರವುಗೊಳಿಸಲಾಯಿತು.