ETV Bharat / state

ಮೈದಾನ ಖಾಲಿ ಇದೆ.. ನಾವೂ ತಯಾರಿದ್ದೇವೆ ನೀವು ಅಖಾಡಕ್ಕೆ ಧುಮುಕಿ: ಲಕ್ಷ್ಮೀ ‌ಹೆಬ್ಬಾಳ್ಕರ್ ಟಾಂಗ್​

ಮುಂದಿನ ಚುನಾವಣೆ ಕುರಿತು ಬೆಳಗಾವಿ ನಗರದಲ್ಲಿ ಪ್ರತಿಕ್ರಿಯೆ ನೀಡಿದ ಲಕ್ಷ್ಮೀ ‌ಹೆಬ್ಬಾಳ್ಕರ್, "ಮೈದಾನ್ ಓಪನ್ ಹೈ, ಖುಲ್ಲಾ ಹೈ, ಹಮ್ ಬಿ ತಯಾರ್ ಹೈ ಆಪ್ ಬೀ ಖುದೋ ಮೈದಾನ್ ಮೇ". ಅಖಾಡ ತೆರೆದಿದೆ, ನಾವೂ ತಯಾರಿದ್ದೇವೆ ನೀವು ಅಖಾಡಕ್ಕೆ ಧುಮುಕಿ ಎಂದು ಪರೋಕ್ಷವಾಗಿ ರಮೇಶ್ ಜಾರಕಿಹೊಳಿಗೆ ಹೆಬ್ಬಾಳ್ಕರ್ ಆಹ್ವಾನ ನೀಡಿದ್ದಾರೆ.

Lakshmi Hebbalkar
ಲಕ್ಷ್ಮೀ ‌ಹೆಬ್ಬಾಳ್ಕರ್
author img

By

Published : Dec 5, 2022, 3:36 PM IST

ಚಿಕ್ಕೋಡಿ: ಮೈದಾನ್ ಓಪನ್ ಹೈ, ಖುಲ್ಲಾ ಹೈ, ಹಮ್ ಬಿ ತಯಾರ್ ಹೈ ಆಪ್ ಬೀ ಖುದೋ ಮೈದಾನ್ ಮೇ' ಮೈದಾನ ತಯಾರಿದೆ ಅಖಾಡಕ್ಕೆ ಧುಮುಕಿ ಎಂದು ರಾಜಕೀಯ ವಿರೋಧಿಗಳಿಗೆ ಲಕ್ಷ್ಮೀ ಹೆಬ್ಬಾಳ್ಕರ್​​ ಸವಾಲು ಹಾಕಿದ್ದಾರೆ.

ಚುನಾವಣೆ ಸಮೀಪಿಸುತ್ತಿದ್ದಂತೆ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ರಮೇಶ್ ಜಾರಕಿಹೊಳಿ ವಿಚಾರವಾಗಿ ಬೆಳಗಾವಿ ನಗರದಲ್ಲಿ ಪ್ರತಿಕ್ರಿಯೆ ನೀಡಿದ ಲಕ್ಷ್ಮೀ ‌ಹೆಬ್ಬಾಳ್ಕರ್, "ಮೈದಾನ್ ಓಪನ್ ಹೈ, ಖುಲ್ಲಾ ಹೈ, ಹಮ್ ಬಿ ತಯಾರ್ ಹೈ ಆಪ್ ಬೀ ಖುದೋ ಮೈದಾನ್ ಮೇ" ಅಖಾಡ ತೆರೆದಿದೆ, ನಾವೂ ತಯಾರಿದ್ದೇವೆ ನೀವು ಅಖಾಡಕ್ಕೆ ಧುಮುಕಿ ಎಂದು ಪರೋಕ್ಷವಾಗಿ ಪಂಥಾಹ್ವಾನ ನೀಡಿದ್ದಾರೆ.

ಲಕ್ಷ್ಮೀ ‌ಹೆಬ್ಬಾಳ್ಕರ್
ಎಲೆಕ್ಷನ್ ಗೆದ್ದ ಮಾರನೇ ದಿನದಿಂದ ನಾನು ಎಲೆಕ್ಷನ್‌‌ಗೆ ತಯಾರಿ ನಡೆಸಿದ್ದೇನೆ. ಈಗ ಚುನಾವಣೆಗೆ 90 ದಿನ ಇದೆ ಅಂತಾ ತಯಾರಿ ನಡೆಸುತ್ತಿಲ್ಲ. ಈಗ ಬಂದು ನಾನು ಬಿಲ್ಲು, ಬಾಣ, ಬತ್ತಳಿಕೆ ಅಂತೆಲ್ಲಾ ಇಲ್ಲ. ಚುನಾವಣೆ ಗೆದ್ದ ಮಾರನೇ ದಿನವೇ ನನ್ನ ಹುಟ್ಟಿದ ದಿನಾಂಕವನ್ನು ಮತದಾರರಿಗೋಸ್ಕರ ಬದಲಾವಣೆ ಮಾಡಿಕೊಂಡಿದ್ದೇನೆ.

ನನಗೆ ಪುನರ್ಜನ್ಮ ಕೊಟ್ಟ ಕ್ಷೇತ್ರ ಎಂಬ ಕಾರಣಕ್ಕಾಗಿಯೇ ಚುನಾವಣೆಯನ್ನು ಯಾವ ರೀತಿ ಗೆಲ್ಲಬೇಕು, ಜನರ ಮನಸ್ಸು ಯಾವ ರೀತಿ ಗೆಲ್ಲಬೇಕು ಎಂಬುದರ ಬಗ್ಗೆ ಕಳೆದ ನಾಲ್ಕೂವರೆ ವರ್ಷಗಳಿಂದ ಶ್ರಮಿಸುತ್ತಲೇ ಬಂದಿದ್ದೇನೆ ಎಂದರು. ಗ್ರಾಮೀಣ ಕ್ಷೇತ್ರದ ಮೇಲೆ ಹಲವರು ಕಣ್ಣು ಹಾಕಿದ್ದಾರೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಭವಿಷ್ಯ ಅಂತೂ ನಾನು ಹೇಳಲ್ಲ. ಮುಂದೆ ನೀವೇ ನೋಡ್ತಿರಿಲ್ಲ ಎಲೆಕ್ಷನ್ ರಿಸಲ್ಟ್ ಬಂದ ಮೇಲೆ ಎಲ್ಲಾ ಗೊತ್ತಾಗುತ್ತದೆ. ಅಲ್ಲಿವರೆಗೂ ಕಾಯಬೇಕಷ್ಟೇ ಎಂದು ಹೇಳಿದರು.

ಇದನ್ನೂ ಓದಿ:ರಾಜಕೀಯ ಬದ್ಧವೈರಿ ಲಕ್ಷ್ಮೀ ಹೆಬ್ಬಾಳ್ಕರ್ ಸೋಲಿಸಲು ಗೋಕಾಕ್​ ಸಾಹುಕಾರ್ ಸ್ಕೆಚ್?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.