ETV Bharat / state

ಕಾಂಗ್ರೆಸ್​ನಲ್ಲಿ ಟಿಕೆಟ್ ಸಿಗದಿದ್ದರೆ ಸವದಿ ಜೆಡಿಎಸ್​ನಿಂದ ಸ್ಪರ್ಧಿಸುತ್ತಿದ್ದರು: ಲಖನ್ ಜಾರಕಿಹೊಳಿ

ಅಥಣಿ ಕ್ಷೇತ್ರದಲ್ಲಿ ಬಿಜೆಪಿ ಪರ ಅಲೆ ಇರುವುದರಿಂದ ಮಹೇಶ್ ಕುಮಟಳ್ಳಿ ಬಗ್ಗೆ ಲಕ್ಷ್ಮಣ ಸವದಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಎಂಎಲ್​ಸಿ ಲಖನ್ ಜಾರಕಿಹೊಳಿ ಆರೋಪಿಸಿದರು.

lakhan jarkiholi
ಲಖನ್ ಜಾರಕಿಹೊಳಿ
author img

By

Published : May 8, 2023, 9:57 AM IST

ಚಿಕ್ಕೋಡಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಲಖನ್ ಜಾರಕಿಹೊಳಿ

ಚಿಕ್ಕೋಡಿ : ಬಿಜೆಪಿಯಲ್ಲಿ ಅಧಿಕಾರ ಅನುಭವಿಸಿ ಹೋದ ಲಕ್ಷ್ಮಣ ಸವದಿ ಅವರು ಮಹೇಶ್​ ಕುಮಟಳ್ಳಿ ಹೆಸರು ಕೆಡಿಸುವ ಕೆಲಸ ಮಾಡ್ತಿದ್ದಾರೆ. ನಾನು ಎಂಎಲ್​ಸಿ ಆಗಿರುವುದರಿಂದ ಎಲ್ಲೆಲ್ಲಿ ಬಿಜೆಪಿಯವರು ಕರೆಯುತ್ತಾರೆ ಅಲ್ಲಿ ಪ್ರಚಾರಕ್ಕೆ ಹೋಗ್ತೀನಿ. ನನ್ನ ಬೆಂಬಲವನ್ನು ಸೂಚಿಸುತ್ತೇನೆ ಎಂದು ಲಖನ್ ಜಾರಕಿಹೊಳಿ ಹೇಳಿದರು.

ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ನಾವು ಅಥಣಿ ಹಾಗೂ ಬೆಳಗಾವಿ ಗ್ರಾಮೀಣ ಭಾಗದಲ್ಲಿ ಗೆಲುವು ಸಾಧಿಸುತ್ತೇವೆ, 14 ಸ್ಥಾನವನ್ನು ಗೆಲ್ಲುತ್ತೇವೆ. ಅಭಿವೃದ್ಧಿ ಸಲುವಾಗಿ ರಮೇಶ್​ ಜಾರಕಿಹೊಳಿ ಅವರು ಅಥಣಿಗೆ ಬರ್ತಾರೆಯೇ ಹೊರತು, ಬೇರೆ ಯಾವ ಉದ್ದೇಶಕ್ಕೂ ಅಲ್ಲ. ಬಿಜೆಪಿ ಪಕ್ಷವು ಡಿಸಿಎಂ ಮಾಡಿ ಸಚಿವರನ್ನಾಗಿ ಮಾಡಿದಾಗ ಬೇಡ ಎಂದು ಅನ್ನಬೇಕಿತ್ತು. ಐದೂವರೆ ವರ್ಷ ಅಧಿಕಾರ ಅವಧಿ ಇಟ್ಟಿಕೊಂಡು ಪಕ್ಷಕ್ಕೆ ದ್ರೋಹ ಬಗೆದು ಕಾಂಗ್ರೆಸ್ ಸೇರಿ, ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ ಎನ್ನುವುದು ಯಾವ ಲೆಕ್ಕ" ಎಂದು ಲಕ್ಷ್ಮಣ ಸವದಿ ಅವರನ್ನು ಪ್ರಶ್ನೆ ಮಾಡಿದರು.

ಅಥಣಿ, ಗೋಕಾಕ್ ರಿಪಬ್ಲಿಕ್ ಆಗುತ್ತೆ ಎಂದು ಮಹೇಶ್​ ಬಗ್ಗೆ ಕಾಂಗ್ರೆಸ್ಸಿನವರು ಅಪಪ್ರಚಾರ ಮಾಡ್ತಿದ್ದಾರೆ. ರಮೇಶ್‌ ಜಾರಕಿಹೊಳಿ ಅವರು ಆರು ಬಾರಿ ಗೋಕಾಕ್​ ಕ್ಷೇತ್ರ ಗೆದ್ದ ಜನಪರ ಕೆಲಸಗಾರ. ಇಗೀನ ಕಾಲದಲ್ಲಿ ದಬ್ಬಾಳಿಕೆ, ಗುಂಡಾಗಿರಿ ಏನೂ ನಡೆಯಲ್ಲ, ಸುಮ್ಮನೆ ಅಪಪ್ರಚಾರ ಮಾಡಿ ಮತದಾರರ ಮನಸ್ಸು, ದಾರಿ ತಪ್ಪಿಸುವ ಕೆಲಸ ಮಾಡ್ತಿದ್ದಾರೆ. ಸವದಿ ಅವರು ನೇರವಾಗಿ ಇಷ್ಟು ದಿನ ಬಿಜೆಪಿಯಲ್ಲಿ ಎಲ್ಲಿ ಬೇಕೋ ಅಲ್ಲಿ ಡ್ಯಾಮೇಜ್ ಮಾಡಿ, ಕಾಂಗ್ರೆಸ್​ಗೆ ಹೋಗಿದ್ದಾರೆ. ಅಲ್ಲಿಯೂ ಕೂಡ ಟಿಕೆಟ್ ಸಿಗದಿದ್ರೆ ಜೆಡಿಎಸ್ ಪಕ್ಷ ಸೇರ್ತಿದ್ರು ಎಂದು ವ್ಯಂಗ್ಯವಾಡಿದರು.

ಇದನ್ನೂ ಓದಿ : ಸವದಿ ಸೋಲಿಸಲು ಅಥಣಿ ಜನ ತಯಾರಾಗಿ ಕುಳಿತಿದ್ದಾರೆ: ರಮೇಶ್ ಜಾರಕಿಹೊಳಿ

ನಂತರ ಮಾತನಾಡಿದ ಬಿಜೆಪಿ ಅಭ್ಯರ್ಥಿ ಮಹೇಶ್​ ಕುಮಟಳ್ಳಿ, "ಕ್ಷೇತ್ರದಲ್ಲಿ ಬಿಜೆಪಿ ಪರವಾಗಿ ಅಲೆ ಇರುವುದರಿಂದ ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಪ್ರಚಾರಕ್ಕೆಂದು ನಾನು ನಾಗನೂರ ಪಿ.ಕೆ. ಗ್ರಾಮಕ್ಕೆ ಹೋದಾಗ ಕೆಲವರು ಅಡಚಣೆ, ದಬ್ಬಾಳಿಕೆ ಮಾಡಿದರು. ನನ್ನಂತರ ಒಬ್ಬ ಅಭ್ಯರ್ಥಿಗೆ ಈ ತರ ಮಾಡ್ತಾರೆ ಅಂದ್ರೆ ಇನ್ನೂ ಸಾಮಾನ್ಯರಿಗೆ ಹೇಗೆ ಎಂದು ಅರ್ಥ ಮಾಡಿಕೊಳ್ಳಿ, ನನ್ನ ಸ್ವಗ್ರಾಮ ತೆಲಸಂಗದ ಅಭಿಮಾನಿಗಳು ನಾವೂ ಸಹ ಅವರಿಗೆ ಅದೇ ರೀತಿ ಮಾಡ್ತೀವಿ ಎಂದಾಗ ನಾನೇ ಅವರಿಗೆ ಹಾಗೆ ಮಾಡುವುದು ಬೇಡ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಗುಂಡಾಗಿರಿ ಪ್ರವೃತ್ತಿ ಇರಬಾರದೆಂದು ತಿಳಿಸಿದೆ" ಎಂದರು.

ಇದನ್ನೂ ಓದಿ : ಅಥಣಿಯಲ್ಲಿ ಒಂದು ಕಡೆ ಚುನಾವಣೆ ಕಾವು, ಮತ್ತೊಂದು ಕಡೆ ಸಮಸ್ಯೆಗಳ ಸರಮಾಲೆ : ಸ್ಥಳೀಯರ ಅಭಿಪ್ರಾಯವೇನು?

ಅಥಣಿ ಮತಕ್ಷೇತ್ರದಲ್ಲಿ ಶಾಸಕನಾಗಿ ನಾನು ಸಾವಿರಾರು ಕೋಟಿ ರೂ. ಅನುದಾನ ತಂದು ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಕಾರಣ ರಮೇಶ್​ ಜಾರಕಿಹೊಳಿ ಅವರು. ಈ ಹಿಂದೆ ಡಿಸಿಎಂ ಆಗಿದ್ದ ಲಕ್ಷ್ಮಣ ಸವದಿ ಅವರೇಕೆ ಕ್ಷೇತ್ರಕ್ಕೆ ಬೇಕಾದ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಿಲ್ಲ ಎಂದು ಟೀಕಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.