ಬೆಳಗಾವಿ: ಜಿಲ್ಲೆಯಲ್ಲಿ ಇಂದು ಲಾಕ್ ಡೌನ್ ಹಿನ್ನೆಲೆಯಲ್ಲಿ ಇಲ್ಲಿಂದ ಇತರ ತಾಲೂಕುಗಳಿಗೆ ಹೊರಡುವ ಬಸ್ ಸಂಚಾರ ಸಂಪೂರ್ಣ ಬಂದ್ ಆಗಿದ್ದು ಸರ್ಕಾರಿ ನೌಕರರು ನಿಲ್ದಾಣದಲ್ಲಿಯೇ ಬಸ್ಗಾಗಿ ಕಾಯುವಂತಾಗಿದೆ.
ಸರ್ಕಾರದ ಕೆಲವೊಂದು ಇಲಾಖೆ ನೌಕರರಿಗೆ ರಜೆ ಘೋಷಣೆ ಮಾಡದ ಹಿನ್ನೆಲೆಯಲ್ಲಿ ನೌಕರರು ಡ್ಯೂಟಿಗೆ ತೆರಳಲು ಆಗದೇ ಇತ್ತ ಮನೆಗೆ ತೆರಳಲು ಆಗದೇ ಇಂದು ಬೆಳಗ್ಗೆ 6ರಿಂದಲೇ ಬಸ್ ನಿಲ್ದಾಣದಲ್ಲಿ ಪರದಾಡಿದ್ದಾರೆ.
ಆರೋಗ್ಯ ಇಲಾಖೆ, ಬ್ಯಾಂಕ್ ಅಧಿಕಾರಿಗಳು ಹಾಗೂ ಪಶುಸಂಗೋಪನೆ ಇಲಾಖೆ ಸೇರಿದಂತೆ ಇತರ ಸರ್ಕಾರಿ ಸೇವೆ ಸಲ್ಲಿಸುವ ಸಿಬ್ಬಂದಿ ಜಿಲ್ಲೆಯ ಸವದತ್ತಿ, ಬೈಲಹೊಂಗಲ, ಗೋಕಾಕ, ಕಿತ್ತೂರು ಸೇರಿದಂತೆ ವಿವಿಧ ತಾಲೂಕುಗಳ ಕೆಲಸಕ್ಕೆ ತೆರಳಬೇಕಿದ್ದ ನೌಕರರು ಪರದಾಡುವಂತಾಗಿದೆ.