ಚಿಕ್ಕೋಡಿ: ಮಹಾರಾಷ್ಟ್ರದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿರುವ ಹಿನ್ನೆಲೆ ವಿವಿಧ ಡ್ಯಾಂಗಳಿಂದ ಹರಿದು ಬರುವ ನೀರಿನ ಪ್ರಮಾಣ ಕಡಿಮೆಯಾಗಿದ್ದು, ಕೃಷ್ಣಾ, ವೇದಗಂಗಾ ಹಾಗೂ ದೂಧ್ಗಂಗಾ ನದಿಗಳ ಒಳ ಹರಿವಿನಲ್ಲೂ ಇಳಿಮುಖ ಕಂಡಿದೆ. ಸದ್ಯ ಕೃಷ್ಣಾ ನದಿ ಒಳಹರಿವು 39,000ಕ್ಕೂ ಅಧಿಕವಾಗಿದೆ ಎಂದು ತಹಶೀಲ್ದಾರ್ ಶುಭಾಶ್ ಸಂಪಗಾಂವಿ ತಿಳಿಸಿದ್ದಾರೆ.
ಮಹಾರಾಷ್ಟ್ರದ ರಾಜಾಪುರ ಜಲಾಶಯದಿಂದ 35,000 ಕ್ಯೂಸೆಕ್, ದೂಧ್ಗಂಗಾ ನದಿಯಿಂದ 4,224 ಕ್ಯೂಸೆಕ್ ನೀರು ಸೇರಿ ಒಟ್ಟು 39 ಸಾವಿರ ಕ್ಯೂಸೆಕ್ಗೂ ಅಧಿಕ ನೀರು ಕೃಷ್ಣಾ ನದಿಗೆ ಹರಿದು ಬರುತ್ತಿದೆ.
ಸದ್ಯ ಕೊಯ್ನಾ ಜಲಾಶಯ - 99%, ವಾರಣಾ ಜಲಾಶಯ - 100%, ರಾಧಾನಗರಿ ಜಲಾಶಯ 92%, ಕಣೇರ ಜಲಾಶಯ 100%, ಧೂಮ ಜಲಾಶಯ 100% ಹಾಗೂ ಪಾಟಗಂವ ಜಲಾಶಯ 67% ಭರ್ತಿಯಾಗಿದೆ. ಹಿಪ್ಪರಗಿ ಬ್ಯಾರೇಜ್‌ನಿಂದ 44,000 ಕ್ಯೂಸೆಕ್ ಹಾಗೂ ಆಲಮಟ್ಟಿ ಜಲಾಶಯದಿಂದ 77,000 ಕ್ಯೂಸೆಕ್ ನೀರು ಹೊರಗಡೆ ಬಿಡಲಾಗುತ್ತಿದೆ.