ಅಥಣಿ(ಬೆಳಗಾವಿ) : ತಾಲೂಕಿನ ಗಡಿನಾಡಿನ ಶಕ್ತಿ ದೇವತೆ ಕೋಕಟನೂರ ಯಲ್ಲಮ್ಮ ದೇವಿಯ ಜಾತ್ರೆ ರದ್ದು ಪಡಿಸಲಾಗಿದೆ ಎಂದು ಬೆಳಗಾವಿ ಜಿಲ್ಲಾಧಿಕಾರಿ ಎಂ ಜಿ ಹಿರೇಮಠ ಆದೇಶ ಹೊರಡಿಸಿದ್ದಾರೆ.
ಪ್ರತಿ ವರ್ಷವೂ ಎಳ್ಳು ಅಮವಾಸ್ಯೆಯ ಐದು ದಿನದ ಮುಂಚಿತವಾಗಿ ಅದ್ದೂರಿಯಾಗಿ ಜಾತ್ರೆ ಪ್ರಾರಂಭಿಸಿ ಆಚರಿಸಿಕೊಂಡು ಬರಲಾಗುತ್ತಿತ್ತು. ಕೊರೊನಾ ಸೋಂಕು ಹಿನ್ನೆಲೆ, ಸರಳವಾಗಿ ಜಾತ್ರೆ ನಡೆಸಬೇಕೆಂದು ಬೆಳಗಾವಿ ಜಿಲ್ಲಾಧಿಕಾರಿ ಮಾರ್ಗದರ್ಶನ ನೀಡಿದ್ದಾರೆ.
ಇದನ್ನೂ ಓದಿ: ಸುವರ್ಣಸೌಧದಲ್ಲಿ 2 ವರ್ಷದಿಂದ ನಡೆಯದ ಚಳಿಗಾಲದ ಅಧಿವೇಶನ.. ಉ-ಕ ನಿರ್ಲಕ್ಯಕ್ಕೆ ಇದೇ ಸಾಕ್ಷಿ!!
ಪ್ರತಿ ವರ್ಷ ಲಕ್ಷಾಂತರ ಭಕ್ತರು ಜೊತೆಯಾಗಿ ಯಲ್ಲಮವಾಡಿ ಜಾತ್ರೆಯನ್ನೂ ಆಚರಿಸಿಕೊಂಡು ಬರಲಾಗುತ್ತಿತ್ತು, ಪಕ್ಕದ ಮಹಾರಾಷ್ಟ್ರ, ತೆಲಂಗಾಣ, ಆಂಧ್ರ ಹಾಗೂ ವಿವಿಧ ರಾಜ್ಯಗಳಿಂದ ಭಕ್ತರು ಆಗಮಿಸುತ್ತಿದ್ದರು.
ಕೊರೊನಾ ಸೋಂಕು ತಡೆಗಟ್ಟಲು ಜನಸಾಮಾನ್ಯರ ಆರೋಗ್ಯ ಹಿತದೃಷ್ಟಿಯಿಂದ ನಿಯಮವಾಗಿ ಅತೀ ಸರಳವಾಗಿ ಜಾತ್ರೆ ನಡೆಸಬೇಕೆಂದು ಜಿಲ್ಲಾಡಳಿತ ದೇವಸ್ಥಾನದ ಆಡಳಿತ ಮಂಡಳಿಗೆ ಸೂಚನೆ ನೀಡಿದೆ. ಸರಳ ಜಾತ್ರೆಯಲ್ಲೂ ತಪ್ಪದೆ ಕೋವಿಡ್ ನಿಯಮಗಳನ್ನು ಪಾಲಿಸುವಂತೆ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.