ಬೆಳಗಾವಿ : ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಬರಗಾಲದ ಛಾಯೆ ಆವರಿಸಿದ್ದು, ಕುಡಿಯಲು ನೀರಿಲ್ಲದೆ ಜನರು ಪರಿತಪಿಸುತ್ತಿದ್ದಾರೆ. ತಕ್ಷಣ ಸವದತ್ತಿ, ಗೋಕಾಕ್ ಹಾಗೂ ರಾಮದುರ್ಗ ತಾಲೂಕುಗಳಿಗೆ ರಾಮೇಶ್ವರ ಏತ ನೀರಾವರಿ ಮೂಲಕ ಕೆರೆ ಹಾಗೂ ಕಾಲುವೆಗಳಿಗೆ ನೀರು ಬಿಡುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ರಾಮದುರ್ಗ, ಗೋಕಾಕ್ ಹಾಗೂ ಸವದತ್ತಿಯ ಸುಮಾರು 30ಕ್ಕೂ ಅಧಿಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಜನ ಜಾನುವಾರುಗಳಿಗೆ ನೀರಿಲ್ಲದೆ ಪರದಾಡುತ್ತಿದ್ದು ನೀರಿನ ಮೂಲ ಹಿಡಿದು ತಿರುಗಾಡುವಂತಾಗಿದೆ. ತಕ್ಷಣ ರಾಮೇಶ್ವರ ಏತ ನೀರಾವರಿ ಮೂಲ ನೀರು ಹರಿಸುವಂತೆ ರೈತರು ಒತ್ತಾಯಿಸಿದ್ದಾರೆ.
ಹಿಡಕಲ್ ಜಲಾಶಯದಿಂದ ಘಟಪ್ರಭಾ ನದಿಗೆ ಪ್ರತಿ ದಿನ 2 ಸಾವಿರ ಕ್ಯೂಸೆಕ್ ನೀರು ಹರಿದರೆ ಮಾತ್ರ 4 ದಿನಗಳಲ್ಲಿ ನೀರು ತಲುಪಲು ಸಾಧ್ಯ. ಜಲಾಶಯಗಳಿಂದ ಜಾಕ್ವೆಲ್ವರೆಗೆ ಸಾವಿರಾರು ರೈತರು ಪಂಪ್ಸೆಟ್ ಅಳವಡಿಕೆ ಮಾಡಿದ್ದು, ಇದರಿಂದ ನಮಗೆ ನೀರು ತಲುಪುವುದಿಲ್ಲ. ಆದ್ದರಿಂದ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರೈತರು ಮನವಿ ಮಾಡಿಕೊಂಡರು.